ಸುಗಮ ಸಂಚಾರಕ್ಕೆ ರಸ್ತೆ ಸಂಪರ್ಕ, ಶಾಸಕ ಎಚ್.ಟಿ. ಮಂಜು
ಕಿಕ್ಕೇರಿ: ಗ್ರಾಮೀಣ ಜನರ ಬದುಕಿನ ಕೊಂಡಿಯಾಗಿ ಸಾರಿಗೆ ರಸ್ತೆ ಸಂಪರ್ಕ ರಸ್ತೆಗಳಿವೆ ಎಂದು ಶಾಸಕ ಎಚ್.ಟಿ. ಮಂಜು ಹೇಳಿದರು.ಹೋಬಳಿಯ ತುಳಸಿ, ಬಸವನಹಳ್ಳಿ ಗ್ರಾಮದ ರಸ್ತೆ ಹಾಗೂ ಒಳಚರಂಡಿ ಅಭಿವೃದ್ಧಿ ಕಾಮಗಾರಿಗೆ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ‘ಹಳ್ಳಿಗಾಡಿನ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಇವಗಳ ಅಭಿವೃದ್ಧಿಗೆ ವಿರೋಧ ಪಕ್ಷದ ಶಾಸಕನಾಗಿ ಅನುದಾನ

ಕಿಕ್ಕೇರಿ: ಗ್ರಾಮೀಣ ಜನರ ಬದುಕಿನ ಕೊಂಡಿಯಾಗಿ ಸಾರಿಗೆ ರಸ್ತೆ ಸಂಪರ್ಕ ರಸ್ತೆಗಳಿವೆ ಎಂದು ಶಾಸಕ ಎಚ್.ಟಿ. ಮಂಜು ಹೇಳಿದರು.ಹೋಬಳಿಯ ತುಳಸಿ, ಬಸವನಹಳ್ಳಿ ಗ್ರಾಮದ ರಸ್ತೆ ಹಾಗೂ ಒಳಚರಂಡಿ ಅಭಿವೃದ್ಧಿ ಕಾಮಗಾರಿಗೆ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ‘ಹಳ್ಳಿಗಾಡಿನ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಇವಗಳ ಅಭಿವೃದ್ಧಿಗೆ ವಿರೋಧ ಪಕ್ಷದ ಶಾಸಕನಾಗಿ ಅನುದಾನದ ಕೊರತೆ ಎದುರಿಸುತ್ತಿರುವೆ. ಹೋರಾಟ ಮಾಡಿ ಅನುದಾನ ತರಲಾಗುತ್ತಿದ್ದು, ತಾಲ್ಲೂಕಿನ ರಸ್ತೆ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುತ್ತಿರುವೆ’ ಎಂದರು.‘ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಬೇಕು. ಈ ಪ್ರದೇಶದ ಗ್ರಾಮಸ್ಥರು ಕಾಮಗಾರಿ ಗುಣಮಟ್ಟಕ್ಕೆ ವೀಕ್ಷಣೆ ಮಾಡಬೇಕು. ನಿಮ್ಮೂರಿನ ರಸ್ತೆ, ಒಳಚರಂಡಿ ಗುಣಮಟ್ಟದಲ್ಲಿ ಯಾವುದೇ ರಾಜೀ ಮಾಡಿಕೊಳ್ಳದಿರಿ’ ಎಂ ದರು.ಜೆಡಿಎಸ್ ಹೋಬಳಿ ಅಧ್ಯಕ್ಷ ಕಾಯಿ ಮಂಜೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್, ಟಿಎಪಿಸಿಎಂಎಸ್ ನಿರ್ದೇಶಕ ಮಧು, ತಾ.ಪಂ. ಮಾಜಿ ಸದಸ್ಯ ಕೃ?ಗೌಡ, ಶೇಖರ್, ಕುಮಾರ್ ಭಾಗವಹಿಸಿದ್ದರು.261031-40-387692083
Read the complete story at Prajavani