ವಿವಿಧ ಪ್ರಕರಣ: ₹13.76 ಕೋಟಿ ಮೌಲ್ಯದ ಸ್ವತ್ತು ಹಸ್ತಾಂತರ, ಆರೋಪಿಗಳ ಬಂಧನ
ಬೆಂಗಳೂರು: ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ಕೆಲವು ತಿಂಗಳಿಂದ ಕಾರ್ಯಾಚರಣೆ ನಡೆಸಿ, 257 ವಿವಿಧ ಮಾದರಿಯ ಪ್ರಕರಣಗಳಲ್ಲಿ ಭಾಗಿಯಾಗಿದ್ದ 211 ಆರೋಪಿಗಳನ್ನು ಬಂಧಿಸಿದ್ದಾರೆ.ಬಂಧಿತರಿಂದ ಒಟ್ಟು ₹13.76 ಕೋಟಿಯ ಸ್ವತ್ತನ್ನು ಜಪ್ತಿ ಮಾಡಿಕೊಳ್ಳಲಾಗಿತ್ತು. ದಕ್ಷಿಣ ವಿಭಾಗದ ಸೌತ್ಎಂಡ್ ವೃತ್ತದ ಡಿಸಿಪಿ ಕಚೇರಿ ಆವರಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಆರೋಪಿಗಳಿ

ಬೆಂಗಳೂರು: ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ಕೆಲವು ತಿಂಗಳಿಂದ ಕಾರ್ಯಾಚರಣೆ ನಡೆಸಿ, 257 ವಿವಿಧ ಮಾದರಿಯ ಪ್ರಕರಣಗಳಲ್ಲಿ ಭಾಗಿಯಾಗಿದ್ದ 211 ಆರೋಪಿಗಳನ್ನು ಬಂಧಿಸಿದ್ದಾರೆ.ಬಂಧಿತರಿಂದ ಒಟ್ಟು ₹13.76 ಕೋಟಿಯ ಸ್ವತ್ತನ್ನು ಜಪ್ತಿ ಮಾಡಿಕೊಳ್ಳಲಾಗಿತ್ತು. ದಕ್ಷಿಣ ವಿಭಾಗದ ಸೌತ್ಎಂಡ್ ವೃತ್ತದ ಡಿಸಿಪಿ ಕಚೇರಿ ಆವರಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಆರೋಪಿಗಳಿಂದ ವಶಕ್ಕೆ ಪಡೆದ ವಸ್ತುಗಳನ್ನು ವಾರಸುದಾರರಿಗೆ ಹಸ್ತಾಂತರ ಮಾಡಲಾಯಿತು.8 ಕೆ.ಜಿ 269 ಗ್ರಾಂ ಆಭರಣ, ವಿವಿಧ ಮಾದರಿಯ 410 ಮೊಬೈಲ್ಗಳು, 175 ದ್ವಿಚಕ್ರ ವಾಹನಗಳು, ₹92 ಲಕ್ಷ ನಗದು, ₹ 18 ಕೆ.ಜಿ ಬೆಳ್ಳಿ ಆಭರಣ, 15 ಮೂರು ಚಕ್ರದ ವಾಹನಗಳು, ಒಂದು ಕ್ಯಾಂಟರ್, 343 ಕೆ.ಜಿ ಒಣ ಹಣ್ಣು, ವಿವಿಧ ಮಾದರಿಯ ಏಳು ವಾಹನಗಳು, 22 ಎಲ್ಪಿಜಿ ಗ್ಯಾಸ್ ಸಿಲಿಂಡರ್, ಮೂರು ಲ್ಯಾಪ್ಟಾಪ್, 86 ಕೆ.ಜಿ ಕಾಪರ್ ವೈರ್ ಜಪ್ತಿ ಮಾಡಿಕೊಳ್ಳಲಾಗಿತ್ತು.ಜಪ್ತಿ ಮಾಡಿಕೊಂಡ ವಸ್ತುಗಳನ್ನು ಕೆ.ಜಿ ನಗರ, ಹನುಮಂತನಗರ, ವಿ.ವಿ ಪುರ, ಗಿರಿನಗರ, ಚನ್ನಮ್ಮಕೆರೆ, ಬನಶಂಕರಿ, ಬಾಣಸವಾಡಿ, ಜಯನಗರ, ಜೆ.ಪಿ ನಗರ, ಪುಟ್ಟೇನಹಳ್ಳಿ, ಸಿದ್ದಾಪುರ ಠಾಣಾ ವ್ಯಾಪ್ತಿಯ ವಾರಸುದಾರರಿಗೆ ಹಸ್ತಾಂತರ ಮಾಡಲಾಯಿತು ಎಂದು ಪೊಲೀಸರು ಹೇಳಿದರು.