ಉತ್ತಮ ಪ್ರದರ್ಶನ ನೀಡಿ ವಾರದ ಕ್ಯಾಪ್ಟನ್ ಆದ ಜಗ್ಗ ಮಮ್ಮಿ @ ಜಗದೀಶ್
ಬಿಗ್ಬಾಸ್ ಕನ್ನಡ ಸೀಸನ್ 13ರ ಈ ವಾರ ಅದ್ಭುತವಾಗಿ ಆಡಿ ಮುಂದಿನ ವಾರದ ಕ್ಯಾಪ್ಟನ್ ಆಗಿ ಜಗ್ಗ ಮಮ್ಮಿ @ ಜಗದೀಶ್ (Jagadeesh) ಆಯ್ಕೆಯಾಗಿದ್ದಾರೆ. ಬಿಗ್ಬಾಸ್ 8ನೇ ವಾರದ ಕ್ಯಾಪ್ಟನ್ಸಿ ಆಟದಲ್ಲಿ ವೇಗವಾಗಿ, ಗುರಿಯಿಟ್ಟು ಆಡಿದ ಜಗದೀಶ್ ಅವರು ಕ್ಯಾಪ್ಟನ್ ಪಟ್ಟ ತಮ್ಮದಾಗಿಸಿಕೊಂಡಿದ್ದಾರೆ. ಇದನ್ನೂ ಓದಿ: ಬಿಗ್ಬಾಸ್ ಮನೆಯಲ್ಲಿ ಮದುವೆ ಸಂಭ್ರಮ – ಯಶಸ್ ಮನವೊಲಿಕೆಗೆ

ಬಿಗ್ಬಾಸ್ ಕನ್ನಡ ಸೀಸನ್ 13ರ ಈ ವಾರ ಅದ್ಭುತವಾಗಿ ಆಡಿ ಮುಂದಿನ ವಾರದ ಕ್ಯಾಪ್ಟನ್ ಆಗಿ ಜಗ್ಗ ಮಮ್ಮಿ @ ಜಗದೀಶ್ (Jagadeesh) ಆಯ್ಕೆಯಾಗಿದ್ದಾರೆ. ಬಿಗ್ಬಾಸ್ 8ನೇ ವಾರದ ಕ್ಯಾಪ್ಟನ್ಸಿ ಆಟದಲ್ಲಿ ವೇಗವಾಗಿ, ಗುರಿಯಿಟ್ಟು ಆಡಿದ ಜಗದೀಶ್ ಅವರು ಕ್ಯಾಪ್ಟನ್ ಪಟ್ಟ ತಮ್ಮದಾಗಿಸಿಕೊಂಡಿದ್ದಾರೆ. ಇದನ್ನೂ ಓದಿ: ಬಿಗ್ಬಾಸ್ ಮನೆಯಲ್ಲಿ ಮದುವೆ ಸಂಭ್ರಮ – ಯಶಸ್ ಮನವೊಲಿಕೆಗೆ ಶೆಟ್ಟಿ ಡಾನ್ ಫಿದಾ ಈ ವಾರದ Captain – ಜಗದೀಶ ಬಿಗ್ ಬಾಸ್ | ಸೋಮ – ಶುಕ್ರ ರಾತ್ರಿ 9:30 | ಶನಿ – ಭಾನು ರಾತ್ರಿ 9:00 ಫುಲ್ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ – https://t.co/96hibtGUwq #BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKBBKEngage #CKBBKCaptain https://t.co/38A2ktfZ76 — Colors Kannada (@ColorsKannada) October 30, 2026 ಈ ವಾರ ಬಿಗ್ಬಾಸ್ ಶೆಟ್ಟಿ ಡಾನ್ ಸ್ವಯಂವರದ ಟಾಸ್ಕ್ ಅನ್ನು ನೀಡಿದ್ದರು. ಈ ಟಾಸ್ಕ್ನಲ್ಲಿ ಸೌಂದರ್ಯ ಶೆಟ್ಟಿಯವರ ಮನವೊಲಿಸಿ, ಯಶಸ್ ವರನ ತಂಡವು ಗೆಲುವು ಸಾಧಿಸಿತ್ತು. ಆ ಪೈಕಿ ಯಶಸ್, ಜಗದೀಶ್, ಸೋನಿಕಾ, ಗಾನವಿ, ಕುಮಾರಿ ಹಾಗೂ ತಾಂಡವ್ ಅವರು ಕ್ಯಾಪ್ಟನ್ಸಿ ಓಟದಲ್ಲಿದ್ದರು. ಮೊದಲು ಕ್ಯಾಪ್ಟನ್ಸಿ ಟಾಸ್ಕ್ಗೆ ಇಬ್ಬರನ್ನು ಆಯ್ಕೆ ಮಾಡಲು ಬಿಗ್ಬಾಸ್ ಒಂದು ಟಾಸ್ಕ್ ನೀಡಿದ್ದರು. ಅದರಂತೆ ಗೆದ್ದವರು ಒಬ್ಬರನ್ನು ಆಟದಿಂದ ಹೊರಗಿಡಬೇಕು. ಆಟದ ನಾಲ್ಕು ಸುತ್ತಿನಲ್ಲಿ ಗೆಲುವು ಸಾಧಿಸಿದ ಜಗದೀಶ್, ಕ್ರಮವಾಗಿ ಗಾನವಿ, ಯಶಸ್, ತಾಂಡವ್ ಹಾಗೂ ಕೊನೆಗೆ ಸೋನಿಕಾ ಅವರನ್ನು ಹೊರಗಿಟ್ಟರು. ಕೊನೆಗೆ ಕುಮಾರಿ ಹಾಗೂ ಜಗದೀಶ್ ಕ್ಯಾಪ್ಟನ್ಸಿ ಟಾ ಆಯ್ಕೆ ಆಗಿದ್ದರು.ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ರಕ್ಷಿತಾ ಶೆಟ್ಟಿ ಎಂಟ್ರಿ – ‘ಪ್ರಶಾಂತಿ’ಯ ಮಲೇಷ್ಯಾ ಲವ್ ಗುಟ್ಟು ರಟ್ಟು ಕೊನೆಗೆ ಕುಮಾರಿಗೆ ಆರೋಗ್ಯ ಸರಿಯಿಲ್ಲದ ಕಾರಣ ಸೌಂದರ್ಯ ಶೆಟ್ಟಿಗೆ ಬಿಗ್ಬಾಸ್ ಕ್ಯಾಪ್ಟನ್ಸಿ ರೇಸ್ನಲ್ಲಿರುವ ಒಬ್ಬರನ್ನು ಹಾಗೂ ಆ ಪೈಕಿ ತಮ್ಮನ್ನು ಚೆನ್ನಾಗಿ ಮನವೊಲಿಸಿದ ಒಬ್ಬರನ್ನು ಆಯ್ಕೆ ಮಾಡುವಂತೆ ಅಧಿಕಾರ ನೀಡಿದ್ದರು. ಅದರಂತೆ ತಾಂಡವ್ ಅವರನ್ನು ಆಯ್ಕೆ ಮಾಡಿದರು. ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿದ ಜಗದೀಶ್, ತಾಂಡವ್ ಅವರನ್ನು ಸೋಲಿಸಿ ಗೆಲುವು ಸಾಧಿಸಿದರು.ಇದನ್ನೂ ಓದಿ:ದೊಡ್ಮನೆಯಲ್ಲಿ `ಶೆಟ್ಟಿ ಡಾನ್’ ಸ್ವಯಂವರ – ವಧು ಸೌಂದರ್ಯಗೆ ವರನಾಗಲು ಹುಡುಗರ ಕಸರತ್ತು