ಈ ದಿನದ ಟಾಪ್ 10 ಸುದ್ದಿಗಳು: ಭಾನುವಾರ, 1 ನವೆಂಬರ್ 2026
ರಾಜ್ಯ, ರಾಷ್ಟ್ರೀಯ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದ ಈ ದಿನದ ಟಾಪ್ 10 ಸುದ್ದಿಗಳು...ಹೋಂಡಾ ಕಂಪನಿ ರಾಜ್ಯ ತೊರೆಯುವುದಿಲ್ಲ: ಕೈಗಾರಿಕಾ ಸಚಿವ ಎಂ.ಬಿ. ಪಾಟೀಲಬೆಂಗಳೂರು: ‘ಹೋಂಡಾ ಮೋಟಾರ್ಸ್ ಕಂಪನಿಯು ರಾಜ್ಯವನ್ನು ತೊರೆದು ಬೇರೆಲ್ಲೊ ಹೋಗುತ್ತಿದೆ ಎನ್ನುವ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್. ಡಿ. ಕುಮಾರಸ್ವಾಮಿ ಹೇಳಿಕೆ ಕಪೋಲಕಲ್ಪಿತ ಮತ್ತು ರಾಜಕೀಯ ದುರುದ್ದೇ

ರಾಜ್ಯ, ರಾಷ್ಟ್ರೀಯ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದ ಈ ದಿನದ ಟಾಪ್ 10 ಸುದ್ದಿಗಳು...ಹೋಂಡಾ ಕಂಪನಿ ರಾಜ್ಯ ತೊರೆಯುವುದಿಲ್ಲ: ಕೈಗಾರಿಕಾ ಸಚಿವ ಎಂ.ಬಿ. ಪಾಟೀಲಬೆಂಗಳೂರು: ‘ಹೋಂಡಾ ಮೋಟಾರ್ಸ್ ಕಂಪನಿಯು ರಾಜ್ಯವನ್ನು ತೊರೆದು ಬೇರೆಲ್ಲೊ ಹೋಗುತ್ತಿದೆ ಎನ್ನುವ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್. ಡಿ. ಕುಮಾರಸ್ವಾಮಿ ಹೇಳಿಕೆ ಕಪೋಲಕಲ್ಪಿತ ಮತ್ತು ರಾಜಕೀಯ ದುರುದ್ದೇಶದಿಂದ ಕೂಡಿದೆ’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.ಈ ಸುದ್ದಿ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿಕಾಂಗ್ರೆಸ್ ರಾಜಕೀಯ ಪತನದ ಶವಪೆಟ್ಟಿಗೆಗೆ ಕೊನೆಯ ಮೊಳೆ: ಜೆ.ಪಿ.ನಡ್ಡಾ ನವದೆಹಲಿ: ಮತಕಳವು ಖಂಡಿಸಿ ‘ಇಂಡಿಯಾ’ ಒಕ್ಕೂಟವು ಭಾನುವಾರ ನಡೆಸಿದ ಬೃಹತ್ ರ್ಯಾಲಿಯನ್ನು ಮೂರ್ಖತನದ ನಾಟಕ ಎಂದು ಕರೆದ ಕೇಂದ್ರ ಸಚಿವ ಜೆ.ಪಿ.ನಡ್ಡಾ, 1984ರ ಸಿಖ್ ಗಲಭೆಯ ವರ್ಷಾಚರಣೆಯಂದೇ ದೆಹಲಿಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ಸಿಖ್ ಸಮುದಾಯದವರ ಗಾಯಕ್ಕೆ ರಾಹುಲ್ ಗಾಂಧಿ ಉಪ್ಪು ಸವರಿದ್ದಾರೆ’ ಎಂದು ಆರೋಪಿಸಿದ್ದಾರೆ.ಈ ಸುದ್ದಿ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿವೃದ್ಧಾಪ್ಯ ಕಾರಣಕ್ಕೆ ಜೀವಾವಧಿ ಶಿಕ್ಷೆ ಕಡಿತಗೊಳಿಸಲು ‘ಸುಪ್ರೀಂ’ ನಕಾರ ನವದೆಹಲಿ: ವೃದ್ಧಾಪ್ಯ ಹಾಗೂ ಮೇಲ್ಮನವಿಯು ದೀರ್ಘಾವಧಿ ಬಾಕಿ ಉಳಿದ ಕಾರಣಕ್ಕಾಗಿ ಅಪರಾಧಿಗಳಿಗೆ ಶಿಕ್ಷೆಯಿಂದ ರಿಯಾಯಿತಿ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಈ ಸುದ್ದಿ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿಒಮರ್– ನಿಧಿ ರಾಜ್ದಾನ್ ವಿವಾಹದ ವಿರುದ್ಧ ಫತ್ವಾ ಲಖನೌ: ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ಪತ್ರಕರ್ತೆ ನಿಧಿ ರಾಜ್ದಾನ್ ಅವರ ವಿವಾಹದ ವಿರುದ್ಧ ಹಿರಿಯ ಮುಸ್ಲಿಂ ಮೌಲ್ವಿ ‘ಫತ್ವಾ’ ಹೊರಡಿಸಿದ್ದಾರೆ. ಇಸ್ಲಾಂ ಧರ್ಮದ ಪ್ರಕಾರ ಈ ವಿವಾಹವು ‘ಅಸಿಂಧು’ ಎಂದು ಅವರು ಹೇಳಿದ್ದಾರೆ.ಈ ಸುದ್ದಿ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿ‘ಇಂಡಿಯಾ’ ರ್ಯಾಲಿಯಲ್ಲಿ ಸಿಜೆಪಿ, ಜೆನ್ ಝೀಗೆ ಬೆಂಬಲ ಘೋಷಿಸಿದ ಮಮತಾ ಬ್ಯಾನರ್ಜಿ ನವದೆಹಲಿ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಭಾನುವಾರ(ನ.1) ನಡೆದ 'ಇಂಡಿಯಾ'ದ ರ್ಯಾಲಿಯಲ್ಲಿ ಸಿಜೆಪಿ ನಾಯಕತ್ವ ಮತ್ತು ಜೆನ್–ಝೀ ಹೋರಾಟಗಾರರಿಗೆ ತಮ್ಮ ಬೆಂಬಲವನ್ನು ಘೋಷಿಸಿದ್ದಾರೆ.ಈ ಸುದ್ದಿ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿನೇಪಾಳ: ಸಿಕ್ಕಿಬಿದ್ದ 6 ಭಾರತೀಯ ಪ್ರವಾಸಿಗರ ರಕ್ಷಣಾ ಕಾರ್ಯಾಚರಣೆ ಚುರುಕು ಕಠ್ಮಂಡು: ಇಲ್ಲಿನ ಶೇ–ಫೋಕ್ಸುಂಡೋ ರಾಷ್ಟ್ರೀಯ ಉದ್ಯಾನದಲ್ಲಿ ಭಾರಿ ಹಿಮಪಾತದಲ್ಲಿ ಸಿಲುಕಿದ್ದ ಭಾರತದ ಆರು ಪ್ರವಾಸಿಗರ ರಕ್ಷಣೆಗಗಿ ಭದ್ರತಾ ಸಿಬ್ಬಂದಿ ಶ್ರಮಿಸುತ್ತಿದ್ಧಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.ಈ ಸುದ್ದಿ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿಜೇವರ್ಗಿ | ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿ ಬಂಧನ ಜೇವರ್ಗಿ (ಕಲಬುರಗಿ): ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಜೇವರ್ಗಿ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ ಸುದ್ದಿ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿಮೋದಿ ತೊಲಗಿಸಿ, ಪ್ರಜಾಪ್ರಭುತ್ವ ಉಳಿಸಿ: ಮಲ್ಲಿಕಾರ್ಜುನ ಖರ್ಗೆ ನವದೆಹಲಿ: 'ಪ್ರಜಾಪ್ರಭುತ್ವವನ್ನು ಉಳಿಸಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದು ಅತ್ಯಗತ್ಯ’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಈ ಸುದ್ದಿ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿ‘ಸ್ಟಿಂಗ್’ ಕಾರ್ಯಾಚರಣೆ: ಕುಮಾರಸ್ವಾಮಿ ದೆಹಲಿ ನಿವಾಸದಲ್ಲಿ ಮೊಬೈಲ್ ಹಸ್ತಾಂತರ ಬೆಂಗಳೂರು: ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದರಾಮಯ್ಯ ಅವರ ವಿರುದ್ಧ ನಡೆದಿರುವ ‘ಸ್ಟಿಂಗ್’ ಕಾರ್ಯಾಚರಣೆಗೆ ಸಂಬಂಧಿಸಿದ ವಿಡಿಯೊ ಅಪ್ಲೋಡ್ ಮಾಡಲು ಬಳಸಿದ ಮೊಬೈಲ್ ಫೋನ್ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ದೆಹಲಿ ನಿವಾಸದಲ್ಲೇ ಹಸ್ತಾಂತರ ಮಾಡಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಈ ಸುದ್ದಿ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿಧಾರವಾಡ: ಸಚಿವ ಸಂತೋಷ್ ಲಾಡ್ ಕಾರು ಚಲಾಯಿಸಿದ ಜಿಲ್ಲಾಧಿಕಾರಿ ಸ್ನೇಹಲ್ಧಾರವಾಡ: ರಾಜ್ಯೋತ್ಸವ ಕಾರ್ಯಕ್ರಮದ ಬಳಿಕ ಜಿಲ್ಲಾ ಸಾಹಿತ್ಯ ಭವನ ಆವರಣದಿಂದ ಜಿಲ್ಲಾಧಿಕಾರಿ ಸ್ನೇಹಲ್ ಅವರು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರ ಕಾರು ಚಲಾಯಿಸಿಕೊಂಡು ಸಚಿವ, ಇತರ ಅಧಿಕಾರಿಗಳೊಂದಿಗೆ ತೆರಳಿದರು.ಈ ಸುದ್ದಿ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿ