ಲಾಲ್ಬಾಗ್: ಮಳೆಕಾಡು ಸಸ್ಯೋದ್ಯಾನ
ಬೆಂಗಳೂರು: ಲಾಲ್ಬಾಗ್ನಲ್ಲಿ ಪಶ್ಚಿಮ ಘಟ್ಟಗಳ ಮಳೆಕಾಡಿನ ಅನುಭವ ನೀಡುವ ಹಾಗೂ ಸಿಂಗಪುರದ ಗಾರ್ಡನ್ಸ್ ಬೈ ದಿ ಬೇ ಮಾದರಿಯ ಸಸ್ಯೋದ್ಯಾನವನ್ನು ತೋಟಗಾರಿಕೆ ಇಲಾಖೆ ಅಭಿವೃದ್ಧಿಪಡಿಸುತ್ತಿದೆ.ಮರಗಳ ನೆರಳಿನಲ್ಲಿ ಬೆಳೆಯುವ ವೈವಿಧ್ಯಮಯ ಸಸ್ಯಗಳನ್ನು ಬೆಳೆಸಲು₹ 50 ಲಕ್ಷ ವೆಚ್ಚದಲ್ಲಿ ಎರಡೂವರೆ ಎಕರೆ ವಿಸ್ತೀರ್ಣದ ಅಂಗಳವನ್ನು ಸಿದ್ಧಪಡಿಸಲಾಗಿದ್ದು, ಕೊಡಗು ಮತ್ತು ಊಟಿಯಲ್ಲ

ಬೆಂಗಳೂರು: ಲಾಲ್ಬಾಗ್ನಲ್ಲಿ ಪಶ್ಚಿಮ ಘಟ್ಟಗಳ ಮಳೆಕಾಡಿನ ಅನುಭವ ನೀಡುವ ಹಾಗೂ ಸಿಂಗಪುರದ ಗಾರ್ಡನ್ಸ್ ಬೈ ದಿ ಬೇ ಮಾದರಿಯ ಸಸ್ಯೋದ್ಯಾನವನ್ನು ತೋಟಗಾರಿಕೆ ಇಲಾಖೆ ಅಭಿವೃದ್ಧಿಪಡಿಸುತ್ತಿದೆ.ಮರಗಳ ನೆರಳಿನಲ್ಲಿ ಬೆಳೆಯುವ ವೈವಿಧ್ಯಮಯ ಸಸ್ಯಗಳನ್ನು ಬೆಳೆಸಲು₹ 50 ಲಕ್ಷ ವೆಚ್ಚದಲ್ಲಿ ಎರಡೂವರೆ ಎಕರೆ ವಿಸ್ತೀರ್ಣದ ಅಂಗಳವನ್ನು ಸಿದ್ಧಪಡಿಸಲಾಗಿದ್ದು, ಕೊಡಗು ಮತ್ತು ಊಟಿಯಲ್ಲಿನ ತಂಪು ಹವೆಯ ವಾತಾವರಣ ನಿರ್ಮಿಸಲು ಈ ಮೊದಲೇ ಇದ್ದ ಮಳೆ ನೀರಿನ ಕಾಲುವೆಯನ್ನು ಸುಸ್ಥಿರವಾಗಿ ಬಳಸಿಕೊಳ್ಳಲಾಗಿದೆ.ನೀರಿಗೆ ತಡೆ: ಐತಿಹಾಸಿಕ ಲಾಲ್ಬಾಗ್ ಬಂಡೆ ಮೇಲೆ ಬೀಳುವ ಮಳೆ ನೀರನ್ನು ಕಾಲುವೆಯಲ್ಲಿಯೇ ಇಂಗಿಸಲು 13 ಚೆಕ್ ಡ್ಯಾಮ್ಗಳನ್ನು ನಿರ್ಮಿಸಲಾಗಿದೆ. ನೂರಾರು ಬೃಹತ್ ಮರಗಳ ನೆರಳು ಮತ್ತು ಡ್ಯಾಮ್ಗಳಲ್ಲಿ ನಿಲ್ಲುವನೀರು ಇಡೀ ವಾತಾವರಣ ತಂಪಾಗಿರಿಸಲಿದೆ.ಚೆಕ್ಡ್ಯಾಮ್ಗಳ ಜೊತೆಗೆ ಮಳೆ ನೀರನ್ನು ಇಂಗಿಸಲು ನಾಲ್ಕು ಇಂಗು ಗುಂಡಿಗಳನ್ನು ನಿರ್ಮಾಣ ಮಾಡಿದ್ದು, ಪ್ರತಿಯೊಂದು ಇಂಗು ಗುಂಡಿಯಲ್ಲಿ 4 ಕೋಟಿ ಲೀಟರ್ ನೀರನ್ನು ಸಂಗ್ರಹಿಸಬಹುದಾಗಿದೆ. ಈ ನೀರು ಅಂತರ್ಜಲ ಸೇರಲಿದ್ದು, ಉದ್ಯಾನದ ಗಿಡ ಮರಗಳ ಬೆಳವಣಿಗೆಗೆ ಅನುಕೂಲವಾಗಲಿದೆ.ಆರ್ಕಿಡ್ ತೋರಣ: ಮರಗಳ ಆಸರೆಯಲ್ಲಿ ಬೆಳೆಯುವ ಆರ್ಕಿಡ್ಗಳಿಗೆ ಪೂರಕ ವಾತಾವರಣ ನಿರ್ಮಿಸಲು ಜರ್ಮನಿಯ ಚಿಲುಮೆಯ ಪೈಪ್ಗಳನ್ನು ಎಲ್ಲ ಮರಗಳಿಗೂ ಅಳವಡಿಸಲಾಗಿದ್ದು, ಮಂಜಿನ ವಾತಾವರಣ ನಿರ್ಮಾಣವಾಗಲಿದೆ. ಮುಂಜಾನೆ ಮತ್ತು ಸಂಜೆ ಉದ್ಯಾನದ ಈ ಭಾಗವು ಮಂಜಿನಿಂದ ತುಂಬಿರುತ್ತದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ಸಸ್ಯಗಳನ್ನು ನೆಡಲಾಗುತ್ತಿದ್ದು, ಸಸ್ಯವಿಜ್ಞಾನ ಅಧ್ಯಯನ ಮಾಡುವವರು ಹಾಗೂ ಪರಿಸರಾಸಕ್ತರಿಗೆ ಕಲಿಕಾ ತಾಣವಾಗಲಿದೆ.ಅಂಗಳದ ನೆಲಹಾಸಿಗೆಗೆ ಕೇರಳದ ‘ಪರ್ಲ್’ ಹುಲ್ಲಿನ ತಳಿಯನ್ನು ಬಿತ್ತನೆ ಮಾಡಲಾಗುತ್ತದೆ. ಮಳೆಕಾಡಿನ ಕಣಿವೆಯನ್ನು ನೆನಪಿಸುವಂತೆ ಭೂ ಸ್ವರೂಪವನ್ನು ಸೃಷ್ಟಿಸಲಾಗಿದೆ. ತಮಿಳುನಾಡು ಮತ್ತು ಕರ್ನಾಟಕದ ವಿಶಿಷ್ಟ ಕಲ್ಲುಗಳನ್ನು ಜೋಡಿಸಿಡಲಾಗಿದ್ದು, ಕಾಡಿನಲ್ಲಿ ಹೊಕ್ಕಂತ ಅನುಭವವು ಜನರಿಗೆ ಸಿಗಲಿದೆ.ಅಗಲವಾದ ಎಲೆಗಳ ಸಸ್ಯಗಳು, ಲಿಲ್ಲಿ ಹೂ ಗಿಡಗಳು, ಆರ್ಕಿಡ್ಗಳು, ಅಲೊಕೇಶಿಯಾ, ಕ್ಯೂಮಿಲಿಯಾ, ಅಜೋಲಿಯಾ, ಜರೀ ಗಿಡಗಳು, ಫಿಲೋಡೆಂಡ್ರಾನ್, ಫರ್ನ್ಸ್, ಡ್ರೆಸಿನಾ ಡ್ರಾಕೊ, ಫೋಲಿಯೇಜ್ ಅಂತೋರಿಯಮ್, ಜೌಗು ಸಸ್ಯಗಳು, ಗಾಳಿಯಲ್ಲಿನ ಮಂಜಿನಿಂದ ಬೆಳೆಯುವ ಏರ್ ಪ್ಲಾಂಟ್ಸ್, ಡ್ರೆಸಿನಾಸ್ ಸೇರಿದಂತೆ 250ಕ್ಕೂ ಹೆಚ್ಚು ಮಳೆಕಾಡಿನ ಸಸ್ಯಗಳು ತೋಟವನ್ನು ಆವರಿಸಲಿವೆ. ಇವುಗಳನ್ನು ಕರ್ನಾಟಕ, ಕೇರಳಂ, ಒಡಿಶಾ, ಹಿಮಾಚಲ ಪ್ರದೇಶಗಳಿಂದ ತರಿಸಲಾಗಿದೆ.‘ಸುಸ್ಥಿರ ಅಭಿವೃದ್ಧಿಯ ಮಾದರಿ’ ‘ಲಾಲ್ಬಾಗ್ಗೆ ಬರುವವರಿಗೆ ಸಸ್ಯ ಜಗತ್ತಿನ ವೈವಿಧ್ಯ ಪರಿಚಯ ಆಗಬೇಕು ಎಂಬ ಉದ್ದೇಶದಿಂದ ಮಳೆಕಾಡಿನಲ್ಲಿ ಬೆಳೆಯುವ ಸಸ್ಯ ಸಂಪತ್ತನ್ನು ಪರಿಚಯಿಸಲಾಗುತ್ತದೆ. ಉದ್ಯಾನಗಳ ಸುಸ್ಥಿರ ಅಭಿವೃದ್ಧಿ ಮಾದರಿ ಇದಾಗಿದೆ’ ಎನ್ನುತ್ತಾರೆ ತೋಟಗಾರಿಕಾ ಇಲಾಖೆಯ ಹೆಚ್ಚುವರಿ ನಿರ್ದೇಶಕ ಎಂ.ಜಗದೀಶ್. ‘ಮಂಜು ಹಾಗೂ ಹಿಮದ ವಾತಾವರಣಕ್ಕಾಗಿ ಅಳವಡಿಸಿರುವ ನೀರು ಸಿಂಪರಣ ವ್ಯವಸ್ಥೆಗೆ ಜರ್ಮನಿಯ ‘ಅಲ್ಟ್ರಾ ಫೈನ್ ನಾಜಲ್ಸ್’ ಇರುವ ಪೈಪ್ಗಳನ್ನು ಮರಗಳಿಗೆ ಅಳವಡಿಸಿದ್ದು, 10 ನಿಮಿಷಕ್ಕೆ ಒಮ್ಮೆ ಗಂಟೆಗೆ ನಾಲ್ಕು ಬಾರಿ ಸತತ 10 ನಿಮಿಷ ಮಂಜನ್ನು ಸೂಸುತ್ತವೆ. ಬಿರು ಬಿಸಿಲಿನಲ್ಲೂ ತಂಪಾದ ವಾತಾವರಣ ನಿರ್ಮಾಣಕ್ಕೆ ಇವು ನೆರವಾಗಲಿವೆ’ ಎಂದರು.