ಕೊಪ್ಪಳ ಬಂದ್: ಸರ್ಕಾರಿ ಶಾಲಾ, ಕಾಲೇಜು ವಿದ್ಯಾರ್ಥಿಗಳ ಪರದಾಟ
ಕೊಪ್ಪಳ: ಪರಿಸರಕ್ಕೆ ಮಾಲಿನ್ಯ ಉಂಟು ಮಾಡುತ್ತಿರುವ ಕಾರ್ಖಾನೆಗಳು ಮತ್ತು ವಿಸ್ತರಣೆಗೆ ಮುಂದಾಗಿರುವ ಹಲವು ಕಾರ್ಖಾನೆಗಳ ನಡೆ ವಿರೋಧಿಸಿ ಜಿಲ್ಲಾ ಬಚಾವೊ ಆಂದೋಲನ ಸಮಿತಿ ಮತ್ತು ಪರಿಸರ ಹಿತರಕ್ಷಣಾ ವೇದಿಕೆ ಕೊಪ್ಪಳ–ಭಾಗ್ಯನಗರ ಬಂದ್ಗೆ ಶನಿವಾರ ಕರೆ ನೀಡಿದ್ದು ಬಸ್ಗಳ ಸಂಚಾರ ಮಂದಗತಿಯಲ್ಲಿದೆ.ಈಗಿರುವ ಕಾರ್ಖಾನೆಗಳನ್ನು ವಿರೋಧಿಸಿ ಸಂಘಟನೆಗಳು ನಿರಂತರ ಧರಣಿ ನಡೆಸುತ್ತಿ

ಕೊಪ್ಪಳ: ಪರಿಸರಕ್ಕೆ ಮಾಲಿನ್ಯ ಉಂಟು ಮಾಡುತ್ತಿರುವ ಕಾರ್ಖಾನೆಗಳು ಮತ್ತು ವಿಸ್ತರಣೆಗೆ ಮುಂದಾಗಿರುವ ಹಲವು ಕಾರ್ಖಾನೆಗಳ ನಡೆ ವಿರೋಧಿಸಿ ಜಿಲ್ಲಾ ಬಚಾವೊ ಆಂದೋಲನ ಸಮಿತಿ ಮತ್ತು ಪರಿಸರ ಹಿತರಕ್ಷಣಾ ವೇದಿಕೆ ಕೊಪ್ಪಳ–ಭಾಗ್ಯನಗರ ಬಂದ್ಗೆ ಶನಿವಾರ ಕರೆ ನೀಡಿದ್ದು ಬಸ್ಗಳ ಸಂಚಾರ ಮಂದಗತಿಯಲ್ಲಿದೆ.ಈಗಿರುವ ಕಾರ್ಖಾನೆಗಳನ್ನು ವಿರೋಧಿಸಿ ಸಂಘಟನೆಗಳು ನಿರಂತರ ಧರಣಿ ನಡೆಸುತ್ತಿದ್ದು ಇಂದಿಗೆ ಆ ಧರಣಿಗೆ ಒಂದು ವರ್ಷವಾಗಿದೆ. ಆದ್ದರಿಂದ ಬಂದ್ ಕರೆ ಕೊಡಲಾಗಿದೆ.ಇಲ್ಲಿನ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಬಸ್ಗಳ ಸಂಚಾರ ಮಂದಗತಿಯಲ್ಲಿತ್ತು. ಹೊರವಲಯದಿಂದ ಎಂದಿನಂತೆ ಬಸ್ಗಳು ಸಂಚರಿಸುತ್ತಿವೆ. ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ವಿದ್ಯಾರ್ಥಿಗಳ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಿಸಿವೆ. ಆದರೆ ಸರ್ಕಾರಿ ಶಾಲೆಗಳು, ಕಚೇರಿಗಳು, ಬ್ಯಾಂಕ್ಗಳು, ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಸರ್ಕಾರಿ ಶಾಲಾ, ಕಾಲೇಜುಗಳಿಗೆ ಜಿಲ್ಲಾಕೇಂದ್ರದ ಸುತ್ತಮುತ್ತಲಿನ ಊರುಗಳಿಂದ ಬಂದ ವಿದ್ಯಾರ್ಥಿಗಳು ಸಮರ್ಪಕವಾಗಿ ಬಸ್ ಸಿಗದೇ ಪರದಾಡಿದರು.ಬಸ್ ಸಂಚಾರ ನಿಧಾನವಾಗಿ ಆರಂಭಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಂಘಟನೆಗಳ ಮುಖಂಡರು ‘ಕೊಪ್ಪಳ–ಭಾಗ್ಯನಗರದ ಲಕ್ಷಾಂತರ ಜನರ ಜೀವದ ಪ್ರಶ್ನೆಯಾಗಿ ಬಂದ್ ಆಚರಿಸಲಾಗುತ್ತಿದೆ. ಕಾರ್ಖಾನೆಗಳು ಆರಂಭವಾದರೆ ಕೊಪ್ಪಳವೇ ಇರುವುದಿಲ್ಲ. ಇಂಥ ಪ್ರಮುಖ ಸಂದರ್ಭದಲ್ಲಿಯೂ ಬಸ್ ಸಂಚಾರ ಯಾಕೆ ಆರಂಭಿಸುತ್ತೀರಿ. ಸಂಪೂರ್ಣವಾಗಿ ಬಂದ್ ಮಾಡಬೇಕು’ ಎಂದು ಇಲಾಖೆಯ ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದರು.ಸಂಘಟನೆಗಳ ವತಿಯಿಂದ ಮೊದಲು ಗವಿಮಠದಿಂದ ನಗರಸಭೆ ತನಕ ಮೆರವಣಿಗೆ ನಡೆಯಲಿದೆ. ಬಳಿಕ ವೇದಿಕೆ ಕಾರ್ಯಕ್ರಮ ಆಯೋಜನೆಯಾಗಿದೆ.