ಜಿ20 ವಿದೇಶಾಂಗ ಸಚಿವರ ಸಭೆ: ಜೈಶಂಕರ್ ಭಾಗಿ
ವಾಷಿಂಗ್ಟನ್: ‘ಜಾಗತಿಕ ಆರ್ಥಿಕ ಅಸ್ಥಿರತೆ ಮತ್ತು ಭದ್ರತಾ ಸವಾಲುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಜಿ20 ಪಾಲುದಾರ ದೇಶಗಳೊಂದಿಗಿನ ಸಹಕಾರ ಬಲಪಡಿಸಲಾಗುವುದು. ಇಂಧನ ಪೂರೈಕೆ ಸರಪಳಿ ಸುಗಮಗೊಳಿಸಲಾಗುವುದು’ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಹೇಳಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರ ಅಧ್ಯಕ್ಷತೆಯಲ್ಲಿ ಅಟ್ಲಾಂಟದಲ್ಲಿ ಶುಕ್ರವಾರದಿಂದ ಎರಡ

ವಾಷಿಂಗ್ಟನ್: ‘ಜಾಗತಿಕ ಆರ್ಥಿಕ ಅಸ್ಥಿರತೆ ಮತ್ತು ಭದ್ರತಾ ಸವಾಲುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಜಿ20 ಪಾಲುದಾರ ದೇಶಗಳೊಂದಿಗಿನ ಸಹಕಾರ ಬಲಪಡಿಸಲಾಗುವುದು. ಇಂಧನ ಪೂರೈಕೆ ಸರಪಳಿ ಸುಗಮಗೊಳಿಸಲಾಗುವುದು’ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಹೇಳಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರ ಅಧ್ಯಕ್ಷತೆಯಲ್ಲಿ ಅಟ್ಲಾಂಟದಲ್ಲಿ ಶುಕ್ರವಾರದಿಂದ ಎರಡು ದಿನಗಳ ಜಿ20 ವಿದೇಶಾಂಗ ಸಚಿವರ ಸಭೆ ಆರಂಭಗೊಂಡಿದ್ದು, ಭಾರತದ ವಿದೇಶಾಂಗ ವ್ಯವಹಾರ ಸಚಿವ ಎಸ್. ಜೈಶಂಕರ್ ಅವರು ಈ ಸಭೆಯಲ್ಲಿ ಭಾಗವಹಿಸಿದ್ದಾರೆ. ‘ಆರ್ಥಿಕ ಅಸ್ಥಿರತೆಗೆ ಕಾರಣವಾಗುವ ಭೌಗೋಳಿಕ ರಾಜಕೀಯ ಬಿಕ್ಕಟ್ಟನ್ನು ಪರಿಹರಿಸಲು ಅಮೆರಿಕವು ಜಿ20 ಪಾಲುದಾರರೊಂದಿಗೆ ಕೆಲಸ ಮಾಡುತ್ತದೆ’ ಎಂದು ವಿದೇಶಾಂಗ ಇಲಾಖೆ ಹೇಳಿದೆ.ಜೈಶಂಕರ್ ಅವರು ಅಟ್ಲಾಂಟಗೆ ಗುರುವಾರವೇ ಬಂದಿದ್ದಾರೆ. ನವೆಂಬರ್ 1ರಿಂದ 4ವರೆಗೆ ನಡೆಯಲಿರುವ ಕಾಮನ್ವೆಲ್ತ್ ರಾಷ್ಟ್ರಗಳ ಮುಖ್ಯಸ್ಥರ ಸಭೆಗಾಗಿ ಜೈಶಂಕರ್ ಅವರು ಆಂಟಿಗುವಾ, ಬಾರ್ಬುಡಾಗೆ ಪ್ರಯಾಣ ಮಾಡಲಿದ್ದಾರೆ.ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜಿ20 ನಾಯಕರ ಶೃಂಗಸಭೆಯನ್ನು ಮಿಯಾಮಿಯಲ್ಲಿ ಡಿಸೆಂಬರ್ 14 ಮತ್ತು 15ರಂದು ಆಯೋಜಿಸಿದ್ದಾರೆ. ಜಿ20 ಶೃಂಗಸಭೆ ಹೊರತಾಗಿ ಅಮೆರಿಕ, ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾದ ಸಚಿವರು ಸಭೆ ಸೇರಲಿದ್ದಾರೆ.