ಕುಳಗೇರಿ ಕ್ರಾಸ್: ಪ್ರವಾಸಿಗರಿಗೆ ಟ್ರಾಫಿಕ್ ಜಾಮ್ ಕಿರಿಕಿರಿ
ಕುಳಗೇರಿ ಕ್ರಾಸ್: ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿದಿನವೂ ಆಗುವ ಟ್ರಾಫಿಕ್ ಜಾಮ್ ಸಮಸ್ಯೆಗೆ ವಿದೇಶಿ ಪ್ರವಾಸಿಗರು ಹಾಗೂ ಅಂತರ ಜಿಲ್ಲೆಗಳ ಪ್ರಯಾಣಿಕರು ಬೇಸತ್ತಿದ್ದಾರೆ.ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ-218 ಹಾಗೂ ಸವದತ್ತಿ-ಹುನಗುಂದ ರಾಜ್ಯ ಹೆದ್ದಾರಿ-14 ಈ ವೃತ್ತದಲ್ಲಿ ಹಾಯ್ದು ಹೋಗುತ್ತವೆ. ಇಲ್ಲಿ ಪ್ರತಿ ದಿನವೂ ಒಂದು ಬಾರಿಯಾದರೂ

ಕುಳಗೇರಿ ಕ್ರಾಸ್: ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿದಿನವೂ ಆಗುವ ಟ್ರಾಫಿಕ್ ಜಾಮ್ ಸಮಸ್ಯೆಗೆ ವಿದೇಶಿ ಪ್ರವಾಸಿಗರು ಹಾಗೂ ಅಂತರ ಜಿಲ್ಲೆಗಳ ಪ್ರಯಾಣಿಕರು ಬೇಸತ್ತಿದ್ದಾರೆ.ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ-218 ಹಾಗೂ ಸವದತ್ತಿ-ಹುನಗುಂದ ರಾಜ್ಯ ಹೆದ್ದಾರಿ-14 ಈ ವೃತ್ತದಲ್ಲಿ ಹಾಯ್ದು ಹೋಗುತ್ತವೆ. ಇಲ್ಲಿ ಪ್ರತಿ ದಿನವೂ ಒಂದು ಬಾರಿಯಾದರೂ ಟ್ರಾಫಿಕ್ ಜಾಮ್ ಆಗಿ ಕಿ.ಮೀವರೆಗೂ ಭಾರಿ ವಾಹನಗಳು ಹಾಗೂ ಲಘು ವಾಹನಗಳು ಸಾಲಿನಲ್ಲಿ ನಿಲ್ಲುವುದು ಕಂಡು ಬರುತ್ತಿದೆ. ವಾಹನಗಳ ದಟ್ಟಣೆ ಕಡಿಮೆಯಾಗಲು ಗಂಟೆಗಟ್ಟಲೆ ಸಮಯ ತೆಗೆದುಕೊಳ್ಳುತ್ತಿದೆ.ವಿಜಯಪುರ, ಬಾದಾಮಿ, ಪಟ್ಟದಕಲ್ಲು ಹಾಗೂ ಐಹೊಳೆ ,ಮೊದಲಾದ ಪ್ರವಾಸಿ ತಾಣಗಳಿಗೆ ತೆರಳುವ ಈ ರಸ್ತೆಯಲ್ಲಿ ವಿಭಜಕಗಳು ಇಲ್ಲ. ಬೈಕ್ ಸವಾರರು ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಬೈಕ್ ನಿಲ್ಲಿಸಿ ತಮ್ಮ ಕೆಲಸಗಳಿಗೆಂದು ಬಹಳ ಹೊತ್ತು ಹೋಗುವ ಕಾರಣ ವಾಹನ ದಟ್ಟಣೆ ಉಂಟಾಗುತ್ತಿದೆ. ಹೆದ್ದಾರಿಗಳಲ್ಲಿ ಭಾರಿ ಉದ್ದದ ಲಾರಿಗಳು ಬಂದ ಸಮಯದಲ್ಲಿ, ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಾಮದುರ್ಗ ಕಡೆಯಿಂದ ಸಾರಿಗೆ ಬಸ್ ಬಂದಾಗ, ವಿಜಯಪುರ ಕಡೆಯಿಂದ ಲಾರಿ, ಬಸ್ಗಳು ಬಂದಾಗ ಟ್ರಾಫಿಕ್ ಜಾಮ್ ಆಗುತ್ತದೆ. ‘ಗ್ರಾಮದಲ್ಲಿ ಟ್ರಾಫಿಕ್ ಜಾಮ್ ಆದಾಗ ಸಾರ್ವಜನಿಕರು ಓಡಾಡಲು, ಎತ್ತಿನ ಬಂಡಿಗಳು ಸಾಗಲು ಹರಸಹಾಸಪಡಬೇಕಾದ ಸ್ಥಿತಿ ಉಂಟಾಗುತ್ತಿದೆ. ವೃದ್ಧರು, ಮಹಿಳೆಯರು ಓಡಾಡಲು ಭಯ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ’ ಎಂದು ನ್ಯಾಯವಾದಿ ವೀರೇಶ ಹೋಳಿ ದೂರಿದರು.ಸಂತೋಷ ಕೋಟಿ, ಎಇಇ, ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ– 218 ನರಗುಂದ ಉಪ ವಿಭಾಗಈಗಾಗಲೇ ಚತುಷ್ಪಥ ಹೆದ್ದಾರಿ ನಿರ್ಮಾಣದ ಸರ್ವೆ ಕಾರ್ಯ ನಡೆಯುತ್ತಿದೆ. ಮುಗಿದ ನಂತರ ಶೀಘ್ರದಲ್ಲಿಯೇ ಚತುಷ್ಪಥ ಹೆದ್ದಾರಿ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತೇವೆ. ಇಕ್ಕಟ್ಟಾದ ಬಸ್ ನಿಲ್ದಾಣವೇ ಟ್ರಾಫಿಕ್ ಸಮಸ್ಯೆಗೆ ಮುಖ್ಯ ಕಾರಣ. – ಕಾಳಿದಾಸ, ಎಇಇ, ಲೊಕೋಪಯೋಗಿ ಇಲಾಖೆ ಸವದತ್ತಿ-ಹುನಗುಂದ ರಾಜ್ಯ ಹೆದ್ದಾರಿ–14ಹೆದ್ದಾರಿ ಬದಿಯಲ್ಲಿ 7 ಮೀ ಗಿಂತ ಹೆಚ್ಚಿಗೆ ಸ್ಥಳವಾಕಾಶವಿದ್ದರೆ ಮಾತ್ರ ರಸ್ತೆ ವಿಭಜಕ ಮಾಡಲು ಅವಕಾಶವಿದೆ. ಟ್ರಾಫಿಕ್ ಸಮಸ್ಯೆಯಾಗುವ ಸ್ಥಳಕ್ಕೆ ಖುದ್ದಾಗಿ ಬಂದು ಪರಿಶೀಲನೆ ಮಾಡುವಂತೆ ಲೊಕೋಪಯೋಗಿ ಇಲಾಖೆಗೆ ಪ್ರಸ್ತಾವ ಕಳಿಸುತ್ತೇನೆ. ಕುಳಗೇರಿ ಕ್ರಾಸ್ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಟ್ರಾಫಿಕ್ ಜಾಮ್ ಆಗಿ ವಾಹನಗಳು ಸಾಲಾಗಿ ನಿಂತಿರುವುದುಕುಳಗೇರಿ ಕ್ರಾಸ್ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಟ್ರಾಫಿಕ್ ಜಾಮ್ ಆಗಿ ವಾಹನಗಳು ಸಾಲಾಗಿ ನಿಂತಿರುವುದು