ಆಭರಣ ಪ್ರಿಯರಿಗೆ ಸಿಹಿ ಸುದ್ದಿ: ಚಿನ್ನ–ಬೆಳ್ಳಿ ದರ ಕುಸಿತ, ಇಲ್ಲಿದೆ ಮಾಹಿತಿ
ಬೆಂಗಳೂರು/ನವದೆಹಲಿ: ಜಾಗತಿಕ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿ ಮಾರಾಟದ ಒತ್ತಡಕ್ಕೆ ಸಿಲುಕಿದ್ದರಿಂದ ಬೆಲೆ ಇಳಿಕೆಯಾಗಿದೆ. ಇದರ ಪರಿಣಾಮವಾಗಿ ದೇಶದ ಚಿನಿವಾರ ಪೇಟೆಯಲ್ಲೂ ಶನಿವಾರದ ವಹಿವಾಟಿನಲ್ಲಿ ಈ ಲೋಹಗಳ ದರ ಕಡಿಮೆ ಆಗಿದೆ.ಶೇ 99.9ರಷ್ಟು ಪರಿಶುದ್ಧತೆಯ 10 ಗ್ರಾಂ ಚಿನ್ನದ ದರವು ₹3,200ರಷ್ಟು ಕಡಿಮೆಯಾಗಿ, ₹1.42 ಲಕ್ಷಕ್ಕೆ ಇಳಿದಿದೆ. ಇದು 10 ತಿಂಗಳ ಕನ

ಬೆಂಗಳೂರು/ನವದೆಹಲಿ: ಜಾಗತಿಕ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿ ಮಾರಾಟದ ಒತ್ತಡಕ್ಕೆ ಸಿಲುಕಿದ್ದರಿಂದ ಬೆಲೆ ಇಳಿಕೆಯಾಗಿದೆ. ಇದರ ಪರಿಣಾಮವಾಗಿ ದೇಶದ ಚಿನಿವಾರ ಪೇಟೆಯಲ್ಲೂ ಶನಿವಾರದ ವಹಿವಾಟಿನಲ್ಲಿ ಈ ಲೋಹಗಳ ದರ ಕಡಿಮೆ ಆಗಿದೆ.ಶೇ 99.9ರಷ್ಟು ಪರಿಶುದ್ಧತೆಯ 10 ಗ್ರಾಂ ಚಿನ್ನದ ದರವು ₹3,200ರಷ್ಟು ಕಡಿಮೆಯಾಗಿ, ₹1.42 ಲಕ್ಷಕ್ಕೆ ಇಳಿದಿದೆ. ಇದು 10 ತಿಂಗಳ ಕನಿಷ್ಠ ಮಟ್ಟ. ಬೆಳ್ಳಿ ದರವೂ ಇಳಿಕೆ ಕಂಡಿದ್ದು, ಕೆ.ಜಿಗೆ ₹4,200ರಷ್ಟು ಕಡಿಮೆಯಾಗಿ, ₹1.86 ಲಕ್ಷಕ್ಕೆ ತಲುಪಿದೆ.‘ಹೆಚ್ಚುತ್ತಿರುವ ಇಂಧನ ಬೆಲೆಯು ಹಣದುಬ್ಬರ ಹೆಚ್ಚಳದ ಕಳವಳ ಸೃಷ್ಟಿಸಿದೆ. ಜೊತೆಗೆ ಅಮೆರಿಕದ ಫೆಡರಲ್ ರಿಸರ್ವ್ ಹಣಕಾಸಿನ ವಿಚಾರವಾಗಿ ಬಿಗಿ ನಿಲುವು ತಳೆಯುವ ಸಾಧ್ಯತೆ ಇದೆ. ಇದು ಚಿನ್ನ ಮತ್ತು ಬೆಳ್ಳಿ ದರ ಇಳಿಕೆಗೆ ಕಾರಣವಾಗಿವೆ’ ಎಂದು 360 ಒನ್ ಅಸೆಟ್ನ ಹಿರಿಯ ಉಪಾಧ್ಯಕ್ಷ ರಾಹುಲ್ ಖೇತಾವತ್ ಹೇಳಿದ್ದಾರೆ. ಅರ್ಧಕ್ಕಿಳಿದ ಬೆಳ್ಳಿ ದರ: ಈ ವರ್ಷದ ಜನವರಿಯಲ್ಲಿ ₹4 ಲಕ್ಷ ದಾಟಿದ್ದ ಕೆ.ಜಿ ಬೆಳ್ಳಿ ದರ ಅಕ್ಟೋಬರ್ ಅಂತ್ಯದ ವೇಳೆಗೆ ಅರ್ಧಕ್ಕಿಂತ ಕಡಿಮೆ ಮಟ್ಟಕ್ಕೆ ಇಳಿದಿದೆ.ಬೆಂಗಳೂರಿನ ಸಗಟು ಮಾರುಕಟ್ಟೆಯಲ್ಲಿ ಜನವರಿ 29ರಂದು ಕೆ.ಜಿ ಬೆಳ್ಳಿ ದರ ₹4,10,900ರಂತೆ ಮಾರಾಟವಾಗಿತ್ತು. ಇದು ಅಕ್ಟೋಬರ್ 31ಕ್ಕೆ ₹1,89,500ಕ್ಕೆ ಇಳಿದಿದೆ. ಇದೇ ಅವಧಿಯಲ್ಲಿ ಶೇ 99.9ರಷ್ಟು ಪರಿಶುದ್ಧತೆಯ 10 ಗ್ರಾಂ ಚಿನ್ನದ ದರವು ₹1,84,200 ರಿಂದ ₹1.42 ಲಕ್ಷಕ್ಕೆ ಇಳಿದಿದೆ.ಅಕ್ಟೋಬರ್ ತಿಂಗಳೊಂದರಲ್ಲಿಯೇ ಬೆಳ್ಳಿ ದರ ₹46,300 ಕಡಿಮೆಯಾಗಿದ್ದರೆ, ಚಿನ್ನದ ಬೆಲೆಯು ₹11,700 ಕಡಿಮೆ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಚಿನ್ನ ಮತ್ತು ಬೆಳ್ಳಿ ಖರೀದಿಯನ್ನು ವರ್ಷದ ಮಟ್ಟಿಗೆ ಮುಂದೂಡುವಂತೆ ದೇಶದ ಜನರಿಗೆ ಕರೆ ನೀಡಿದ್ದರು. ಧನ ತ್ರಯೋದಶಿಗೆ ಉತ್ತಮ ವಹಿವಾಟು: ‘ಕೆಲವು ದಿನಗಳಿಂದ ಚಿನ್ನ ಮತ್ತು ಬೆಳ್ಳಿ ದರ ಸತತವಾಗಿ ಇಳಿಕೆಯಾಗುತ್ತಿದೆ. ದರ ಇನ್ನಷ್ಟು ತಗ್ಗಲಿದೆ ಎಂದು ಜನ ನಿರೀಕ್ಷಿಸಿದ್ದಾರೆ. ಹೀಗಾಗಿ, ಈಗ ಖರೀದಿ ಪ್ರಮಾಣ ಕಡಿಮೆ ಇದೆ. ಆದರೆ, ಈ ಬಾರಿಯ ಧನ ತ್ರಯೋದಶಿ ವೇಳೆ ಚಿನ್ನ ಮತ್ತು ಬೆಳ್ಳಿ ಖರೀದಿ ಜೋರಾಗಿ ನಡೆಯುವ ಸಾಧ್ಯತೆ ಇದೆ’ ಎಂದು ಬೆಂಗಳೂರು ಜ್ಯುವೆಲರ್ಸ್ ಅಸೋಸಿಯೇಷನ್ನ ಕಾರ್ಯದರ್ಶಿ ಆರ್. ಶ್ರೀನಿವಾಸ್ ಹೇಳಿದರು.