ಶಬರಿಮಲೆ ಯಾತ್ರಿಗಳಿಗೆ ತಲಾ ₹2 ಲಕ್ಷ ಜೀವ ವಿಮೆ–ಟಿಡಿಬಿ
ತಿರುವನಂತಪುರ: ಶಬರಿಮಲೆ ಯಾತ್ರಾರ್ಥಿಗಳಿಗೆ ಇದೇ ಮೊದಲ ಬಾರಿಗೆ ತಲಾ ₹2 ಲಕ್ಷ ಮೊತ್ತದ ಜೀವ ವಿಮಾ ಯೋಜನೆಯನ್ನು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಪರಿಚಯಿಸಿದೆ.ನವೆಂಬರ್ 17ರಿಂದ ಪ್ರಸಕ್ತ ಸಾಲಿನ ಶಬರಿಮಲೆ ಯಾತ್ರೆ ಆರಂಭವಾಗಲಿದ್ದು, ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಭಕ್ತರು ಮೃತಪಟ್ಟರೆ, ಅವರ ಕುಟುಂಬಕ್ಕೆ ತಲಾ ₹2 ಲಕ್ಷ ಮೊತ್ತದ ವಿ

ತಿರುವನಂತಪುರ: ಶಬರಿಮಲೆ ಯಾತ್ರಾರ್ಥಿಗಳಿಗೆ ಇದೇ ಮೊದಲ ಬಾರಿಗೆ ತಲಾ ₹2 ಲಕ್ಷ ಮೊತ್ತದ ಜೀವ ವಿಮಾ ಯೋಜನೆಯನ್ನು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಪರಿಚಯಿಸಿದೆ.ನವೆಂಬರ್ 17ರಿಂದ ಪ್ರಸಕ್ತ ಸಾಲಿನ ಶಬರಿಮಲೆ ಯಾತ್ರೆ ಆರಂಭವಾಗಲಿದ್ದು, ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಭಕ್ತರು ಮೃತಪಟ್ಟರೆ, ಅವರ ಕುಟುಂಬಕ್ಕೆ ತಲಾ ₹2 ಲಕ್ಷ ಮೊತ್ತದ ವಿಮಾ ಪರಿಹಾರ ಲಭಿಸಲಿದೆ. ‘ಎಲ್ಐಸಿ ಸಹಯೋಗದಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದೆ’ ಎಂದು ಟಿಡಿಬಿ ಅಧ್ಯಕ್ಷ ಕೆ. ಜಯಕುಮಾರ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಈ ಹಿಂದೆ ಯಾತ್ರಿಕರಿಗೆ ಅಪಘಾತ ವಿಮಾ ಯೋಜನೆ ಜಾರಿಗೊಳಿಸಲಾಗಿತ್ತು. ಆದರೆ, ಜೀವ ವಿಮಾ ಯೋಜನೆ ಇದೇ ಮೊದಲು. ವಿಮಾ ಕಂತಿನ ಪೂರ್ಣ ಮೊತ್ತವನ್ನು ಟಿಡಿಬಿಯೇ ಭರಿಸಲಿದೆ. ಇದಕ್ಕಾಗಿ ಅಂದಾಜು ₹1 ಕೋಟಿ ಖರ್ಚಾಗಬಹುದು’ ಎಂದು ಅವರು ಹೇಳಿದರು. ’ಶಬರಿಮಲೆಯಲ್ಲಿ ಅರವಣ ಪ್ರಸಾದಕ್ಕೆ ಯಾವುದೇ ಕೊರತೆ ಇಲ್ಲ’ ಎಂದು ಜಯಕುಮಾರ್ ಸ್ಪಷ್ಟಡಿಸಿದ್ದಾರೆ.
Read the complete story at Prajavani