ದಕ್ಷಿಣ ಕೊರಿಯಾದ ಚೋನಾನ್ನಲ್ಲಿ ಕನ್ನಡಿಗ ಕುಟುಂಬಗಳಿಂದ ರಾಜ್ಯೋತ್ಸವ ಆಚರಣೆ
ಚೋನಾನ್: ದಕ್ಷಿಣ ಕೊರಿಯಾದ ಚೋನಾನ್ ನಗರದಲ್ಲಿ ನೆಲೆಸಿರುವ ಕನ್ನಡಿಗ ಕುಟುಂಬಗಳು ಒಟ್ಟಾಗಿ ಕರ್ನಾಟಕ ರಾಜ್ಯೋತ್ಸವ ಆಚರಿಸಿದವು.ಗಚೋನ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಕೇಶವಾನಂದ ಪ್ರಭು ಸಿ.ಪಿ. ಅವರ ಕುಟುಂಬ ಹಾಗೂ ಕೊಂಗ್ಜು ನ್ಯಾಷನಲ್ ಯೂನಿವರ್ಸಿಟಿಯಲ್ಲಿ ಬ್ರೇನ್ ಪೂಲ್ ಫೆಲೋ ಆಗಿರುವ ಡಾ. ಶಂಭುಲಿಂಗ ಅರಳೇಕಲ್ಲು ಅವರ ಕುಟುಂಬ ಈ ಆಚರಣೆಯಲ್ಲಿ ಪಾಲ್ಗೊಂಡಿತ್

ಚೋನಾನ್: ದಕ್ಷಿಣ ಕೊರಿಯಾದ ಚೋನಾನ್ ನಗರದಲ್ಲಿ ನೆಲೆಸಿರುವ ಕನ್ನಡಿಗ ಕುಟುಂಬಗಳು ಒಟ್ಟಾಗಿ ಕರ್ನಾಟಕ ರಾಜ್ಯೋತ್ಸವ ಆಚರಿಸಿದವು.ಗಚೋನ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಕೇಶವಾನಂದ ಪ್ರಭು ಸಿ.ಪಿ. ಅವರ ಕುಟುಂಬ ಹಾಗೂ ಕೊಂಗ್ಜು ನ್ಯಾಷನಲ್ ಯೂನಿವರ್ಸಿಟಿಯಲ್ಲಿ ಬ್ರೇನ್ ಪೂಲ್ ಫೆಲೋ ಆಗಿರುವ ಡಾ. ಶಂಭುಲಿಂಗ ಅರಳೇಕಲ್ಲು ಅವರ ಕುಟುಂಬ ಈ ಆಚರಣೆಯಲ್ಲಿ ಪಾಲ್ಗೊಂಡಿತ್ತು. ಡಾ. ಶಂಭುಲಿಂಗ ಅವರ ಪತ್ನಿಯೂ ಅದೇ ವಿಶ್ವವಿದ್ಯಾಲಯದಲ್ಲಿ ಪೋಸ್ಟ್ಡಾಕ್ಟರಲ್ ಫೆಲೋ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಎರಡೂ ಕುಟುಂಬಗಳು ಸುಮಾರು ಎರಡು ತಿಂಗಳಿಗೊಮ್ಮೆ ಭೇಟಿಯಾಗಿ ಹಬ್ಬ ಹಾಗೂ ವಿಶೇಷ ಸಂದರ್ಭಗಳನ್ನು ಒಟ್ಟಾಗಿ ಆಚರಿಸುತ್ತವೆ. ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡದಲ್ಲಿ ಮಾತುಕತೆ ನಡೆಸಿದ ಕುಟುಂಬದ ಸದಸ್ಯರು ಕರ್ನಾಟಕದ ನೆನಪುಗಳು, ನಾಡಿನ ಹಬ್ಬಗಳು ಮತ್ತು ಸಂಪ್ರದಾಯಗಳನ್ನು ಹಂಚಿಕೊಂಡರು.ದಕ್ಷಿಣ ಕೊರಿಯಾದಲ್ಲಿ ಬೆಳೆಯುತ್ತಿರುವ ಮಕ್ಕಳಿಗೆ ಕನ್ನಡ ಭಾಷೆ, ಕರ್ನಾಟಕದ ಇತಿಹಾಸ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಮಕ್ಕಳಲ್ಲಿ ಕನ್ನಡ ಮಾತನಾಡುವ ಆಸಕ್ತಿ ಬೆಳೆಸಲು ಮತ್ತು ನಾಡಿನ ಪರಿಚಯ ಮಾಡಿಸಲು ಕುಟುಂಬಗಳು ಒತ್ತು ನೀಡಿವೆ.