ಕನ್ನಡಿಗರಿಗೆ ನರೇಂದ್ರ ಮೋದಿ ಸರ್ಕಾರದ ಕೊಡುಗೆ ಅಪಾರ: ಬಿ.ವೈ.ವಿಜಯೇಂದ್ರ
ಕನ್ನಡಿಗರಿಗೆ ನರೇಂದ್ರ ಮೋದಿ ಸರ್ಕಾರದ ಕೊಡುಗೆ ಅಪಾರ ಎಂದು ಬಿ.ವೈ.ವಿಜಯೇಂದ್ರ ಅವರು ಕೇಂದ್ರ ಸರ್ಕಾರವನ್ನು ಕೊಂಡಾಡಿದ್ದಾರೆ.ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿಯ ಸಂಭ್ರಮದ ಈ ಸಮಯದಲ್ಲಿ ನಾಡಿನ ಜನತೆಗೆ ಕೇಂದ್ರದ ಎನ್ಡಿಎ ಸರ್ಕಾರ ಐತಿಹಾಸಿಕ, ಅಭಿವೃದ್ಧಿಪರ ಕೊಡುಗೆ ನೀಡಿದೆ. ದಕ್ಷಿಣ ಭಾರತದ ಪ್ರಥಮ 'ಬೆಂಗಳೂರು–ಮುಂಬೈ ವಂದೇ ಭಾರತ್ ಸ್ಲೀಪರ್ ಎಕ್ಸ್ಪ್ರೆಸ್' ರೈಲು
ಕನ್ನಡಿಗರಿಗೆ ನರೇಂದ್ರ ಮೋದಿ ಸರ್ಕಾರದ ಕೊಡುಗೆ ಅಪಾರ ಎಂದು ಬಿ.ವೈ.ವಿಜಯೇಂದ್ರ ಅವರು ಕೇಂದ್ರ ಸರ್ಕಾರವನ್ನು ಕೊಂಡಾಡಿದ್ದಾರೆ.ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿಯ ಸಂಭ್ರಮದ ಈ ಸಮಯದಲ್ಲಿ ನಾಡಿನ ಜನತೆಗೆ ಕೇಂದ್ರದ ಎನ್ಡಿಎ ಸರ್ಕಾರ ಐತಿಹಾಸಿಕ, ಅಭಿವೃದ್ಧಿಪರ ಕೊಡುಗೆ ನೀಡಿದೆ. ದಕ್ಷಿಣ ಭಾರತದ ಪ್ರಥಮ 'ಬೆಂಗಳೂರು–ಮುಂಬೈ ವಂದೇ ಭಾರತ್ ಸ್ಲೀಪರ್ ಎಕ್ಸ್ಪ್ರೆಸ್' ರೈಲು ಸೇವೆಗೆ ಇಂದು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು. ಇದು ರಾಜ್ಯದ ಮೂಲಸೌಕರ್ಯ, ಪ್ರವಾಸೋದ್ಯಮ ಹಾಗೂ ಆರ್ಥಿಕ ವಿಕಾಸಕ್ಕೆ ಹೊಸ ಮೈಲಿಗಲ್ಲಾಗಿದೆʼ ಎಂದು ಹೇಳಿದ್ದಾರೆ.ಭಾರತದ ಎರಡು ಪ್ರಮುಖ ಆರ್ಥಿಕ ಶಕ್ತಿಗಳಾದ ಬೆಂಗಳೂರು ಮತ್ತು ಮುಂಬೈ ನಗರಗಳನ್ನು ಜೋಡಿಸುವ ಈ ಅತ್ಯಾಧುನಿಕ ರೈಲು, 1,118 ಕಿ.ಮೀ ದೂರವನ್ನು ಕೇವಲ 16 ಗಂಟೆಗಳಲ್ಲಿ ಕ್ರಮಿಸಿ, ಬರೋಬ್ಬರಿ 8 ಗಂಟೆಗಳಷ್ಟು ಪ್ರಯಾಣದ ಸಮಯವನ್ನು ಉಳಿಸಲಿದೆ. ರಾಯಚೂರು, ಯಾದಗಿರಿ, ಕಲಬುರಗಿ ಮಾರ್ಗದ ಉದ್ಯಮಿಗಳಿಗೆ, ಯುವಜನರಿಗೆ ಹಾಗೂ ಪ್ರವಾಸಿಗರಿಗೆ ಅತ್ಯಂತ ವೇಗದ ಮತ್ತು ಆರಾಮದಾಯಕ ಸಂಪರ್ಕ ಕಲ್ಪಿಸುವ ಈ ಯೋಜನೆಯು ಕಲ್ಯಾಣ ಮತ್ತು ಉತ್ತರ ಕರ್ನಾಟಕ ಭಾಗದ ವಾಣಿಜ್ಯ ಕ್ಷೇತ್ರಕ್ಕೆ ಅಭೂತಪೂರ್ವ ವೇಗ ನೀಡಲಿದೆʼ ಎಂದಿದ್ದಾರೆ.2014ರ ಮೊದಲು ಕರ್ನಾಟಕಕ್ಕೆ ವರ್ಷಕ್ಕೆ ಕೇವಲ 700 ಕೋಟಿ ರೂ. ರೈಲ್ವೆ ಅನುದಾನ ಸಿಗುತ್ತಿದ್ದ ಕಾಲವಿತ್ತು. ಆದರೆ ಇಂದು ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ರಾಜ್ಯಕ್ಕೆ ಈ ಸಾಲಿನ ವಾರ್ಷಿಕ ಬಜೆಟ್ನಲ್ಲಿ 7,748 ಕೋಟಿ ₹ ಅಧಿಕ ಅನುದಾನ ನೀಡಲಾಗಿದೆ. ರೈಲ್ವೆ ಕ್ಷೇತ್ರದಲ್ಲಿ ಕ್ರಾಂತಿಕಾರಿ ಪರಿವರ್ತನೆ ಸಾಕಾರಗೊಳ್ಳುತ್ತಿದೆ. ಗಂಟೆಗೆ 180 ಕಿ.ಮೀ ವೇಗದಲ್ಲಿ ಚಲಿಸಬಲ್ಲ ಅತ್ಯುನ್ನತ ತಂತ್ರಜ್ಞಾನ, ಸಂಪೂರ್ಣ 'ಕವಚ್' ಸುರಕ್ಷತಾ ವ್ಯವಸ್ಥೆ ಹಾಗೂ ಸೌರ ವಿದ್ಯುತ್ ಶಕ್ತಿಯ ಬಳಕೆಯೊಂದಿಗೆ ಭಾರತೀಯ ರೈಲ್ವೆ 'ವಿಕಸಿತ ಭಾರತ'ದ ಸಂಕಲ್ಪಕ್ಕೆ ನೈಜ ಶಕ್ತಿ ತುಂಬುತ್ತಿದೆ. ಕನ್ನಡಿಗರ ಬಹುದಿನಗಳ ಕನಸನ್ನು ನನಸು ಮಾಡಿ, ರಾಜ್ಯದ ಆರ್ಥಿಕ ಪ್ರಗತಿಗೆ ವೇಗ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.ಕನ್ನಡಿಗರಿಗೆ ಮೋದಿ ಸರ್ಕಾರದ ರಾಜ್ಯೋತ್ಸವ, ದೀಪಾವಳಿಯ ಐತಿಹಾಸಿಕ ಕೊಡುಗೆ; ವಿಕಸಿತ ಕರ್ನಾಟಕದ ನಿಟ್ಟಿನಲ್ಲಿ ಬೆಂಗಳೂರು - ಮುಂಬೈ ವಂದೇ ಭಾರತ್ ಸ್ಲೀಪರ್ ಎಕ್ಸ್ಪ್ರೆಸ್ಗೆ ಚಾಲನೆ! ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿಯ ಸಂಭ್ರಮದ ಈ ಸಮಯದಲ್ಲಿ ನಾಡಿನ ಜನತೆಗೆ ಕೇಂದ್ರದ NDA ಸರ್ಕಾರ ಐತಿಹಾಸಿಕ, ಅಭಿವೃದ್ಧಿಪರ ಕೊಡುಗೆ ನೀಡಿದೆ. ದಕ್ಷಿಣ ಭಾರತದ ಪ್ರಥಮ 'ಬೆಂಗಳೂರು–ಮುಂಬೈ ವಂದೇ ಭಾರತ್ ಸ್ಲೀಪರ್ ಎಕ್ಸ್ಪ್ರೆಸ್' ರೈಲು ಸೇವೆಗೆ ಇಂದು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಲ್ಲಿ ಚಾಲನೆ ನೀಡಲಾಗಿದ್ದು, ರಾಜ್ಯದ ಮೂಲಸೌಕರ್ಯ, ಪ್ರವಾಸೋದ್ಯಮ ಹಾಗೂ ಆರ್ಥಿಕ ವಿಕಾಸಕ್ಕೆ ಹೊಸ ಮೈಲಿಗಲ್ಲಾಗಿದೆ. ಭಾರತದ ಎರಡು ಪ್ರಮುಖ ಆರ್ಥಿಕ ಶಕ್ತಿಗಳಾದ ಬೆಂಗಳೂರು ಮತ್ತು ಮುಂಬೈ ನಗರಗಳನ್ನು ಜೋಡಿಸುವ ಈ ಅತ್ಯಾಧುನಿಕ ರೈಲು, 1,118 ಕಿ.ಮೀ ದೂರವನ್ನು ಕೇವಲ 16 ಗಂಟೆಗಳಲ್ಲಿ ಕ್ರಮಿಸಿ, ಬರೋಬ್ಬರಿ 8 ಗಂಟೆಗಳಷ್ಟು ಪ್ರಯಾಣದ ಸಮಯವನ್ನು ಉಳಿಸಲಿದೆ. ರಾಯಚೂರು, ಯಾದಗಿರಿ ಹೈ ಕಲಬುರಗಿ ಮಾರ್ಗದ ಉದ್ಯಮಿಗಳಿಗೆ, ಯುವಜನರಿಗೆ ಹಾಗೂ ಪ್ರವಾಸಿಗರಿಗೆ ಅತ್ಯಂತ ವೇಗದ ಮತ್ತು ಆರಾಮದಾಯಕ ಸಂಪರ್ಕ ಕಲ್ಪಿಸುವ ಈ ಯೋಜನೆಯು ಕಲ್ಯಾಣ ಮತ್ತು ಉತ್ತರ ಕರ್ನಾಟಕ ಭಾಗದ ವಾಣಿಜ್ಯ ಕ್ಷೇತ್ರಕ್ಕೆ ಅಭೂತಪೂರ್ವ ವೇಗ ನೀಡಲಿದೆ. 2014ರ ಮೊದಲು ಕರ್ನಾಟಕಕ್ಕೆ ವರ್ಷಕ್ಕೆ ಕೇವಲ 700 ಕೋಟಿ ರೂ. ರೈಲ್ವೆ ಅನುದಾನ ಸಿಗುತ್ತಿದ್ದ ಕಾಲವಿತ್ತು. ಆದರೆ ಇಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ರವರ ನೇತೃತ್ವದಲ್ಲಿ ರಾಜ್ಯಕ್ಕೆ ಈ ಸಾಲಿನ ವಾರ್ಷಿಕ ಬಜೆಟ್ನಲ್ಲಿ 7,748 ಕೋಟಿ ರೂ. ಗಳಿಗೂ ಅಧಿಕ ಅನುದಾನ ನೀಡಲಾಗಿದ್ದು, ರೈಲ್ವೆ ಕ್ಷೇತ್ರದಲ್ಲಿ ಕ್ರಾಂತಿಕಾರಿ ಪರಿವರ್ತನೆ ಸಾಕಾರಗೊಳ್ಳುತ್ತಿದೆ. ಗಂಟೆಗೆ 180 ಕಿ.ಮೀ ವೇಗದಲ್ಲಿ ಚಲಿಸಬಲ್ಲ ಅತ್ಯುನ್ನತ ತಂತ್ರಜ್ಞಾನ, ಸಂಪೂರ್ಣ 'ಕವಚ್' ಸುರಕ್ಷತಾ ವ್ಯವಸ್ಥೆ ಹಾಗೂ ಸೌರ ವಿದ್ಯುತ್ ಶಕ್ತಿಯ ಬಳಕೆಯೊಂದಿಗೆ ಭಾರತೀಯ ರೈಲ್ವೆ 'ವಿಕಸಿತ ಭಾರತ'ದ ಸಂಕಲ್ಪಕ್ಕೆ ನೈಜ ಶಕ್ತಿ ತುಂಬುತ್ತಿದೆ. ಕನ್ನಡಿಗರ ಬಹುದಿನಗಳ ಕನಸನ್ನು ನನಸು ಮಾಡಿ, ರಾಜ್ಯದ ಆರ್ಥಿಕ ಪ್ರಗತಿಗೆ ವೇಗ ನೀಡಿರುವ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ @narendramodi ಜೀ ರವರಿಗೆ, ಕೇಂದ್ರ ರೈಲ್ವೆ ಸಚಿವರಾದ ಶ್ರೀ @AshwiniVaishnaw ರವರಿಗೆ ಹಾಗೂ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಶ್ರೀ @VSOMANNA_BJP ನವರಿಗೆ ಸಮಸ್ತ ಕನ್ನಡಿಗರ ಪರವಾಗಿ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.— Vijayendra Yediyurappa (@BYVijayendra) November 1, 2026