ಈಜುಕೊಳದಲ್ಲಿ ಕರೆಂಟ್ ಶಾಕ್?: ಹಲಸೂರು ಬಳಿ ಹೋಟೆಲಿನಲ್ಲಿ ಇಬ್ಬರು ವಿದೇಶಿಗರ ಸಾವು
ಬೆಂಗಳೂರು: ಹಲಸೂರು ಸಮೀಪದ ಕಾನ್ರಾಡ್ ಹೋಟೆಲ್ನ ಮೂರನೇ ಮಹಡಿಯಲ್ಲಿರುವ ಈಜುಕೊಳದಲ್ಲಿ ವಿದ್ಯುತ್ ಸ್ಪರ್ಶದಿಂದ ಇಬ್ಬರು ವಿದೇಶಿ ಪ್ರಜೆಗಳು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.ಜರ್ಮನಿ ಮತ್ತು ಸ್ಲೊವಾಕಿಯಾ ದೇಶದ ಇಬ್ಬರು ಪ್ರಜೆಗಳು ಭಾನುವಾರ ಸಂಜೆ ಈಜುಕೊಳದಲ್ಲಿದ್ದಾಗ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.ಘಟನೆ ವೇಳೆ ಇಬ್ಬರನ್ನು ರಕ್ಷಿಸಲ

ಬೆಂಗಳೂರು: ಹಲಸೂರು ಸಮೀಪದ ಕಾನ್ರಾಡ್ ಹೋಟೆಲ್ನ ಮೂರನೇ ಮಹಡಿಯಲ್ಲಿರುವ ಈಜುಕೊಳದಲ್ಲಿ ವಿದ್ಯುತ್ ಸ್ಪರ್ಶದಿಂದ ಇಬ್ಬರು ವಿದೇಶಿ ಪ್ರಜೆಗಳು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.ಜರ್ಮನಿ ಮತ್ತು ಸ್ಲೊವಾಕಿಯಾ ದೇಶದ ಇಬ್ಬರು ಪ್ರಜೆಗಳು ಭಾನುವಾರ ಸಂಜೆ ಈಜುಕೊಳದಲ್ಲಿದ್ದಾಗ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.ಘಟನೆ ವೇಳೆ ಇಬ್ಬರನ್ನು ರಕ್ಷಿಸಲು ಮುಂದಾದ ಹೋಟೆಲ್ನಲ್ಲಿ ತಂಗಿದ್ದ ಅಮೆರಿಕದ ಪ್ರಜೆ ಹಾಗೂ ಹೋಟೆಲ್ನ ಈಜುಕೊಳದ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Read the complete story at Prajavani