ಹಾರ್ಮರ್ ದಾಳಿಗೆ ಆಸ್ಟ್ರೇಲಿಯಾ ಪತನ
ಕೇಪ್ಟೌನ್: ಆಫ್ ಸ್ಪಿನ್ನರ್ ಸೈಮನ್ ಹಾರ್ಮರ್ (21.1–14–16–6) ಅವರ ಜೀವನಶ್ರೇಷ್ಠ ಬೌಲಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಮೂರನೇ ಟೆಸ್ಟ್ ಪಂದ್ಯದ ಅಂತಿಮ ದಿನವಾದ ಶನಿವಾರ ಆಸ್ಟ್ರೇಲಿಯಾ ತಂಡವನ್ನು 176 ರನ್ಗಳ ಭಾರಿ ಅಂತರದಿಂದ ಸೋಲಿಸಿತು. ಈ ಗೆಲುವಿನೊಡನೆ ದಕ್ಷಿಣ ಆಫ್ರಿಕಾ 2–1 ರಿಂದ ಸರಣಿ ಜಯಿಸಿತು.ಗೆಲುವಿಗೆ 288 ರನ್ಗಳ ಗುರಿಯೊಡನೆ ಇನಿಂಗ್ಸ್ ಆರಂಭಿಸ

ಕೇಪ್ಟೌನ್: ಆಫ್ ಸ್ಪಿನ್ನರ್ ಸೈಮನ್ ಹಾರ್ಮರ್ (21.1–14–16–6) ಅವರ ಜೀವನಶ್ರೇಷ್ಠ ಬೌಲಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಮೂರನೇ ಟೆಸ್ಟ್ ಪಂದ್ಯದ ಅಂತಿಮ ದಿನವಾದ ಶನಿವಾರ ಆಸ್ಟ್ರೇಲಿಯಾ ತಂಡವನ್ನು 176 ರನ್ಗಳ ಭಾರಿ ಅಂತರದಿಂದ ಸೋಲಿಸಿತು. ಈ ಗೆಲುವಿನೊಡನೆ ದಕ್ಷಿಣ ಆಫ್ರಿಕಾ 2–1 ರಿಂದ ಸರಣಿ ಜಯಿಸಿತು.ಗೆಲುವಿಗೆ 288 ರನ್ಗಳ ಗುರಿಯೊಡನೆ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾಕ್ಕೆ ವೇಗದ ಬೌಲರ್ ಕಗಿಸೊ ರಬಾಡ (39ಕ್ಕೆ3) ಆರಂಭದಲ್ಲೇ ಪೆಟ್ಟು ನೀಡಿದರು. ಮೊದಲ ಓವರಿನಲ್ಲೇ ಮ್ಯಾಟ್ ರೆನ್ಶಾ ಮತ್ತು ಮಾರ್ನಸ್ ಲಾಬುಷೇನ್ ವಿಕೆಟ್ಗಳನ್ನು ಪಡೆದರು.ನಂತರ, 37 ವರ್ಷ ವಯಸ್ಸಿನ ಹಾರ್ಮರ್ ಮಧ್ಯಮ ಮತ್ತು ಕೆಳಕ್ರಮಾಂಕವನ್ನು ಧ್ವಂಸಗೊಳಿಸಿದರು. ಆಸ್ಟ್ರೇಲಿಯಾ 111 ರನ್ಗಳಿಗೆ ಉರುಳಿತು. ಹತ್ತನೇ ಕ್ರಮಾಂಕದಲ್ಲಿ ಆಡಿದ ನೇಥನ್ ಲಯನ್ (33, 57 ಎಸೆತ) ಗರಿಷ್ಠ ವೈಯಕ್ತಿಕ ರನ್ ಗಳಿಸಿದರು. ಹಾರ್ಮರ್ ಪಂದ್ಯದ ಆಟಗಾರನಾದರು.ಈ ಗೆಲುವಿನೊಡನೆ ದಕ್ಷಿಣ ಆಫ್ರಿಕಾ, ಐಸಿಸಿ ಟೆಸ್ಟ್ ತಂಡಗಳ ರ್ಯಾಂಕಿಂಗ್ನಲ್ಲಿ ಆಸ್ಟ್ರೇಲಿಯಾವನ್ನು ಎರಡನೇ ಸ್ಥಾನಕ್ಕೆ ತಳ್ಳಿತು.ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್ನಲ್ಲಿ 329 ರನ್ ಗಳಿಸಿದರೆ, ಆಸ್ಟ್ರೇಲಿಯಾ 429 ರನ್ ಗಳಿಸಿತ್ತು. ಆತಿಥೇಯರು ಎರಡನೇ ಇನಿಂಗ್ಸ್ನಲ್ಲಿ ರಯಾನ್ ರಿಕೆಲ್ಟನ್ (101) ಮತ್ತು ವಿಯಾನ್ ಮುಲ್ಡರ್(115) ಅವರ ಶತಕಗಳ ನೆರವಿನಿಂದ 387 ರನ್ ಗಳಿಸಿತ್ತು.