ಹೊಸಕೋಟೆ| ಕೇಂದ್ರದ ಹುದ್ದೆಗಳಿಗೆ ದಕ್ಷಿಣದವರ ನಿರಾಶಕ್ತಿ: ಎಸ್.ಟಿ.ಅರುಣಾ
ಸೂಲಿಬೆಲೆ (ಹೊಸಕೋಟೆ): ಜಾಗತೀಕರಣದ ಸಂದರ್ಭದಲ್ಲಿ ಪ್ರತಿ ವ್ಯಕ್ತಿಯಲ್ಲೂ ಸೃಜನಾತ್ಮಕ ಕೌಶಲ ಇದ್ದಾಗ ಮಾತ್ರ ಸಾಧನೆ ಮಾಡಲು ಸಾಧ್ಯ. ಸೃಜನಶೀಲತೆ ಕೊರತೆ ದಕ್ಷಿಣ ಭಾರತೀಯರಲ್ಲಿ ಎದ್ದು ಕಾಣುತ್ತಿದೆ ಎಂದು ಸಿಎಸ್ಐಆರ್– ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯ (ಎನ್ಎಎಲ್) ಎಂಜಿನಿಯರಿಂಗ್ ಮುಖ್ಯಸ್ಥೆ ಎಸ್.ಟಿ.ಅರುಣಾ ಹೇಳಿದರು.ತಾಲ್ಲೂಕಿನ ಸೂಲಿಬೆಲೆ ಸರ್ಕಾರಿ ಪ್ರಥಮ ದರ್

ಸೂಲಿಬೆಲೆ (ಹೊಸಕೋಟೆ): ಜಾಗತೀಕರಣದ ಸಂದರ್ಭದಲ್ಲಿ ಪ್ರತಿ ವ್ಯಕ್ತಿಯಲ್ಲೂ ಸೃಜನಾತ್ಮಕ ಕೌಶಲ ಇದ್ದಾಗ ಮಾತ್ರ ಸಾಧನೆ ಮಾಡಲು ಸಾಧ್ಯ. ಸೃಜನಶೀಲತೆ ಕೊರತೆ ದಕ್ಷಿಣ ಭಾರತೀಯರಲ್ಲಿ ಎದ್ದು ಕಾಣುತ್ತಿದೆ ಎಂದು ಸಿಎಸ್ಐಆರ್– ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯ (ಎನ್ಎಎಲ್) ಎಂಜಿನಿಯರಿಂಗ್ ಮುಖ್ಯಸ್ಥೆ ಎಸ್.ಟಿ.ಅರುಣಾ ಹೇಳಿದರು.ತಾಲ್ಲೂಕಿನ ಸೂಲಿಬೆಲೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ‘ಕ್ಯಾಂಪಸ್ನಿಂದ ವೃತ್ತಿಜೀವನಕ್ಕೆ– ಬೌದ್ಧಿಕ ಹಕ್ಕುಸ್ವಾಮ್ಯ’ ಕುರಿತು ನಡೆದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಎಷ್ಟೋ ಬಾರಿ ಉನ್ನತ ಹುದ್ದೆಗಳಿಗೆ ನಡೆಸಿದ ಸಂದರ್ಶನದಲ್ಲಿ ದಕ್ಷಿಣ ಭಾರತದಿಂದ ಒಬ್ಬರೂ ಪಾಲ್ಗೊಂಡಿರುವುದಿಲ್ಲ. ಇದು ಹೀಗೆ ಮುಂದುವರಿದರೆ ಮುಂದೊಂದು ದಿನ ಕೇಂದ್ರದ ಅಡಿ ಬರುವ ಇಲಾಖೆಗಳಲ್ಲಿ ಯಾರೊಬ್ಬರು ದಕ್ಷಿಣ ಭಾರತದವರು ಕರ್ತವ್ಯ ನಿರ್ವಹಿಸದಿರುವ ಸನ್ನಿವೇಶ ಸೃಷ್ಟಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.‘ಅವಕಾಶಗಳು ನಮ್ಮನ್ನು ಹೂಡಿಕೊಂಡು ಬರುವುದಿಲ್ಲ. ನಾವೇ ಅವಕಾಶ ಹುಡಿಕೊಂಡು ಹೋಗಬೇಕು. ಒಂದು ಬಾರಿ ಅವಕಾಶ ಕೈತಪ್ಪಿತು ಎಂದು ನಿರಾಸೆಗೆ ಒಳಗಾದರೆ ಜೀವನದಲ್ಲಿ ಸಾಧನೆಯ ಶಿಖರ ತಲುಪಲು ಸಾಧ್ಯವಿಲ್ಲ’ ಎಂದರು.ಎಐ ತಂತ್ರಜ್ಞಾನ ಅವಕಾಶಗಳ ಮಹಾಪೂರವನ್ನೇ ಸೃಷ್ಟಿಸುತ್ತಿದೆ. ಎಐ ಯುಗಕ್ಕೆ ಪೂರಕ ಜ್ಞಾನ, ಶಿಸ್ತನ್ನು ವಿದ್ಯಾರ್ಥಿಗಳು ಸಿದ್ಧಿಸಿಕೊಂಡರೆ ಮಾತ್ರ ವಿದ್ಯಾರ್ಥಿ ಬದುಕು ಹಸನಾಗಲು ಸಾಧ್ಯ ಎಂದು ಹೇಳಿದರು.ಸಿಎಸ್ಐಆರ್– ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯ (ಎನ್ಎಎಲ್) ವಿಜ್ಞಾನಿ ಮುಖ್ಯಸ್ಥ ಬಿ.ಎಸ್.ಶಿವರಾಮ್ ಅವರು ಪೇಟೆಂಟ್ ಮಹತ್ವ, ಅದರ ನಿಯಮಾವಳಿ ಬಗ್ಗೆ ತಿಳಿಸಿದರು.ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಗೋಪಾಲ್ ಗೌಡ, ಕೃತಕ ಬುದ್ಧಿಮತ್ತೆಗಿಂತಲೂ (ಎಐ) ಗ್ರಂಥಾಲಯಗಳೇ ಜ್ಞಾನದ ಭಂಡಾರವಾಗಿದೆ. ಮಾನವನ ಬೌದ್ಧಿಕ ಮಟ್ಟ ಇಮ್ಮಡಿಗೊಳಿಸುವಲ್ಲಿ ಅವುಗಳು ವಹಿಸುತ್ತಿದ್ದ ಸ್ಥಾನವನ್ನು ಯಾವ ಎ.ಐ ತಂತ್ರಜ್ಞಾನದಿಂದಲೂ ತುಂಬಲು ಸಾಧ್ಯವಿಲ್ಲ ಎಂದು ಹೇಳಿದರು.ಪ್ರತಿದಿನ ವ್ಯರ್ಥವಾಗಿ ಗಂಟೆಗಟ್ಟಲೇ ಮೊಬೈಲ್ ನೋಡಿಕೊಂಡು ಕಾಲ ಕಳೆಯುವ ಜನಕ್ಕೆ ದಿನಕ್ಕೆ ಒಂದು ತಾಸು ಪುಸ್ತಕ ಓದಿದರೆ ಜಗದ ಬದುಕಿನ ಭವಣೆ ಅರ್ಥ ಮಾಡಿಕೊಳ್ಳುವುದು ಸುಲಭವಾಗಲಿದೆ ಎಂದರು.ಪ್ರಾಂಶುಪಾಲರಾದ ಕಲ್ಪನಾ, ಗ್ರಂಥಪಾಲಕ ನರಸಪ್ಪ, ಪ್ರಾಧ್ಯಾಪಕರಾದ ಅಶ್ವತ್ಥ್ ನಾರಾಯಣ್, ಪಾಷಾ, ಪ್ರಕಾಶ್, ವೆಂಕಟರವಣಪ್ಪ, ಸಂಗೀತ, ಗಿರೀಶ್, ಸಿಡಿಸಿ ಸದಸ್ಯರಾದ ನಯಾಜ್, ಜಿಯಾ ಉಲ್ಲಾ, ಆನಂದ್, ಪ್ರಶಾಂತ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜನಾರ್ದನರೆಡ್ಡಿ, ಚೆನ್ನಕೃಷ್ಣಪ್ಪ, ಮಹೇಶ್, ಯಶೋದ ಉಪಸ್ಥಿತರಿದ್ದರು.ಕಾರ್ಯಕ್ರಮ ನಿಮಿತ್ತ ಪುಸ್ತಕ ಪ್ರದರ್ಶನ ಆಯೋಜಿಸಲಾಗಿತ್ತು. ಗ್ರಂಥಾಲಯ ಪಿತಾಮಹ ಎಸ್.ಆರ್.ರಂಗನಾಥನ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.261031-15-44789333