ಶುಕ್ರ ಸಂಚಾರ: ಮೇಷ ಸೇರಿ ಈ ನಾಲ್ಕು ರಾಶಿಯವರಿಗೆ ವಿಶೇಷ ಯೋಗ
ಶುಕ್ರನು ವೃಷಭ, ತುಲಾ ಅಥವಾ ಮೀನ ರಾಶಿಗಳಲ್ಲಿ ಸ್ಥಿತನಾಗಿದ್ದಲ್ಲಿ ಮಾಲವ್ಯ ಯೋಗವಿರುತ್ತದೆ. ಶುಕ್ರನು ತುಲಾ ರಾಶಿಯಲ್ಲಿ 2027ರ ಜನವರಿ 1ರವರೆಗೂ ಸಂಚರಿಸುತ್ತಾನೆ. ಈ ಅವಧಿಯಲ್ಲಿ ಮೇಷ, ಕಟಕ, ತುಲಾ ಮತ್ತು ಮಕರ ರಾಶಿಗಳಿಗೆ ಮಾಲವ್ಯ ಯೋಗದಿಂದ ಶುಭಫಲಗಳು ದೊರೆಯುತ್ತವೆ. ಈ ಅವಧಿಯಲ್ಲಿ ಜನಿಸುವ ಮಕ್ಕಳಿಗೆ ವಿಶೇಷವಾದ ಯೋಗವಿರುತ್ತದೆ.ಮೇಷಸಂಬಂಧದಲ್ಲೇ ವಿವಾಹವಾಗುವ ಯೋಗವಿದ

ಶುಕ್ರನು ವೃಷಭ, ತುಲಾ ಅಥವಾ ಮೀನ ರಾಶಿಗಳಲ್ಲಿ ಸ್ಥಿತನಾಗಿದ್ದಲ್ಲಿ ಮಾಲವ್ಯ ಯೋಗವಿರುತ್ತದೆ. ಶುಕ್ರನು ತುಲಾ ರಾಶಿಯಲ್ಲಿ 2027ರ ಜನವರಿ 1ರವರೆಗೂ ಸಂಚರಿಸುತ್ತಾನೆ. ಈ ಅವಧಿಯಲ್ಲಿ ಮೇಷ, ಕಟಕ, ತುಲಾ ಮತ್ತು ಮಕರ ರಾಶಿಗಳಿಗೆ ಮಾಲವ್ಯ ಯೋಗದಿಂದ ಶುಭಫಲಗಳು ದೊರೆಯುತ್ತವೆ. ಈ ಅವಧಿಯಲ್ಲಿ ಜನಿಸುವ ಮಕ್ಕಳಿಗೆ ವಿಶೇಷವಾದ ಯೋಗವಿರುತ್ತದೆ.ಮೇಷಸಂಬಂಧದಲ್ಲೇ ವಿವಾಹವಾಗುವ ಯೋಗವಿದೆ. ಸಂಗಾತಿಯ ಬಹುದಿನದ ಆಸೆಯಂತೆ ಸ್ತ್ರೀಯರು ಒಡವೆ, ವಸ್ತ್ರಗಳನ್ನು ಕೊಳ್ಳುವ ಸೂಚನೆಗಳಿವೆ. ಸುಖ ಸಂತೃಪ್ತಿಯ ಜೀವನ ನಡೆಸುವಿರಿ. ಈ ಅವಧಿಯಲ್ಲಿ ಆರಂಭಿಸುವ ವ್ಯಾಪಾರ ವ್ಯವಹಾರಗಳು ಬಹುದಿನ ಸುಗಮವಾಗಿ ಸಾಗಲಿದೆ.ಭವಿಷ್ಯದ ಜೀವನಕ್ಕಾಗಿ ಉತ್ತಮ ಬುನಾದಿ ದೊರೆಯುತ್ತದೆ. ದಾನ ಧರ್ಮದಿಂದ ಎಲ್ಲರ ಮನಗೆಲ್ಲುವಿರಿ. ಎಲ್ಲರ ಜೊತೆ ಹೊಂದಿಕೊಂಡು ಬಾಳುವಿರಿ. ಕಲಾವಿದರಿಗೆ ಮತ್ತು ಸಂಗೀತ ನಾಟ್ಯ ಬಲ್ಲವರಿಗೆ ಉತ್ತಮ ಅವಕಾಶಗಳು ದೊರೆಯುತ್ತವೆ. ಮಾತಿನ ಬಲದಿಂದಲೇ ನಿಮ್ಮ ಕೆಲಸ ಸಾಧಿಸುವ ಚತುರತೆ ಇರುತ್ತದೆ.ಅಕ್ಟೋಬರ್ 3ಕ್ಕೆ ಶುಕ್ರ ವಕ್ರಿ: ಈ ರಾಶಿಯವರಿಗೆ ದೊರೆಯಲಿದೆ ವಿಶೇಷ ಫಲಕಟಕಚರ್ಮ ದೋಷದಿಂದ ಗುಣಮುಖರಾಗುವಿರಿ. ನಿಮಗೆ ಆಕರ್ಷಕವೆನಿಸುವ ವಸ್ತುಗಳನ್ನು ದುಬಾರಿ ಎನಿಸಿದರೂ ಕೊಳ್ಳುವಿರಿ. ನಿಮ್ಮ ಆಕರ್ಷಕ ವ್ಯಕ್ತಿತ್ವ ಮತ್ತು ಮುಗುಳ್ನಗೆಯಿಂದ ಕುಟುಂಬದಲ್ಲಿ ಸಂತೋಷ ನೆಲೆಸಿರುತ್ತದೆ. ನಿಮ್ಮ ತಾಯಿಯವರ ಜೊತೆಯಲ್ಲಿ ಇದ್ದ ಭಿನ್ನಾಭಿಪ್ರಾಯವು ಕೊನೆಗೊಳ್ಳಲಿದೆ. ಪ್ರೀತಿ ವಿಶ್ವಾಸ ಮರುಕಳಿಸುತ್ತದೆ. ಲಾಭವಿಲ್ಲದ ಕೆಲಸ ಮಾಡುವುದಿಲ್ಲ. ವ್ಯಾಪಾರದಲ್ಲಿ ಲಾಭವಿದೆ. ಆತ್ಮೀಯರ ಸಹಾಯದಿಂದ ಮನೆಯನ್ನು ಕೊಳ್ಳುವಿರಿ.ಅ.31ರಿಂದ ಜ.14 ರವರೆಗೆ ಸಿಂಹದಲ್ಲಿ ಗುರು ಸಂಚಾರ: ಈ ರಾಶಿಯವರಿಗೆ ಎಚ್ಚರಿಕೆ ಅಗತ್ಯತುಲಾಜೀವನದಲ್ಲಿ ಅನಿರೀಕ್ಷಿತ ಘಟನೆಗಳು ನಡೆಯಲಿವೆ. ಆದರೆ ಅತಿಯಾದ ಆಸೆಯಾಗಲಿ, ನಿರೀಕ್ಷೆಯಾಗಲಿ ಇರುವುದಿಲ್ಲ. ಆದ್ದರಿಂದ ಯಾವುದೇ ಸಂದರ್ಭವನ್ನು ಅನುಕೂಲಕರವಾಗಿ ಬದಲಾಯಿಸಿಕೊಳ್ಳಬಲ್ಲರಿ. ಮೊದಲ ಆದ್ಯತೆಯನ್ನು ನಿಮ್ಮ ಕೆಲಸಗಳಿಗೆ ನೀಡುವಿರಿ. ವಿದ್ಯಾರ್ಥಿಗಳು ವಿದೇಶಿ ಭಾಷೆ, ತಂತ್ರಜ್ಞಾನವನ್ನು ಅಧ್ಯಯನ ಮಾಡುತ್ತಾರೆ. ಆತ್ಮೀಯರ ಜೊತೆಯಲ್ಲಿ ಉದ್ಯಮವೊಂದನ್ನು ಆರಂಭಿಸುವ ಸಾಧ್ಯತೆಗಳಿವೆ. ಹೆಣ್ಣು ಮಕ್ಕಳಿಗೆ ತವರಿನಿಂದ ಹಣದ ಅನುಕೂಲತೆ ದೊರೆಯುತ್ತದೆ. ಸ್ವಂತ ಕೀರ್ತಿ ಮತ್ತು ಪ್ರತಿಷ್ಠೆಗಾಗಿ ಯಾವುದೇ ತ್ಯಾಗವನ್ನು ಮಾಡಬಲ್ಲಿರಿ. ನಿಮ್ಮಲ್ಲಿನ ಮುಂದಾಲೋಚನೆ ಎಲ್ಲರ ಗಮನ ಸೆಳೆಯುತ್ತದೆ.ನೀಚರಾಶಿ ಕನ್ಯಾದಲ್ಲಿ ಶುಕ್ರನ ಸಂಚಾರ; ಈ ರಾಶಿಯವರ ಖರ್ಚುವೆಚ್ಚ ಹೆಚ್ಚಳಮಕರನ್ಯಾಯ ನೀತಿಯ ಹಾದಿಯಲ್ಲಿ ಸಾಗುವಿರಿ. ಸಮಯ ಸಂದರ್ಭವನ್ನು ಅರಿತುಕೊಂಡು ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಉದ್ಯೋಗದಲ್ಲಿ ಪ್ರತಿಷ್ಠಿತ ಸ್ಥಾನವನ್ನು ಗಳಿಸುವಿರಿ. ನಿಮ್ಮ ಬುದ್ಧಿಶಕ್ತಿಗೆ ಸವಾಲೆನಿಸುವ ಜವಾಬ್ದಾರಿಗಳು ನಿಮ್ಮ ಪಾಲಾಗುತ್ತದೆ. ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಲಿದ್ದಾರೆ. ಜನಮೆಚ್ಚುವ ಕೆಲಸ ಕಾರ್ಯಗಳನ್ನು ಮಾಡುವಿರಿ. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಐಷಾರಾಮಿ ಜೀವನ ನಡೆಸುವಿರಿ. ನಿಮ್ಮಲ್ಲಿ ಹೊಂದಾಣಿಕೆಯ ವ್ಯಕ್ತಿತ್ವ ಇರುತ್ತದೆ. ಸಂತಾನಯೋಗವಿರುತ್ತದೆ. ಸುಂದರವಾದ ಮನೆ ಖರೀದಿಸುವ ಅಥವಾ ನಿರ್ಮಿಸುವ ಸೂಚನೆಗಳಿವೆ.