ಆಳ–ಅಗಲ | 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿಗಳ ನೇಮಕಾತಿ ನಡೆದು ಬಂದ ಹಾದಿ
2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿಗಳ ನೇಮಕಾತಿ ನಡೆದು ಬಂದ ಹಾದಿ 2011, ನವೆಂಬರ್ 3: ಗ್ರೂಪ್ ‘ಎ’ ಗ್ರೂಪ್ ‘ಬಿ’ ವೃಂದದ 362 ಹುದ್ದೆಗಳ ನೇಮಕಾತಿಗೆ ಕೆಪಿಎಸ್ಸಿ ಅಧಿಸೂಚನೆ2012, ಏಪ್ರಿಲ್ 22: ಪೂರ್ವಭಾವಿ ಪರೀಕ್ಷೆ2012 ಡಿ.15ರಿಂದ 2013 ಜ.6: ಮುಖ್ಯ ಪರೀಕ್ಷೆ2013, ಮಾರ್ಚ್ 21: ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ2013, ಏಪ್ರಿಲ್ 1–2, ಮೇ 7ರಿಂದ 27

2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿಗಳ ನೇಮಕಾತಿ ನಡೆದು ಬಂದ ಹಾದಿ 2011, ನವೆಂಬರ್ 3: ಗ್ರೂಪ್ ‘ಎ’ ಗ್ರೂಪ್ ‘ಬಿ’ ವೃಂದದ 362 ಹುದ್ದೆಗಳ ನೇಮಕಾತಿಗೆ ಕೆಪಿಎಸ್ಸಿ ಅಧಿಸೂಚನೆ2012, ಏಪ್ರಿಲ್ 22: ಪೂರ್ವಭಾವಿ ಪರೀಕ್ಷೆ2012 ಡಿ.15ರಿಂದ 2013 ಜ.6: ಮುಖ್ಯ ಪರೀಕ್ಷೆ2013, ಮಾರ್ಚ್ 21: ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ2013, ಏಪ್ರಿಲ್ 1–2, ಮೇ 7ರಿಂದ 27: ವ್ಯಕ್ತಿತ್ವ ಪರೀಕ್ಷೆ (ಸಂದರ್ಶನ)2013, ಮೇ 24 ಮತ್ತು 28: ಪರೀಕ್ಷೆ ಬರೆದ ಅಭ್ಯರ್ಥಿಗಳಲ್ಲಿ ಒಬ್ಬರಾಗಿದ್ದ ಡಾ.ಮೈತ್ರಿ ಎಚ್.ಪಿ.ಎಸ್ ಅವರು ಸಂದರ್ಶನದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಅಡ್ವೋಕೇಟ್ ಜನರಲ್ ಅವರಿಗೆ ದೂರು 2013, ಜೂನ್ 04: ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆ ಸರ್ಕಾರಕ್ಕೆ ಅಡ್ವೊಕೇಟ್ ಜನರಲ್ ಅವರಿಂದ ಅಭಿಪ್ರಾಯ ಸಲ್ಲಿಕೆ. ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ತಡೆಹಿಡಿಯುವಂತೆ ಮತ್ತು ಅವ್ಯವಹಾರ ಆರೋಪಗಳ ಬಗ್ಗೆ ಸಿಬಿಐನಂತಹ ಸಂಸ್ಥೆಗಳಿಂದ ಸಮಗ್ರ ತನಿಖೆಗೆ ನಡೆಸುವಂತೆ ಸಲಹೆ2013, ಜೂನ್ 25: ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಉಪ ಕಾರ್ಯದರ್ಶಿ ಅವರಿಂದ ವಿಧಾನ ಸೌಧ ಪೊಲೀಸ್ ಠಾಣೆಯಲ್ಲಿ ದೂರು, ಎಫ್ಐಆರ್ ದಾಖಲು2013, ಜೂನ್ 27: ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದ ಸರ್ಕಾರ2013 ಸೆಪ್ಟೆಂಬರ್ 10: ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ ಸಿಐಡಿ. ಕೆಪಿಎಸ್ಸಿ ನೇಮಕ ಪ್ರಕ್ರಿಯೆಯಲ್ಲಿ ಅಕ್ರಮ, ಸ್ವಜನಪಕ್ಷಪಾತ ಹಾಗೂ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂದು ವರದಿಯಲ್ಲಿ ಉಲ್ಲೇಖ2013, ಅಕ್ಟೋಬರ್ 10: ಮುಖ್ಯಪರೀಕ್ಷೆ ಮತ್ತು ಸಂದರ್ಶನದ ಫಲಿತಾಂಶ ಅರ್ಥಾತ್, ಆಯ್ಕೆ ಪಟ್ಟಿಯನ್ನು ರದ್ದುಗೊಳಿಸಿ ರಾಜ್ಯ ಸರ್ಕಾರದ ಆದೇಶ. ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಮರು ಮೌಲ್ಯಮಾಪನ ಮಾಡುವಂತೆ ಮತ್ತು ಹೋಟಾ ಸಮಿತಿಯ ವರದಿಯ ಶಿಫಾರಸುಗಳ ಅನ್ವಯ ವ್ಯಕ್ತಿತ್ವ ಪರೀಕ್ಷೆ ನಡೆಸಲು ಕೆಪಿಎಸ್ಸಿಗೆ ನಿರ್ದೇಶನ2013, ನವೆಂಬರ್/ಡಿಸೆಂಬರ್: ಸರ್ಕಾರದ ಆದೇಶದ ವಿರುದ್ಧ ಕೆಎಟಿಗೆ ಮೊರೆ ಹೋದ ಆಯ್ಕೆಯಾಗಿದ್ದ ಅಭ್ಯರ್ಥಿಗಳು2014, ಜನವರಿ: ಸರ್ಕಾರದ ಆದೇಶವನ್ನು ವಜಾಗೊಳಿಸಿದ ಕೆಎಟಿ, ಮತ್ತೆ ನೇಮಕಾತಿ ಮಾಡಿಕೊಳ್ಳುವಂತೆ ಆದೇಶ2014, ಮಾರ್ಚ್ 21: ಅಂತಿಮ ಆಯ್ಕೆ ಪಟ್ಟಿ ಪ್ರಕಟ2014, ಆಗಸ್ಟ್ 14: ನೇಮಕಾತಿ ಪ್ರಕ್ರಿಯೆಯನ್ನು ಜರುಗಿಸಲು ಕೋರಲಾದ ಪತ್ರಗಳನ್ನು ವಾಪಸ್ ಪಡೆದ ಸರ್ಕಾರ, 2011ರ ಗೆಜೆಟೆಡ್ಪ್ರೊಬೇಷನರಿಗಳ ನೇಮಕಾತಿ ಪ್ರಕ್ರಿಯೆ ಮುಕ್ತಾಯಗೊಳಿಸಲು ಆದೇಶ2014, ಆಗಸ್ಟ್ 21: ನೇಮಕಾತಿ ಪ್ರಕ್ರಿಯೆ ಮುಕ್ತಾಯದ ಆದೇಶ ರದ್ದುಗೊಳಿಸುವಂತೆ ಕೋರಿ ಬಾಧಿತ ಅಭ್ಯರ್ಥಿಗಳಿಂದ ಕೆಎಟಿಯಲ್ಲಿ ಅರ್ಜಿ2016, ಅಕ್ಟೋಬರ್ 19: ಸರ್ಕಾರದ ಆದೇಶವನ್ನು ರದ್ದುಗೊಳಿಸಿದ ಕೆಎಟಿ2017, ಮಾರ್ಚ್ 1: ಕೆಎಟಿ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸದೇ ಇರಲು ಸಚಿವ ಸಂಪುಟ ತೀರ್ಮಾನ2017, ಮಾರ್ಚ್ 3: ಕರ್ನಾಟಕ ಗೆಜೆಟೆಡ್ ಪ್ರೊಬೇಷನರಿಗಳ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕ) ನಿಯಮಗಳು 1997ರ 11 (3)ರಂತೆ ಆಯ್ಕೆಯಾದ ಅಭ್ಯರ್ಥಿಗಳ ಮೀಸಲಾತಿ ಬಗ್ಗೆ ಸಿಂಧುತ್ವ ಪ್ರಮಾಣಪತ್ರ, ವೈದ್ಯಕೀಯ ಪರೀಕ್ಷೆ,ಗುಣ ನಡತೆ, ಪೂರ್ವಚರಿತ್ರೆ ಬಗ್ಗೆ ಖಚಿತಪಡಿಸಿಕೊಂಡು ನೇಮಕಾತಿ ಆದೇಶವನ್ನು ನೀಡುವುದಕ್ಕಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳ ಪಟ್ಟಿ, ದಾಖಲೆಗಳನ್ನು ಸಂಬಂಧಿಸಿದ ಇಲಾಖೆಗೆ ಹಸ್ತಾಂತರ2017, ಮಾರ್ಚ್ 27: ನಗರಾಭಿವೃದ್ಧಿ ಇಲಾಖೆಯ ಪೌರಾಡಳಿತ ನಿರ್ದೇಶನಾಲಯದಲ್ಲಿ 18 ಮಂದಿಗೆ ಮುಖ್ಯಾಧಿಕಾರಿ ಶ್ರೇಣಿ–1 ಹುದ್ದೆಗಳಿಗೆ ನೇಮಕಾತಿ ಆದೇಶ2017, ಏಪ್ರಿಲ್ 01: 2016ರ ಅಕ್ಟೋಬರ್ 10ರಂದು ಕೆಎಟಿ ನೀಡಿದ್ದ ಆದೇಶದ ವಿರುದ್ಧ ರೇಣುಕಾಂಬಿಕೆ ಮತ್ತು ಇತರರಿಂದ ಹೈಕೋರ್ಟ್ನಲ್ಲಿ ಮೇಲ್ಮನವಿ2017 ಏಪ್ರಿಲ್ 3: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯ ಕಾರ್ಯದರ್ಶಿ ಹುದ್ದೆಗಳಿಗೆ 60 ಮಂದಿಯನ್ನು ನೇಮಿಸಿ ಆದೇಶ2017 ಏಪ್ರಿಲ್ 5: ನೇಮಕಾತಿ ಆದೇಶ ಪತ್ರ ನೀಡುವ ಪ್ರಕ್ರಿಯೆಗೆ ಹೈಕೋರ್ಟ್ ತಡೆಯಾಜ್ಞೆ2017 ಏಪ್ರಿಲ್ 24, ಜೂನ್ 21: ತಡೆಯಾಜ್ಞೆ ತೆರವುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ವಜಾ ಗೊಳಿಸಿದ ಹೈಕೋರ್ಟ್2017, ಆಗಸ್ಟ್ 25: ನೇಮಕಾತಿ ಆದೇಶ ನೀಡುವ ಪ್ರಕ್ರಿಯೆಗೆ ತಡೆಯಾಜ್ಞೆ ಮತ್ತು ತಡೆಯಾಜ್ಞೆ ವಿರುದ್ಧ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದ್ದ ಹೈಕೋರ್ಟ್ ಮಧ್ಯಂತರ ಆದೇಶಗಳ ವಿರುದ್ಧ, ಆಯ್ಕೆಯಾದ ಅಭ್ಯರ್ಥಿಗಳ ಪರವಾಗಿ ಸುಪ್ರೀಂ ಕೋರ್ಟ್ನಲ್ಲಿ ರಾಜ್ಯ ಸರ್ಕಾರದಿಂದ ಮೇಲ್ಮನವಿ. ಯಥಾಸ್ಥಿತಿ ಕಾಪಾಡುವಂತೆ ಸುಪ್ರೀಂ ಕೋರ್ಟ್ ಸೂಚನೆ2018, ಮಾರ್ಚ್ 9: 2016ರ ಅಕ್ಟೋಬರ್ 10ರಂದು ಕೆಎಟಿ ಹೊರಡಿಸಿದ್ದ ಆದೇಶ, ನಗರಾಭಿವೃದ್ಧಿ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಅಭ್ಯರ್ಥಿಗಳನ್ನು ನೇಮಕ ಮಾಡಿ ಹೊರಡಿಸಿದ್ದ ಆದೇಶ ಹಾಗೂ 2011ರ ನೇಮಕಾತಿ ಪ್ರಕ್ರಿಯೆಯನ್ನೇ ರದ್ದುಗೊಳಿಸಿ ಹೈಕೋರ್ಟ್ ತೀರ್ಪು2018 ಮಾರ್ಚ್ 16: ಹೈಕೋರ್ಟ್ ತೀರ್ಪಿನ ವಿರುದ್ಧ ಅವಿನಾಶ್ ಮತ್ತು ಇತರರಿಂದ ‘ಸುಪ್ರೀಂ’ನಲ್ಲಿ ಮೇಲ್ಮನವಿ2018, ಏಪ್ರಿಲ್ 4: ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸಿದ ಕ್ರಮವನ್ನು ಸಮರ್ಥಿಸಿಕೊಂಡ ಸುಪ್ರೀಂ ಕೋರ್ಟ್. ಮರುಸಂದರ್ಶನ ಮಾಡುವಂತೆ ಕೋರಿ ರಾಜ್ಯ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲು ಸಲಹೆ2018 ಏಪ್ರಿಲ್: ‘ಸುಪ್ರೀಂ’ ಸಲಹೆ ಮೇರೆಗೆ ಅಭ್ಯರ್ಥಿಗಳಿಂದ ಹೈಕೋರ್ಟ್ನಲ್ಲಿ ಅರ್ಜಿ2018, ಜುಲೈ 13: ಎಲ್ಲ ಅರ್ಜಿಗಳನ್ನು ವಜಾ ಮಾಡಿದ ಹೈಕೋರ್ಟ್2018 ಸೆಪ್ಟೆಂಬರ್ 4, 14: ಹೈಕೋರ್ಟ್ನ ಜುಲೈ 13ರ ಆದೇಶವನ್ನು ಪ್ರಶ್ನಿಸಿ ಮೇಜರ್ ಸಂತೋಷ ಕುಮಾರ್ ಸಿ ಹಾಗೂ ಡಾ.ಮೈತ್ರಿ ಎಚ್.ಪಿ.ಎಸ್ ದಾಖಲಿಸಿರುವ ಮೇಲ್ಮನವಿ ಅರ್ಜಿಗಳನ್ನು ವಜಾಗೊಳಿಸಿದ ‘ಸುಪ್ರೀಂ’2019, ಜೂನ್ 24: 2018ರ ಜುಲೈ 13ರ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರದಿಂದ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ2019 ಸೆಪ್ಟೆಂಬರ್ 9: ರಾಜ್ಯ ಸರ್ಕಾರದ ಮೇಲ್ಮನವಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್2022 ಮಾರ್ಚ್ 14: ಕೋರ್ಟ್ ತೀರ್ಪಿಗೆ ವಿರುದ್ಧವಾಗಿ ನೇಮಕಾತಿ ಆದೇಶ ನೀಡಲು ಸರ್ಕಾರದಿಂದ ‘ಕರ್ನಾಟಕ ನಾಗರಿಕ ಸೇವೆಗಳು (ಆಯ್ಕೆಯ ಊರ್ಜಿತಗೊಳಿಸುವಿಕೆ ಮತ್ತು 2011ರ ಗೆಜೆಟೆಡ್ ಪ್ರೊಬೇಷನರಿಗಳ ನೇಮಕಾತಿ) ಕಾಯ್ದೆ–2022’ ರೂಪಿಸಿ ಅಧಿಸೂಚನೆ