ಪತ್ರಕರ್ತೆ ನಿಧಿ ರಜ್ದಾನ್ ಜೊತೆ ಎರಡನೇ ಮದುವೆಯಾದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಅವರು ಪತ್ರಕರ್ತೆ ನಿಧಿ ರಜ್ದಾನ್ ಅವರನ್ನು ಮದುವೆಯಾಗಿದ್ದಾರೆ.ಮದುವೆ ಸಮಾರಂಭದ ಫೋಟೊಗಳನ್ನು ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ಅಬ್ದುಲ್ಲಾ, ‘ನಿಧಿ ಅವರೊಂದಿಗೆ ಹೊಸ ಪಯಣ ಆರಂಭವಾಯಿತು’ ಎಂದು ಬರೆದುಕೊಂಡಿದ್ದಾರೆ. ಒಮರ್ ಅಬ್ದುಲ್ಲಾ ಅವರು ನಿವೃತ್ತ ಸೇನಾ ಅಧ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಅವರು ಪತ್ರಕರ್ತೆ ನಿಧಿ ರಜ್ದಾನ್ ಅವರನ್ನು ಮದುವೆಯಾಗಿದ್ದಾರೆ.ಮದುವೆ ಸಮಾರಂಭದ ಫೋಟೊಗಳನ್ನು ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ಅಬ್ದುಲ್ಲಾ, ‘ನಿಧಿ ಅವರೊಂದಿಗೆ ಹೊಸ ಪಯಣ ಆರಂಭವಾಯಿತು’ ಎಂದು ಬರೆದುಕೊಂಡಿದ್ದಾರೆ. ಒಮರ್ ಅಬ್ದುಲ್ಲಾ ಅವರು ನಿವೃತ್ತ ಸೇನಾ ಅಧಿಕಾರಿ ರಾಮ್ ನಾಥ್ ಅವರ ಪುತ್ರಿ ಪಾಯಲ್ ನಾಥ್ ಅವರನ್ನು ವಿವಾಹವಾಗಿದ್ದರು. 2024ರಲ್ಲಿ ಪಾಯಲ್ ಅಬ್ದುಲ್ಲಾ ಅವರಿಂದ ವಿಚ್ಛೇದನ ಕೋರಿ ಒಮರ್, ಕೋರ್ಟ್ ಮೊರೆಹೋಗಿದ್ದರು.ಸುದೀರ್ಘ ಕಾನೂನು ಹೋರಾಟ ಬಳಿಕ ಇದೇ ವರ್ಷ ಜುಲೈನಲ್ಲಿ ಒಮರ್–ಪಾಯಲ್ ಅಬ್ದುಲ್ಲಾ ದಾಂಪತ್ಯ ವಿಚ್ಛೇದನದ ಮೂಲಕ ಅಂತ್ಯಗೊಂಡಿತ್ತು.56 ವರ್ಷದ ಒಮರ್ ಮತ್ತು 49 ವರ್ಷದ ನಿಧಿ ಇಬ್ಬರೂ ಎರಡನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ನಿಧಿ ಅವರು ಈ ಹಿಂದೆ ದೆಹಲಿ ಮೂಲದ ಬಾಲಿವುಡ್ನ ಪ್ರಸಿದ್ಧ ಗೀತರಚನೆಕಾರರೊಬ್ಬರನ್ನು ವಿವಾಹವಾಗಿದ್ದರು.A new journey began yesterday @Nidhi pic.twitter.com/BXbdLq2d1H— Omar Abdullah (@OmarAbdullah) October 31, 2026