ಬಿಡದಿ ಟೌನ್ಶಿಪ್: 2 ಗ್ರಾಮದಲ್ಲಿ ಭೂ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ
ರಾಮನಗರ: ತಾಲ್ಲೂಕಿನ ಬಿಡದಿ ಹೋಬಳಿಯಲ್ಲಿ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಬಿಡದಿ ಟೌನ್ಶಿಪ್) ಯೋಜನಾ ಪ್ರದೇಶದ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮಗಳಲ್ಲಿ ಭೂ ಸ್ವಾಧೀನಕ್ಕೆ ಸರ್ಕಾರ ಶುಕ್ರವಾರ ಅಂತಿಮ ಅಧಿಸೂಚನೆ ಹೊರಡಿಸಿದೆ. ಇದರೊಂದಿಗೆ ಯೋಜನಾ ಪ್ರದೇಶದ ಒಟ್ಟು 9 ಕಂದಾಯ ಗ್ರಾಮಗಳಲ್ಲೂ ಭೂ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆಯಾಗಿದೆ.ಟೌನ್ಶಿಪ್ ವ್ಯಾಪ್ತಿಯ 9

ರಾಮನಗರ: ತಾಲ್ಲೂಕಿನ ಬಿಡದಿ ಹೋಬಳಿಯಲ್ಲಿ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಬಿಡದಿ ಟೌನ್ಶಿಪ್) ಯೋಜನಾ ಪ್ರದೇಶದ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮಗಳಲ್ಲಿ ಭೂ ಸ್ವಾಧೀನಕ್ಕೆ ಸರ್ಕಾರ ಶುಕ್ರವಾರ ಅಂತಿಮ ಅಧಿಸೂಚನೆ ಹೊರಡಿಸಿದೆ. ಇದರೊಂದಿಗೆ ಯೋಜನಾ ಪ್ರದೇಶದ ಒಟ್ಟು 9 ಕಂದಾಯ ಗ್ರಾಮಗಳಲ್ಲೂ ಭೂ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆಯಾಗಿದೆ.ಟೌನ್ಶಿಪ್ ವ್ಯಾಪ್ತಿಯ 9 ಕಂದಾಯ ಗ್ರಾಮಗಳ ಪೈಕಿ ಮೊದಲಿಗೆ ವಡೇರಹಳ್ಳಿ, ಮಂಡಲಹಳ್ಳಿ ಹಾಗೂ ಕೆಂಪಯ್ಯನಪಾಳ್ಯ ಗ್ರಾಮಗಳಲ್ಲಿ ಭೂ ಸ್ವಾಧೀನಕ್ಕೆ ಸರ್ಕಾರ ಜೂನ್ 10ರಂದು ಅಧಿಸೂಚನೆ ಹೊರಡಿಸಿತ್ತು. ಅದಾಗ ಒಂದು ತಿಂಗಳ ಬಳಿಕ ಜುಲೈ 15ರಂದು ಅರಳಾಳುಸಂದ್ರ, ಬನ್ನಿಗಿರಿ, ಹೊಸೂರು ಹಾಗೂ ಕೆ.ಜಿ. ಗೊಲ್ಲರಪಾಳ್ಯ ಗ್ರಾಮಗಳಲ್ಲಿ ಭೂ ಸ್ವಾಧೀನಕ್ಕೆ ಅಧಿಸೂಚನೆಯಾಗಿತ್ತು.ಅದರ ಬೆನ್ನಲ್ಲೇ ಯೋಜನೆ ಅನುಷ್ಠಾನದ ಹೊಣೆ ಹೊತ್ತಿರುವ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಜಿಬಿಡಿಎ) ಗ್ರಾಮಗಳಲ್ಲಿ ಜಂಟಿ ಪ್ರಮಾಣೀಕರಣ ಅಳತೆ (ಜೆಎಂಸಿ) ಕೆಲಸಕ್ಕೆ ಮುಂದಾಗಿತ್ತು. ಆಗ ಯೋಜನೆ ವಿರೋಧಿಸಿ ಸ್ಥಳೀಯ ರೈತರು ಹಾಗೂ ಜೆಡಿಎಸ್ ಪಕ್ಷದ ಹೋರಾಟ ತೀವ್ರಗೊಳಿಸಿದ್ದರಿಂದ ಉಳಿದೆರಡು ಗ್ರಾಮಗಳ ಅಧಿಸೂಚನೆಗೆ ಸರ್ಕಾರ ಹಿಂದೇಟು ಹಾಕಿತ್ತು. ಹೋರಾಟದ ಕಾವು ತಣ್ಣಗಾಗುತ್ತಿದ್ದಂತೆ ಸರ್ಕಾರ ಇಂದು ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮಕ್ಕೂ ಅಧಿಸೂಚನೆ ಹೊರಡಿಸಿದೆ.1,895 ಎಕರೆ ಸ್ವಾಧೀನ: ಬೈರಮಂಗಲದಲ್ಲಿ 1,866 ಖಾತೆದಾರರಿದ್ದು ಒಟ್ಟು 1,142 ಎಕರೆ 25 ಗುಂಟೆ ಜಮೀನು ಭೂ ಸ್ವಾಧೀನವಾಗಲಿದೆ. ಕಂಚುಗಾರನಹಳ್ಳಿ 1,405 ಖಾತೆದಾರರಿದ್ದು 753 ಎಕರೆ 11 ಗುಂಟೆ ಭೂಮಿ ಸ್ವಾಧೀನವಾಗಲಿದೆ. ಯೋಜನೆಗಾಗಿ ಸರ್ಕಾರ ಒಟ್ಟು 7,481 ಎಕರೆ ಭೂಮಿಯನ್ನು ಸ್ವಾಧಿನಪಡಿಸಿಕೊಳ್ಳಲು ನಿರ್ಧರಿಸಿದೆ.