ಕರ್ನಾಟಕ ಅರಣ್ಯ ಪಡೆಗಳ ಮುಖ್ಯಸ್ಥರಾಗಿ ಕನ್ನಡಿಗ IFS ಅಧಿಕಾರಿ ಬಿ.ಪಿ.ರವಿ ನೇಮಕ
ಬೆಂಗಳೂರು: ಕರ್ನಾಟಕ ಅರಣ್ಯಪಡೆಗಳ ಮುಖ್ಯಸ್ಥರಾಗಿ ಕನ್ನಡಿಗ ಅಧಿಕಾರಿ ಬಿ.ಪಿ.ರವಿ ನೇಮಕಗೊಂಡಿದ್ದಾರೆ.ಈವರೆಗೂ ಮುಖ್ಯಸ್ಥರಾಗಿದ್ದ ಮೀನಾಕ್ಷಿ ನೇಗಿ ಅವರು ನಿವೃತ್ತಿರಾಗಿರುವುದರಿಂದ ಕರ್ನಾಟಕ ಸರ್ಕಾರ ರವಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.1992ನೇ ಬ್ಯಾಚ್ನ ಐಎಫ್ಎಸ್ ಅಧಿಕಾರಿಯಾಗಿರುವ ರವಿ ಅವರು ಬೀದರ್, ಸಾಗರದಲ್ಲಿ ಡಿಸಿಎಫ್ ಅಗಿ, ಮೈಸೂರು, ಚಾಮರಾಜನಗರ ವೃತ
ಬೆಂಗಳೂರು: ಕರ್ನಾಟಕ ಅರಣ್ಯಪಡೆಗಳ ಮುಖ್ಯಸ್ಥರಾಗಿ ಕನ್ನಡಿಗ ಅಧಿಕಾರಿ ಬಿ.ಪಿ.ರವಿ ನೇಮಕಗೊಂಡಿದ್ದಾರೆ.ಈವರೆಗೂ ಮುಖ್ಯಸ್ಥರಾಗಿದ್ದ ಮೀನಾಕ್ಷಿ ನೇಗಿ ಅವರು ನಿವೃತ್ತಿರಾಗಿರುವುದರಿಂದ ಕರ್ನಾಟಕ ಸರ್ಕಾರ ರವಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.1992ನೇ ಬ್ಯಾಚ್ನ ಐಎಫ್ಎಸ್ ಅಧಿಕಾರಿಯಾಗಿರುವ ರವಿ ಅವರು ಬೀದರ್, ಸಾಗರದಲ್ಲಿ ಡಿಸಿಎಫ್ ಅಗಿ, ಮೈಸೂರು, ಚಾಮರಾಜನಗರ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ, ಮೈಸೂರಿನ ಚಾಮರಾಜೇಂದ್ರ ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿದ್ದರು.ಬಡ್ತಿ ನಂತರ ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರೂ ಆಗಿದ್ದರು. ಸದ್ಯ ಕಾರ್ಯ ಯೋಜನೆ, ಸಂಶೋಧನೆ ವಿಭಾಗದ ಪ್ರಧಾನ ಮುಖ್ಯ ಅರಣ್ಯಸಂರಕ್ಷಣಾಧಿಕಾರಿಯಾಗಿದ್ದರು.ಇತ್ತೀಚಿನ ವರ್ಷಗಳಲ್ಲಿ ಕನ್ನಡಿಗರು ಈ ಹುದ್ದೆಗೆ ಏರಿರಲಿಲ್ಲ.ರವಿ ಅವರು ಕರ್ನಾಟಕದ ಮೃಗಾಲಯಗಳ ಪ್ರಗತಿಗೆ ಒತ್ತು ನೀಡಿ ಹೊಸತನ ತಂದವರು. ಆನೆ, ಹುಲಿ ಸೆರೆ ಕಾರ್ಯಾಚರಣೆಯಲ್ಲೂ ತಜ್ಞರು. ಸದ್ಯ ಅರಣ್ಯ ಭೂಮಿಗಳ ಗಣಕೀಕರಣ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದರು.