CJP ನಾಯಕ ಸೌರವ್ ದಾಸ್ ಹಿನ್ನೆಲೆ ಬಗ್ಗೆ ತನಿಖೆ ನಡೆಸುವಂತೆ ಕೋರಿ HCಗೆ ಅರ್ಜಿ
ಚೆನ್ನೈ: ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ರಾಷ್ಟ್ರೀಯ ಸಹ ಸಂಚಾಲಕ ಯೋಗೇಶ್ ಶರ್ಮಾ ಅಲಿಯಾಸ್ ಸೌರವ್ ದಾಸ್ ಹಾಗೂ ಅವರ ಪೋಷಕರ ಹಿನ್ನೆಲೆ ಕುರಿತು ವಿವರವಾದ ತನಿಖೆ ನಡೆಸುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಉದ್ಯಮಿಯೊಬ್ಬರು ಶುಕ್ರವಾರ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.ಈ ಕುರಿತು ಕಾಂಚೀಪುರಂ ಜಿಲ್ಲೆಯ ಗಣೇಶ್ ಕುಮಾರ್ ಎಂಬುವರು

ಚೆನ್ನೈ: ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ರಾಷ್ಟ್ರೀಯ ಸಹ ಸಂಚಾಲಕ ಯೋಗೇಶ್ ಶರ್ಮಾ ಅಲಿಯಾಸ್ ಸೌರವ್ ದಾಸ್ ಹಾಗೂ ಅವರ ಪೋಷಕರ ಹಿನ್ನೆಲೆ ಕುರಿತು ವಿವರವಾದ ತನಿಖೆ ನಡೆಸುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಉದ್ಯಮಿಯೊಬ್ಬರು ಶುಕ್ರವಾರ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.ಈ ಕುರಿತು ಕಾಂಚೀಪುರಂ ಜಿಲ್ಲೆಯ ಗಣೇಶ್ ಕುಮಾರ್ ಎಂಬುವರು ಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸಲ್ಲಿಸಿದ್ದಾರೆ. ದಾಸ್ ಅವರ ಮೂಲವು ನೇಪಾಳ ಎಂಬ ಆರೋಪವಿದ್ದು, ಈ ಬಗ್ಗೆ ತನಿಖೆ ನಡೆಸಬೇಕು. ಒಂದು ವೇಳೆ ಇದು ನಿಜವೆಂದು ಕಂಡುಬಂದರೆ, ಅವರು ನಮ್ಮ ಸರ್ಕಾರ ಮತ್ತು ನ್ಯಾಯಾಂಗದ ಬಗ್ಗೆ ಉಪದೇಶ ನೀಡಲು ಸಾಧ್ಯವಿಲ್ಲ ಎಂದು ಗಣೇಶ್ ಕುಮಾರ್ ಹೇಳಿದ್ದಾರೆ. ಒಂದು ವೇಳೆ ದಾಸ್ ತಪ್ಪಿತಸ್ಥರೆಂದು ಕಂಡುಬಂದರೆ, ಕೂಡಲೇ ಅವರ ಪಾಸ್ಪೋರ್ಟ್, ಆಧಾರ್ ಕಾರ್ಡ್ ರದ್ದುಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.ಮುಖ್ಯ ನ್ಯಾಯಮೂರ್ತಿ ಎಸ್.ಎ. ಧರ್ಮಾಧಿಕಾರಿ ಮತ್ತು ನ್ಯಾಯಮೂರ್ತಿ ಜಿ. ಅರುಳ್ ಮುರುಗನ್ ಅವರನ್ನೊಳಗೊಂಡ ಪೀಠವು ಅರ್ಜಿಯ ವಿಚಾರಣೆ ನಡೆಸಿದೆ. ಈ ಸಂಬಂಧ ಕೇಂದ್ರ ಸರ್ಕಾರ, ಪ್ರಾದೇಶಿಕ ಪಾಸ್ಪೋರ್ಟ್ ಅಧಿಕಾರಿ ಸೇರಿದಂತೆ ಇತರ 10 ಮಂದಿಗೆ ಆರು ವಾರದೊಳಗೆ ಉತ್ತರ ನೀಡುವಂತೆ ನೋಟಿಸ್ ಜಾರಿಗೊಳಿಸಿದೆ.ಸೌರವ್ ದಾಸ್ ಹೆಸರಿನ ‘ಎಕ್ಸ್’ (ಟ್ವಿಟರ್) ಮತ್ತು ಇನ್ಸ್ಟಾಗ್ರಾಮ್ ಖಾತೆಗಳನ್ನು ತಕ್ಷಣವೇ ಬ್ಲಾಕ್ ಮಾಡಬೇಕು. ನ್ಯಾಯಾಂಗ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಯಾವುದೇ ರೀತಿಯ ನಿಂದನೀಯ ಹೇಳಿಕೆಗಳನ್ನು ನೀಡದಂತೆ ತಡೆಯಲು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕೆಂದು ಗಣೇಶ್ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.ಪ್ರಕರಣ ವಿಲೇವಾರಿ ಆಗುವವರೆಗೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ಸಾಮಾಜಿಕ ಮಾಧ್ಯಮಗಳು ಸೇರಿದಂತೆ ಯಾವುದೇ ಮಾಧ್ಯಮಗಳಲ್ಲಿ ದಾಸ್ ಅವರು ಸ್ವತಃ ಅಥವಾ ತಮ್ಮ ಸ್ನೇಹಿತರ ಮೂಲಕ ಸುಪ್ರೀಂ ಕೋರ್ಟ್, ಹೈಕೋರ್ಟ್ ಮತ್ತು ಕೆಳ ನ್ಯಾಯಾಲಯಗಳ ನ್ಯಾಯಾಧೀಶರ ವಿರುದ್ಧ ಯಾವುದೇ ರೀತಿಯ ಅವಹೇಳನಕಾರಿ, ಬೆದರಿಕೆಯೊಡ್ಡುವ, ಅಸಭ್ಯ ಮತ್ತು ನಿಂದನಾತ್ಮಕ ಹೇಳಿಕೆಗಳನ್ನು ನೀಡುವುದನ್ನು ತಡೆಯಬೇಕು ಎಂದೂ ಅವರು ಅರ್ಜಿಯಲ್ಲಿ ಕೋರಿದ್ದಾರೆ.‘ದಾಸ್ಗೆ ನಮ್ಮ ನ್ಯಾಯಾಂಗವನ್ನು ನಿಂದಿಸುವ ಯಾವುದೇ ಹಕ್ಕಿಲ್ಲ. ರಾಷ್ಟ್ರದ ಹಿತದೃಷ್ಟಿಯಿಂದ ಅವರು ಆಧಾರ್ ಕಾರ್ಡ್, ಪಾಸ್ಪೋರ್ಟ್ ಅನ್ನು ಹೇಗೆ ಪಡೆದುಕೊಂಡರು, ಅವರಿಗೆ ಹಣಕಾಸಿನ ಮೂಲಗಳು ಎಲ್ಲಿಂದ ಬರುತ್ತಿವೆ, ಇಡೀ ನ್ಯಾಯಾಂಗ ವ್ಯವಸ್ಥೆಯ ವಿರುದ್ಧ ನಿಂದನೆಗಳನ್ನು ಮಾಡಲು ಅವರಿಗೆ ಯಾರು ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಅಂಶಗಳ ಕುರಿತು ಆಳವಾದ ತನಿಖೆ ನಡೆಸಬೇಕು’ ಎಂದು ಗಣೇಶ್ ಹೇಳಿದ್ದಾರೆ.The Madras High Court has issued notice to 'Cockroach Janata Party' (CJP) leader Saurav Das and the Central Government on a petition seeking inquiry into his citizenship and blocking of his social media accounts.The petition was filed by Kanchipuram district-based businessman…— ANI (@ANI) October 30, 2026