ವಾಯುಪಡೆ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ಅಧಿಕಾರ ಸ್ವೀಕಾರ
ನವದೆಹಲಿ: ಏರ್ ಚೀಫ್ ಮಾರ್ಷಲ್ ಅಶುತೋಷ್ ದೀಕ್ಷಿತ್ ಅವರು ಭಾರತೀಯ ವಾಯುಪಡೆಯ 29ನೇ ಮುಖ್ಯಸ್ಥರಾಗಿ ಶನಿವಾರ ಅಧಿಕಾರ ವಹಿಸಿಕೊಂಡಿದ್ದಾರೆ.ವಾಯುಪಡೆಯಲ್ಲಿ 43 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಏರ್ ಚೀಫ್ ಮಾರ್ಷಲ್ ಎ. ಪಿ. ಸಿಂಗ್ ಅವರ ಉತ್ತರಾಧಿಕಾರಿಯಾಗಿ ದೀಕ್ಷಿತ್ ಅವರು ಈ ಹುದ್ದೆಯನ್ನು ಅಲಂಕರಿಸಿದ್ದಾರೆ. 2028ರ ಡಿಸೆಂಬರ್ವರೆಗೆ ಇವರ ಅಧಿಕಾರಾವಧಿ ಇ

ನವದೆಹಲಿ: ಏರ್ ಚೀಫ್ ಮಾರ್ಷಲ್ ಅಶುತೋಷ್ ದೀಕ್ಷಿತ್ ಅವರು ಭಾರತೀಯ ವಾಯುಪಡೆಯ 29ನೇ ಮುಖ್ಯಸ್ಥರಾಗಿ ಶನಿವಾರ ಅಧಿಕಾರ ವಹಿಸಿಕೊಂಡಿದ್ದಾರೆ.ವಾಯುಪಡೆಯಲ್ಲಿ 43 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಏರ್ ಚೀಫ್ ಮಾರ್ಷಲ್ ಎ. ಪಿ. ಸಿಂಗ್ ಅವರ ಉತ್ತರಾಧಿಕಾರಿಯಾಗಿ ದೀಕ್ಷಿತ್ ಅವರು ಈ ಹುದ್ದೆಯನ್ನು ಅಲಂಕರಿಸಿದ್ದಾರೆ. 2028ರ ಡಿಸೆಂಬರ್ವರೆಗೆ ಇವರ ಅಧಿಕಾರಾವಧಿ ಇರಲಿದೆ ಎಂದು ಕೇಂದ್ರ ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.ದೀಕ್ಷಿತ್ ಅವರು 3,500 ಗಂಟೆಗಳ ಅವಧಿಗೆ ವಿವಿಧ ಯುದ್ಧ ವಿಮಾನಗಳನ್ನು ಹಾರಿಸಿರುವ ಪರಿಣತರಾಗಿದ್ದು, 1986ರ ಡಿಸೆಂಬರ್ನಲ್ಲಿಯೇ ಯುದ್ಧ ವಿಮಾನಗಳ ಪಡೆಗೆ ಸೇರ್ಪಡೆಗೊಂಡಿದ್ದರು. ಮಿರಾಜ್–2000, ಎಂಐಜಿ ಕಿರಣ್, ಜಾಗ್ವಾರ್, ಐಎಲ್–78, ಹಾಕ್ ಹಾಗೂ ದೇಶಿ ಯುದ್ಧವಿಮಾನ ತೇಜಸ್ನಲ್ಲೂ ಹಾರಾಟ ನಡೆಸಿದ ಅನುಭವವನ್ನು ಹೊಂದಿದ್ದಾರೆ.4 ದಶಕಗಳ ಸೇವಾ ಅವಧಿಯಲ್ಲಿ ಆಪರೇಷನ್ ಸಫೇದ್ ಸಾಗರ್, ಆಪರೇಷನ್ ರಕ್ಷಕ್, ಆಪರೇಷನ್ ಸಿಂಧೂರ ಸೇರಿದಂತೆ ವಿವಿಧ ಕಾರ್ಯಾಚರಣೆಗಳಲ್ಲಿ ದೀಕ್ಷಿತ್ ಸಕ್ರಿಯರಾಗಿದ್ದರು.Ace fighter pilot Air Chief Marshal Ashutosh Dixit today took over as the new Chief of the Air Staff from outgoing chief Air Chief Marshal AP Singh.(Source: Indian Air Force) pic.twitter.com/YuBZAv7L5z— ANI (@ANI) October 31, 2026