ಹೂಡಿಕೆಗೆ ಮೈಸೂರು ಆದ್ಯತೆ ತಾಣವಾಗಲಿ: ಸಿಐಐ ಸಮಾವೇಶದಲ್ಲಿ ಆಶಯ
ಮೈಸೂರು: ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಮೈಸೂರು ವಲಯದಿಂದ ‘ಸುಗಮ ವ್ಯಾಪಾರ: ಮೈಸೂರಿನ ಕೈಗಾರಿಕಾ ಮುನ್ನಡೆಯ ನಿರ್ಮಾಣ’ ಶೀರ್ಷಿಕೆಯಲ್ಲಿ ‘ಇಒಡಿಬಿ ಸಮಾವೇಶ– 2026’ ನಡೆಸಲಾಯಿತು.ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅಧಿಕಾರಿಗಳು, ಉದ್ಯಮ ಮುಖಂಡರು ಮತ್ತು ಎಂಎಸ್ಎಂಇ ಪ್ರತಿನಿಧಿಗಳು ಈ ಪ್ರದೇಶದ ಸೌಲಭ್ಯ, ಮೂಲಸೌಕರ್ಯ ಹಾಗೂ ಸಂಪರ್ಕ ವ್ಯವಸ್ಥೆ ಕುರಿತು ಚರ್ಚಿಸಿದರು.

ಮೈಸೂರು: ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಮೈಸೂರು ವಲಯದಿಂದ ‘ಸುಗಮ ವ್ಯಾಪಾರ: ಮೈಸೂರಿನ ಕೈಗಾರಿಕಾ ಮುನ್ನಡೆಯ ನಿರ್ಮಾಣ’ ಶೀರ್ಷಿಕೆಯಲ್ಲಿ ‘ಇಒಡಿಬಿ ಸಮಾವೇಶ– 2026’ ನಡೆಸಲಾಯಿತು.ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅಧಿಕಾರಿಗಳು, ಉದ್ಯಮ ಮುಖಂಡರು ಮತ್ತು ಎಂಎಸ್ಎಂಇ ಪ್ರತಿನಿಧಿಗಳು ಈ ಪ್ರದೇಶದ ಸೌಲಭ್ಯ, ಮೂಲಸೌಕರ್ಯ ಹಾಗೂ ಸಂಪರ್ಕ ವ್ಯವಸ್ಥೆ ಕುರಿತು ಚರ್ಚಿಸಿದರು. ಹೂಡಿಕೆಗೆ ಮೈಸೂರು ಆದ್ಯತೆಯ ತಾಣವಾಗಲಿ ಎಂಬ ಆಶಯ ವ್ಯಕ್ತವಾಯಿತು.ಉದ್ಘಾಟಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯಾ, ಕೌಶಲಪೂರ್ಣ ಪ್ರತಿಭೆ, ಸದೃಢ ಮೂಲಸೌಕರ್ಯ ಹಾಗೂ ಉತ್ತಮ ಜೀವನಮಟ್ಟದ ಅಪರೂಪದ ಸಂಯೋಜನೆ ಮೈಸೂರಿನಲ್ಲಿದೆ. ಜಿಲ್ಲಾಡಳಿತವು ಪ್ರತಿ ಹಂತದಲ್ಲೂ ಉದ್ಯಮಗಳಿಗೆ ಬೆಂಬಲ ನೀಡಲು ಬದ್ಧವಾಗಿದೆ. ಮೈಸೂರನ್ನು ಹೂಡಿಕೆಗೆ ಆದ್ಯತೆಯ ತಾಣವನ್ನಾಗಿಸಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಲು ಇಂತಹ ಸಮಾವೇಶಗಳು ಸಹಕಾರಿ ಆಗುತ್ತವೆ ಎಂದು ಹೇಳಿದರು.ಕೈ ಜೋಡಿಸುವುದು: ಸಿಐಐ ಮೈಸೂರು ಅಧ್ಯಕ್ಷ ಉತ್ಸವ್ ಅಗರ್ವಾಲ್, ಮೈಸೂರಿನಲ್ಲಿ ವ್ಯಾಪಾರ ನಡೆಸುವುದನ್ನು, ಅದರಲ್ಲೂ ನಮ್ಮ ಎಂಎಸ್ಎಂಇಗಳಿಗೆ ಇನ್ನಷ್ಟು ತ್ವರಿತ ಹಾಗೂ ಸರಳಗೊಳಿಸಲು ಸರ್ಕಾರದೊಂದಿಗೆ ಕೈಜೋಡಿಸುವುದೇ ಈ ಸಮಾವೇಶದ ಉದ್ದೇಶ ಎಂದರು.ಸಿಐಐ ಕರ್ನಾಟಕ ರಾಜ್ಯ ಮಂಡಳಿಯ ಉಪಾಧ್ಯಕ್ಷ ಸ್ಯಾಮ್ ಚೆರಿಯನ್ ಮಾತನಾಡಿ, ಕರ್ನಾಟಕವನ್ನು ಅದರಲ್ಲೂ ವಿಶೇಷವಾಗಿ ಮೈಸೂರನ್ನು ಉದ್ಯಮಗಳಿಗೆ ಇನ್ನಷ್ಟು ಸದೃಢ ತಾಣವನ್ನಾಗಿಸಲು ಸಿಐಐ ರಾಜ್ಯ ಸರ್ಕಾರದೊಂದಿಗೆ ಸಹಭಾಗಿತ್ವ ಮುಂದುವರಿಸಲಿದೆ ಎಂದರು.ಸಿಐಐ ಮೈಸೂರು ಇಒಡಿಬಿ ಕಾರ್ಯಪಡೆಯ ಸಂಚಾಲಕ ರಜತ್ ಅಗರ್ವಾಲ್, ಉಪಾಧ್ಯಕ್ಷೆ ಸವಿತಾ ಮಲ್ಲಪ್ಪ ಉಪಸ್ಥಿತರಿದ್ದರು.ಯೋಜನೆಗಳ ಮಾಹಿತಿ: ನಂತರ ಅಧಿವೇಶನದಲ್ಲಿ ಮೈಸೂರು ಜಿಲ್ಲಾ ಕೈಗಾರಿಕಾ ಕೇಂದ್ರದ (ಡಿಐಸಿ) ಜಂಟಿ ನಿರ್ದೇಶಕ ಟಿ. ದಿನೇಶ್ ಅವರು ಎಂಎಸ್ಎಂಇಗಳಿಗೆ ಲಭ್ಯವಿರುವ ರಾಜ್ಯ ಸರ್ಕಾರದ ಯೋಜನೆಗಳು ಮತ್ತು ಸೌಲಭ್ಯಗಳನ್ನು ವಿವರಿಸಿದರು.ಕಾನ್ಕಾರ್ ಮಲ್ಟಿ-ಮಾಡಲ್ ಲಾಜಿಸ್ಟಿಕ್ಸ್ ಪಾರ್ಕ್ ಪ್ರಧಾನ ವ್ಯವಸ್ಥಾಪಕ ಎಂ.ಪಿ. ವಿಜಯ್ಕುಮಾರ್ ಅವರು ಲಭ್ಯವಿರುವ ಸರಕು ಸಾಗಣೆ ಸೇವೆಗಳ ಕುರಿತು ಮಾಹಿತಿ ನೀಡಿದರು.ಕೆಐಎಡಿಬಿ ಮೈಸೂರಿನ ಅಭಿವೃದ್ಧಿ ಅಧಿಕಾರಿ ಮಾದೇಶ್ ಎಚ್.ಕೆ. ಕೈಗಾರಿಕಾ ಭೂಮಿ ಹಾಗೂ ಮೂಲಸೌಕರ್ಯ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದರು.ಮೈಸೂರಿನ ವಿಮಾನ ಸಂಪರ್ಕ ಕುರಿತ ಚರ್ಚೆಯಲ್ಲಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಅಭಿಷೇಕ್ ಜೋಶಿ, ಮೈಸೂರು ವಿಮಾನನಿಲ್ದಾಣದ ನಿರ್ದೇಶಕಿ ಪಿ.ವಿ. ಉಷಾಕುಮಾರಿ ಪಾಲ್ಗೊಂಡಿದ್ದರು. 45ಕ್ಕೂ ಹೆಚ್ಚು ಕೈಗಾರಿಕಾ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.261031-39-861867762