ಕಲಬುರಗಿ: ಬೀದಿನಾಯಿ ಕಚ್ಚಿ 4 ವರ್ಷದ ಬಾಲಕ ಸಾವು
ಕಲಬುರಗಿ: ಬೀದಿನಾಯಿ ಕಚ್ಚಿ 4 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ನಗರದ ಧರಿಯಾಪುರ– ಕೋಟನೂರ ಜಿಡಿಎ ಬಡಾವಣೆಯಲ್ಲಿ ಶುಕ್ರವಾರ ನಡೆದಿದೆ.ತಾಲ್ಲೂಕಿನ ಜಂಬಗಾ(ಬಿ) ಗ್ರಾಮದ ಶರಣಬಸಪ್ಪ ವಗ್ದರಗಿ ಅವರ ಪುತ್ರ ಮನೋಜ ಮೃತ ಬಾಲಕ. ಶುಕ್ರವಾರ ಮಧ್ಯಾಹ್ನ ಗಾಣದೇವತೆ ದೇವಸ್ಥಾನದ ರಸ್ತೆಯಲ್ಲಿ ಬಾಲಕ ಆಟವಾಡುತ್ತಿದ್ದ ವೇಳೆ ಬೀದಿನಾಯಿ ದಾಳಿ ಮಾಡಿದೆ. ಹೊಟ್ಟೆ ಮತ್ತು ದೇಹದ ಹಲವೆಡೆ

ಕಲಬುರಗಿ: ಬೀದಿನಾಯಿ ಕಚ್ಚಿ 4 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ನಗರದ ಧರಿಯಾಪುರ– ಕೋಟನೂರ ಜಿಡಿಎ ಬಡಾವಣೆಯಲ್ಲಿ ಶುಕ್ರವಾರ ನಡೆದಿದೆ.ತಾಲ್ಲೂಕಿನ ಜಂಬಗಾ(ಬಿ) ಗ್ರಾಮದ ಶರಣಬಸಪ್ಪ ವಗ್ದರಗಿ ಅವರ ಪುತ್ರ ಮನೋಜ ಮೃತ ಬಾಲಕ. ಶುಕ್ರವಾರ ಮಧ್ಯಾಹ್ನ ಗಾಣದೇವತೆ ದೇವಸ್ಥಾನದ ರಸ್ತೆಯಲ್ಲಿ ಬಾಲಕ ಆಟವಾಡುತ್ತಿದ್ದ ವೇಳೆ ಬೀದಿನಾಯಿ ದಾಳಿ ಮಾಡಿದೆ. ಹೊಟ್ಟೆ ಮತ್ತು ದೇಹದ ಹಲವೆಡೆ ಕಚ್ಚಿ ಗಂಭೀರ ಗಾಯಗೊಳಿಸಿದೆ.ಕಿರುಚಾಡುತ್ತಿದ್ದ ಬಾಲಕ ಮತ್ತು ಅವರ ತಾಯಿ ಧ್ವನಿ ಕೇಳಿ ನಿವೃತ್ತ ಶಿಕ್ಷಕ ಶಿವಪುತ್ರಪ್ಪ ಕೋಣಿನ್ ಅವರು ನಾಯಿಯನ್ನು ಹೊಡೆದೋಡಿಸಿದ್ದಾರೆ. ಬಾಲಕನನ್ನು ಪಾಲಕರೊಂದಿಗೆ ತಮ್ಮ ಕಾರಿನಲ್ಲಿ ಕರೆದೊಯ್ದು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಜಿಮ್ಸ್ಗೆ ಹೋದಾಗ, ಚಿಕಿತ್ಸೆಗೆ ಸ್ಪಂದಿಸದೆ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.ಶರಣಬಸಪ್ಪ ಅವರು ಹೊಟ್ಟೆಪಾಡಿಗಾಗಿ ಮಕ್ಕಳು ಮತ್ತು ಪತ್ನಿಯೊಂದಿಗೆ ಕಲಬುರಗಿಗೆ ಬಂದಿದ್ದರು. ಧರಿಯಾಪುರ–ಕೋಟನೂರ ಜಿಡಿಎ ಬಡಾವಣೆಯ ರಾಯಲ್ ಪ್ಯಾಲೇಸ್ ಪಂಕ್ಷನ್ ಹಾಲ್ನಲ್ಲಿ ಶರಣಬಸಪ್ಪ ವಾಚ್ಮನ್ ಕೆಲಸ ಮಾಡುತ್ತಿದ್ದರು. ಮತ್ತು ಅವರ ಪತ್ನಿ ಕೂಲಿಕೆಲಸಕ್ಕೆ ಹೋಗುತ್ತಿದ್ದರು.ಬಾಲಕನ ಮೃತದೇಹವನ್ನು ಆಂಬುಲೆನ್ಸ್ನಲ್ಲಿ ಸ್ವಗ್ರಾಮಕ್ಕೆ ಕೊಂಡೊಯ್ದು ಶನಿವಾರ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಶರಣಬಸಪ್ಪ ಅವರ ಸಹೋದರ ಸಿದ್ದಲಿಂಗ ವಗ್ದರಗಿ ತಿಳಿಸಿದ್ದಾರೆ.