ಕೆಜಿಎಫ್| ಜಮೀನು ಮಂಜೂರು ಮಾಡಿಸುವುದಾಗಿ ವಂಚನೆ: ಕಂದಾಯ ಸಿಬ್ಬಂದಿ ವಿರುದ್ಧ ದೂರು
ಕೆಜಿಎಫ್: ಸೈನಿಕರ ಕಲ್ಯಾಣ ಕಾರ್ಯಕ್ರಮದಡಿ ನಿವೃತ್ತ ಯೋಧರಿಗೆ ಕೃಷಿಭೂಮಿ ಕೊಡಿಸುವುದಾಗಿ ನಂಬಿಸಿ, ತಾಲ್ಲೂಕು ಕಚೇರಿ ಸಿಬ್ಬಂದಿ ₹4.5 ಲಕ್ಷ ವಂಚಿಸಿದ್ದಾರೆ ಎಂದು ನಗರದ ಓರಿಯಂಟಲ್ ಲೈನ್ ನಿವೃತ್ತ ಸೈನಿಕ ರಾಜಕುಮಾರ್ ರಾಬರ್ಟಸನ್ಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ.ದೂರಿನನ್ವಯ ಪೊಲೀಸರು ತಾಲ್ಲೂಕು ಕಚೇರಿ ಕಂದಾಯ ಇನ್ಸ್ಪೆಕ್ಟರ್ ಸುದೀಪ್ ಜೆಸ್ಸಿ, ಗ್ರಾಮ ಲೆ

ಕೆಜಿಎಫ್: ಸೈನಿಕರ ಕಲ್ಯಾಣ ಕಾರ್ಯಕ್ರಮದಡಿ ನಿವೃತ್ತ ಯೋಧರಿಗೆ ಕೃಷಿಭೂಮಿ ಕೊಡಿಸುವುದಾಗಿ ನಂಬಿಸಿ, ತಾಲ್ಲೂಕು ಕಚೇರಿ ಸಿಬ್ಬಂದಿ ₹4.5 ಲಕ್ಷ ವಂಚಿಸಿದ್ದಾರೆ ಎಂದು ನಗರದ ಓರಿಯಂಟಲ್ ಲೈನ್ ನಿವೃತ್ತ ಸೈನಿಕ ರಾಜಕುಮಾರ್ ರಾಬರ್ಟಸನ್ಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ.ದೂರಿನನ್ವಯ ಪೊಲೀಸರು ತಾಲ್ಲೂಕು ಕಚೇರಿ ಕಂದಾಯ ಇನ್ಸ್ಪೆಕ್ಟರ್ ಸುದೀಪ್ ಜೆಸ್ಸಿ, ಗ್ರಾಮ ಲೆಕ್ಕಿಗ ಚಂದ್ರು, ತಾಲ್ಲೂಕು ಕಚೇರಿಯಲ್ಲಿ ಬ್ರೋಕರ್ ಆಗಿ ಕೆಲಸ ಮಾಡುತ್ತಿರುವ ಪ್ರಭಾಕರ್ ಮತ್ತು ಸರ್ವೆಯರ್ ಮೌಲಾಖಾನ್ ಅವರನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ.ರಾಜ್ಕುಮಾರ್ ಅವರು ಸೇನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಆ ಸಂದರ್ಭದಲ್ಲಿ ಅವರ ಪತ್ನಿ ಪ್ರಿಯಾಂಕ ಅವರು ಜಾತಿ ಪ್ರಮಾಣ ಪತ್ರ ಮಾಡಿಸಲು ತಾಲ್ಲೂಕು ಕಚೇರಿಗೆ ಹೋಗಿದ್ದರು. ಪ್ರಮಾಣ ಪತ್ರ ಪಡೆಯಲು ಸುದೀಪ್ ಜೆಸ್ಸಿ ಅವರನ್ನು ಭೇಟಿಯಾದಾಗ, ಅವರು ಸೈನಿಕ ಕಲ್ಯಾಣ ಕಾರ್ಯಕ್ರಮದ ಅಡಿಯಲ್ಲಿ ಸೈನಿಕರಿಗೆ ಕೃಷಿ ಭೂಮಿ ನೀಡುವ ಯೋಜನೆ ಇದೆ. ಅದನ್ನು ಪಡೆಯಬಹುದು ಎಂದು ಆಮಿಷ ವೊಡ್ಡಿದ್ದಾರೆ. ಅದರಂತೆ 2024ರಲ್ಲಿ ಕೃಷಿಭೂಮಿಗಾಗಿ ಅರ್ಜಿ ಸಲ್ಲಿಸಲಾಗಿತ್ತು.‘ಕಂದಾಯ ಇನ್ಸ್ಪೆಕ್ಟರ್ ಸುದೀಪ್ ಜೆಸ್ಸಿ ಅವರು ಗರುಡಾಧರ ಹಳ್ಳಿ, ಕ್ಯಾಸಂಬಳ್ಳಿ ಮತ್ತು ಪಂತನಹಳ್ಳಿಗಳಲ್ಲಿ ಜಮೀನು ಇದೆ. ಅದನ್ನು ಮಾಡಿಸಿಕೊಡುವುದಾಗಿ ಹೇಳಿ ಹಂತ ಹಂತವಾಗಿ ₹4.5 ಲಕ್ಷ ಪಡೆದಿದ್ದಾರೆ. ನನ್ನ ಪತ್ನಿ ಮನೆಯಲ್ಲಿದ್ದ ಚಿನ್ನ ಅಡವಿಟ್ಟು ಕಂದಾಯ ಸಿಬ್ಬಂದಿಗೆ ಹಣ ನೀಡಿದ್ದಾರೆ. ನಂತರ ಜಮೀನು ಮಂಜೂರಾಗಿದೆ ಎಂಬ ನಕಲಿ ದಾಖಲೆ ನೀಡಿದ್ದಾರೆ. ಆದರೆ ಆ ದಾಖಲೆಯನ್ನು ಪರಿಶೀಲಿಸಿದಾಗ, ಅದರಲ್ಲಿ ಜಿಲ್ಲಾಧಿಕಾರಿಗಳ ಸಹಿ ಆಗಲಿ, ಅದೇಶವಾಗಲಿ ಇರಲಿಲ್ಲ. ಈ ಬಗ್ಗೆ ಸುದೀಪ್ ಜೆಸ್ಸಿ ಅವರನ್ನು ಪ್ರಶ್ನಿಸಿದಾಗ, ಹಾರಿಕೆ ಉತ್ತರ ಕೊಟ್ಟಿದ್ದಾರೆ’ ಎಂದು ರಾಜ್ಕುಮಾರ್ ಜಿಲ್ಲಾಧಿಕಾರಿ, ಎಸ್ಪಿಗೆ ದೂರು ನೀಡಿದ್ದಾರೆ.‘ಹಿಂದಿನ ತಹಶೀಲ್ದಾರ ಭರತ್ ಅವರ ಸೂಚನೆಯಂತೆ ಪಂತನಹಳ್ಳಿಯಲ್ಲಿದ್ದ ಸರ್ಕಾರಿ ಜಮೀನನ್ನು ಅಳೆಯಲು ಹೋಗಿದ್ದಾಗ, ಅಲ್ಲಿನ ಜನ ಊರಿನ ಜಾಗವನ್ನು ತಮ್ಮದೇ ಗ್ರಾಮದ ನಿವೇಶನ ರಹಿತರಿಗೆ ನೀಡಬೇಕು ಎಂದು ಸರ್ವೆಗೆ ಅಡ್ಡಿ ಪಡಿಸಿದ್ದರು’ ಎಂದು ಸರ್ವೆಯರ್ ಮೌಲಾಖಾನ್ ಪೊಲೀಸರಿಗೆ ತಿಳಿಸಿದ್ದಾರೆ.261031-18-493641845