75 ವರ್ಷಗಳ ಹಿಂದೆ: ಬೌರಿಂಗ್ ಆಸ್ಪತ್ರೆ ಕಾಂಪೌಂಡರ್ ದಸ್ತಗಿರಿ
75 ವರ್ಷಗಳ ಹಿಂದೆ, ಬುಧವಾರ, 31–10–1951ಬೌರಿಂಗ್ ಆಸ್ಪತ್ರೆ ಕಾಂಪೌಂಡರ್ ದಸ್ತಗಿರಿಬೆಂಗಳೂರು, ಅ. 30– ಆಸ್ಪತ್ರೆಯಿಂದ ಕಳ್ಳತನದಲ್ಲಿ ಔಷಧಿಗಳನ್ನು ಸಾಗಿಸಿ ಹೊರಗಡೆ ಮಾರುತ್ತಿದ್ದಾರೆಂಬ ಆಪಾದನೆ ಮೇಲೆ ಬೌರಿಂಗ್ ಆಸ್ಪತ್ರೆಯಲ್ಲಿ ಕಾಂಪೌಂಡರ್ ಆಗಿರುವ ಸುಮಾರು 45 ವರ್ಷ ವಯಸ್ಸಿನ ತಂಗರಾಜ್ ಎಂಬುವರನ್ನು ನಿನ್ನೆ ನಗರದ ಪೊಲೀಸರು ದಸ್ತಗಿರಿ ಮಾಡಿದರು.ನಗರದಲ್ಲಿರುವ

75 ವರ್ಷಗಳ ಹಿಂದೆ, ಬುಧವಾರ, 31–10–1951ಬೌರಿಂಗ್ ಆಸ್ಪತ್ರೆ ಕಾಂಪೌಂಡರ್ ದಸ್ತಗಿರಿಬೆಂಗಳೂರು, ಅ. 30– ಆಸ್ಪತ್ರೆಯಿಂದ ಕಳ್ಳತನದಲ್ಲಿ ಔಷಧಿಗಳನ್ನು ಸಾಗಿಸಿ ಹೊರಗಡೆ ಮಾರುತ್ತಿದ್ದಾರೆಂಬ ಆಪಾದನೆ ಮೇಲೆ ಬೌರಿಂಗ್ ಆಸ್ಪತ್ರೆಯಲ್ಲಿ ಕಾಂಪೌಂಡರ್ ಆಗಿರುವ ಸುಮಾರು 45 ವರ್ಷ ವಯಸ್ಸಿನ ತಂಗರಾಜ್ ಎಂಬುವರನ್ನು ನಿನ್ನೆ ನಗರದ ಪೊಲೀಸರು ದಸ್ತಗಿರಿ ಮಾಡಿದರು.ನಗರದಲ್ಲಿರುವ ಔಷಧಿ ಅಂಗಡಿಯಲ್ಲಿ ಔಷಧಿಯೊಂದನ್ನು ಕಂಪನಿ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಮಾರುತ್ತಿದ್ದರೆಂದೂ, ಈ ಸಂದರ್ಭದಲ್ಲಿ ಬಂದ ದೂರಿನ ಬಗ್ಗೆ ನಗರ ಪೊಲೀಸರು ಕಳೆದ ಐದು ತಿಂಗಳಿನಿಂದ ತನಿಖೆ ನಡೆಸುತ್ತಿದ್ದರೆಂದೂ ವರದಿಯಾಗಿದೆ.ನಿನ್ನೆ ಸಂಜೆ ತಂಗರಾಜ್ ಆಸ್ಪತ್ರೆಯಿಂದ ಔಷಧಿ ತೆಗೆದುಕೊಂಡು ಆ ಅಂಗಡಿಗೆ ಹೋಗುವಾಗ ಕೆಂಗೇರಿ ಗೇಟ್ ಪೊಲೀಸ್ ಸ್ಟೇಷನ್ನಿನ ಇನ್ಸ್ಸ್ಪೆಕ್ಟರ್ ಪುಟ್ಟಪ್ಪನವರು ಹಿಡಿದು ದಸ್ತಗಿರಿ ಮಾಡಿದರು.
Read the complete story at Prajavani