'ನಮ್ಮ ಮೆಟ್ರೊ'ದಲ್ಲಿ ಮೂತ್ರಪಿಂಡ ಸಾಗಣೆ
ಬೆಂಗಳೂರು: ಕೋಲಾರದ ಜಾಲಪ್ಪ ಆಸ್ಪತ್ರೆಯಿಂದ ಬೆಂಗಳೂರಿನ ನಾಗರಭಾವಿಯ ಫೋರ್ಟಿಸ್ ಆಸ್ಪತ್ರೆಗೆ ಮೂತ್ರಪಿಂಡ ವನ್ನು ತ್ವರಿತವಾಗಿ ಸಾಗಿಸಲು ನಮ್ಮ ಮೆಟ್ರೊ ನೆರವು ನೀಡಿತು.ಬೆನ್ನಿಗಾನಹಳ್ಳಿ ಮತ್ತು ಅತ್ತಿಗುಪ್ಪೆ ಮೆಟ್ರೊ ನಿಲ್ದಾಣಗಳ ನಡುವಿನ ಪ್ರಯಾಣವನ್ನು 37ನಿಮಿಷಗಳಲ್ಲಿ ಪೂರ್ಣಗೊಳಿಸಲಾಯಿತು. ಬೆನ್ನಿಗಾನಹಳ್ಳಿ ನಿಲ್ದಾಣದಿಂದ ಮಧ್ಯಾಹ್ನ 2.58ಕ್ಕೆ ಹೊರಟು 3.35ಕ್ಕೆ&nb

ಬೆಂಗಳೂರು: ಕೋಲಾರದ ಜಾಲಪ್ಪ ಆಸ್ಪತ್ರೆಯಿಂದ ಬೆಂಗಳೂರಿನ ನಾಗರಭಾವಿಯ ಫೋರ್ಟಿಸ್ ಆಸ್ಪತ್ರೆಗೆ ಮೂತ್ರಪಿಂಡ ವನ್ನು ತ್ವರಿತವಾಗಿ ಸಾಗಿಸಲು ನಮ್ಮ ಮೆಟ್ರೊ ನೆರವು ನೀಡಿತು.ಬೆನ್ನಿಗಾನಹಳ್ಳಿ ಮತ್ತು ಅತ್ತಿಗುಪ್ಪೆ ಮೆಟ್ರೊ ನಿಲ್ದಾಣಗಳ ನಡುವಿನ ಪ್ರಯಾಣವನ್ನು 37ನಿಮಿಷಗಳಲ್ಲಿ ಪೂರ್ಣಗೊಳಿಸಲಾಯಿತು. ಬೆನ್ನಿಗಾನಹಳ್ಳಿ ನಿಲ್ದಾಣದಿಂದ ಮಧ್ಯಾಹ್ನ 2.58ಕ್ಕೆ ಹೊರಟು 3.35ಕ್ಕೆ ಅತ್ತಿಗುಪ್ಪೆ ನಿಲ್ದಾಣ ತಲುಪಿತು.ಈ ಹಿಂದೆ ಒಂದು ಯಕೃತ್ತು, ನಾಲ್ಕು ಹೃದಯಗಳು ಮತ್ತು ಒಂದು ಜೋಡಿ ಶ್ವಾಸಕೋಶಗಳನ್ನು ಮೆಟ್ರೊ ಮೂಲಕ ಸಾಗಾಟ ಮಾಡಲಾಗಿತ್ತು. ಈ ಮೂತ್ರಪಿಂಡ ಸಾಗಣೆ ಸಹಿತ ಇದುವರೆಗೆ ನಮ್ಮ ಮೆಟ್ರೊ ಏಳು ಜೀವ ಉಳಿಸುವ ಅಂಗಾಂಗಗಳ ಸಾಗಣೆಗೆ ನೆರವಾಗಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
Read the complete story at Prajavani