ಗ್ರಾಮೀಣ ಆರೋಗ್ಯಕ್ಕೆ ‘ಅರಗೊಂಡ’ ಮಾದರಿ
ಅರಗೊಂಡ: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಅರಗೊಂಡ ಗ್ರಾಮದಲ್ಲಿರುವ ಅಪೊಲೊ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ಸ್ಥಳೀಯರಿಗೆ ಸಮಗ್ರ ಆರೋಗ್ಯ ಸೌಲಭ್ಯವನ್ನು ಒದಗಿಸುತ್ತಿದ್ದು, ಈ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಸಾವಿರ ಮಂಡಿಚಿಪ್ಪು ಬದಲಿಸುವ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.‘ದೇಶದ ಮೊದಲ ಆಧುನಿಕ ಗ್ರಾಮೀಣ ದ್ವಿತೀಯ ಹಂತದ ಆಸ್ಪತ್ರೆ’ ಎಂಬ ಹಿರಿಮೆಗೆ ಈ ಆಸ್ಪತ್ರೆ ಭಾಜನವ

ಅರಗೊಂಡ: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಅರಗೊಂಡ ಗ್ರಾಮದಲ್ಲಿರುವ ಅಪೊಲೊ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ಸ್ಥಳೀಯರಿಗೆ ಸಮಗ್ರ ಆರೋಗ್ಯ ಸೌಲಭ್ಯವನ್ನು ಒದಗಿಸುತ್ತಿದ್ದು, ಈ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಸಾವಿರ ಮಂಡಿಚಿಪ್ಪು ಬದಲಿಸುವ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.‘ದೇಶದ ಮೊದಲ ಆಧುನಿಕ ಗ್ರಾಮೀಣ ದ್ವಿತೀಯ ಹಂತದ ಆಸ್ಪತ್ರೆ’ ಎಂಬ ಹಿರಿಮೆಗೆ ಈ ಆಸ್ಪತ್ರೆ ಭಾಜನವಾಗಿದೆ. ಗ್ರಾಮೀಣ ಜನರಿಗೆ ವಿಶ್ವದರ್ಜೆಯ ವೈದ್ಯಕೀಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ, ಅಪೊಲೊ ಆಸ್ಪತ್ರೆಗಳ ಸಂಸ್ಥಾಪಕ ಡಾ. ಪ್ರತಾಪ್ ಸಿ. ರೆಡ್ಡಿ ಅವರು ತಮ್ಮ ಹುಟ್ಟೂರಾದ ಅರಗೊಂಡದಲ್ಲಿ 2000ನೇ ಇಸವಿಯಲ್ಲಿ ಈ ಆಸ್ಪತ್ರೆ ಸ್ಥಾಪಿಸಿದ್ದಾರೆ. ಇಲ್ಲಿ ಅಪೊಲೊ ಫೌಂಡೇಷನ್ ವತಿಯಿಂದ ‘ಟೋಟಲ್ ಹೆಲ್ತ್’ ಕಾರ್ಯಕ್ರಮದ ಮೂಲಕ ಜಿಲ್ಲೆಯ ಜನರಿಗೆ ಆರೋಗ್ಯದ ಜತೆಗೆ ಶಿಕ್ಷಣ, ಪೌಷ್ಟಿಕ ಆಹಾರ ಮತ್ತು ಮಹಿಳೆಯರಿಗೆ ಸ್ವಯಂ ಉದ್ಯೋಗ ಒದಗಿಸಲಾಗುತ್ತಿದೆ. ಟೆಲಿಮೆಡಿಸಿನ್ ಸೌಲಭ್ಯ ಹೊಂದಿರುವ ಈ ಆಸ್ಪತ್ರೆ, ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ (ಸಿಎಸ್ಆರ್) ಹಾಗೂ ಅಪೊಲೊ ಫೌಂಡೇಷನ್ ಮೂಲಕ ಬಡವರಿಗೆ ಶಸ್ತ್ರಚಿಕಿತ್ಸೆಗೆ ನೆರವಾಗುತ್ತಿದೆ. ಸಮಗ್ರ ಆರೋಗ್ಯ ಕಾರ್ಯಕ್ರಮದಡಿ ವಿವಿಧ ಗ್ರಾಮಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಿ, ಮಧುಮೇಹ, ಅಧಿಕ ರಕ್ತದೊತ್ತಡ ಸೇರಿ ವಿವಿಧ ಅನಾರೋಗ್ಯ ಸಮಸ್ಯೆಗಳನ್ನು ಪತ್ತೆ ಮಾಡುತ್ತಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಜಿಲ್ಲಾ ಹಾಗೂ ಉನ್ನತ ಆಸ್ಪತ್ರೆಗೆ ವೈದ್ಯರು ಶಿಫಾರಸು ಮಾಡುತ್ತಾರೆ. ಸಾವಿರ ಮಂಡಿಚಿಪ್ಪು ಬದಲಿ ಶಸ್ತ್ರಚಿಕಿತ್ಸೆಯ ಸಂಭ್ರಮಾಚರಣೆ ಸಮಾರಂಭದಲ್ಲಿ ಅಪೋಲೊ ಹಾಸ್ಪಿಟಲ್ಸ್ ಎಂಟರ್ಪ್ರೈಸಸ್ ಲಿಮಿಟೆಡ್ನ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ಪ್ರೀತಾ ರೆಡ್ಡಿ, ಯೋಜನಾ ನಿರ್ದೇಶಕಿ ಉಪಾಸನಾ ಕಾಮಿನೇನಿ ಕೊನಿಡೇಲ ಅವರು ಪಾಲ್ಗೊಂಡಿದ್ದರು. (ಸಂಸ್ಥೆಯ ಆಮಂತ್ರಣದ ಮೇರೆಗೆ ನಮ್ಮ ಪ್ರತಿನಿಧಿ ಪಾಲ್ಗೊಂಡಿದ್ದರು)ಡಾ. ಪ್ರತಾಪ್ ಸಿ. ರೆಡ್ಡಿ ಅಪೊಲೊ ಆಸ್ಪತ್ರೆಗಳ ಸಮೂಹದ ಸಂಸ್ಥಾಪಕ ಅಧ್ಯಕ್ಷಗುಣಮಟ್ಟದ ಮತ್ತು ಕೈಗೆಟುಕುವ ಆರೋಗ್ಯ ಸೇವೆ ದೇಶದ ಪ್ರತಿಯೊಬ್ಬ ಪ್ರಜೆಗೂ ಅವರು ವಾಸಿಸುವಲ್ಲೇ ಸಿಗಬೇಕು. ಗ್ರಾಮೀಣ ಪ್ರದೇಶಕ್ಕೆ ಆಧುನಿಕ ವೈದ್ಯಕೀಯ ಸೌಲಭ್ಯ ಒದಗಿಸುವ ಮೂಲಕ ನಮ್ಮ ಪ್ರಯಾಣ ಪ್ರಾರಂಭಿಸಿದ್ದೇವೆ