ಆಳ ಅಗಲ |ಕೆಎಂಎಫ್: ರೈತರ ಹೆಸರು, ಪ್ರಭಾವಿಗಳ ದರ್ಬಾರು
ಪ್ರಜಾವಾಣಿ ವಾರ್ತೆನಂದಿನಿ ಹಾಲಿನ ದರವನ್ನು ಹೆಚ್ಚಿಸಬೇಕು ಎನ್ನುವುದು ರಾಜ್ಯದ ಹಾಲು ಒಕ್ಕೂಟಗಳ ಬೇಡಿಕೆಯಾಗಿತ್ತು. ಅದಕ್ಕೆ ಮಣಿದಿರುವ ಸರ್ಕಾರವು ಹಾಲಿನ ದರವನ್ನು ಹೆಚ್ಚಿಸಿದೆ. ಇತಿಹಾಸದಲ್ಲಿಯೇ ಮೊದಲ ಬಾರಿಗೆ ಹಾಲಿನ ದರವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ವಾಸ್ತವವಾಗಿ, ಸರ್ಕಾರವು ಲೀಟರ್ ಹಾಲಿನ ಬೆಲೆಯನ್ನು ₹8 ಹೆಚ್ಚಿಸುವುದಾಗಿ ಘೋಷಿಸಿದ್ದರೂ, ಬಹುತೇಕ

ಪ್ರಜಾವಾಣಿ ವಾರ್ತೆನಂದಿನಿ ಹಾಲಿನ ದರವನ್ನು ಹೆಚ್ಚಿಸಬೇಕು ಎನ್ನುವುದು ರಾಜ್ಯದ ಹಾಲು ಒಕ್ಕೂಟಗಳ ಬೇಡಿಕೆಯಾಗಿತ್ತು. ಅದಕ್ಕೆ ಮಣಿದಿರುವ ಸರ್ಕಾರವು ಹಾಲಿನ ದರವನ್ನು ಹೆಚ್ಚಿಸಿದೆ. ಇತಿಹಾಸದಲ್ಲಿಯೇ ಮೊದಲ ಬಾರಿಗೆ ಹಾಲಿನ ದರವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ವಾಸ್ತವವಾಗಿ, ಸರ್ಕಾರವು ಲೀಟರ್ ಹಾಲಿನ ಬೆಲೆಯನ್ನು ₹8 ಹೆಚ್ಚಿಸುವುದಾಗಿ ಘೋಷಿಸಿದ್ದರೂ, ಬಹುತೇಕ ಕಡೆ ₹8ರಿಂದ ₹12ರವರೆಗೆ ಹೆಚ್ಚಿಸಲಾಗಿದೆ. ಒಂದು ಲೀಟರ್ ಮೊಸರಿನ ಬೆಲೆಯಲ್ಲಿ ₹14 ಹೆಚ್ಚಳ ಮಾಡಲಾಗಿದೆ. ಮೊಸರಿನ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದು, ಮೊಸರಿನ ಬೆಲೆ ಏರಿಕೆಯಲ್ಲಿ ಸರ್ಕಾರದ ಪಾತ್ರವಿಲ್ಲ, ಒಕ್ಕೂಟಗಳೇ ಈ ಕುರಿತು ನಿರ್ಧಾರ ಕೈಗೊಂಡಿವೆ ಎಂದಿದ್ದಾರೆ.ಭಾರಿ ಪ್ರಮಾಣದ ದರ ಏರಿಕೆಯನ್ನು ಸರ್ಕಾರ ಮತ್ತು ಒಕ್ಕೂಟಗಳು ರೈತರ ಹೆಸರು ಹೇಳಿ ಸಮರ್ಥಿಸಿವೆ. ‘ಬರಗಾಲ, ಮೇವಿನ ಕೊರತೆ, ಉತ್ಪಾದನಾ ವೆಚ್ಚದ ಹೆಚ್ಚಳ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸುತ್ತಿರುವ ಹೈನುಗಾರರಿಗೆ ನೆರವಾಗುವುದು ಈ ದರ ಪರಿಷ್ಕರಣೆಯ ಪ್ರಮುಖ ಉದ್ದೇಶವಾಗಿದೆ’ ಎಂದು ಬೆಂಗಳೂರು ಹಾಲು ಒಕ್ಕೂಟ (ಬಮುಲ್) ದರ ಏರಿಕೆಯನ್ನು ಸಮರ್ಥಿಸಿಕೊಂಡಿದೆ.ಉತ್ಪಾದನಾ ವೆಚ್ಚದಲ್ಲಿ ಹೆಚ್ಚಳ, ಜತೆಗೆ ಬರಗಾಲದಿಂದ ಹೈನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನುವುದು ನಿಜ. ಹಾಲಿನ ಬೆಲೆ ಹೆಚ್ಚಿಸಬೇಕು ಎನ್ನುವ ಬೇಡಿಕೆ ನ್ಯಾಯಯುತವಾಗಿಯೇ ಇತ್ತು. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಹಾಲಿನ ದರವನ್ನು ಎರಡು ರೂಪಾಯಿ ಹೆಚ್ಚಿಸಲಾಗಿತ್ತು. ಕಳೆದ ತಿಂಗಳು ಆಂಧ್ರ ಪ್ರದೇಶದ ‘ವಿಜಯಾ ಡೇರಿ’ಯು ಹಾಲಿನ ದರವನ್ನು ಎರಡು ರೂಪಾಯಿ ಏರಿಸಿತ್ತು. ಈಗ ಕರ್ನಾಟಕದಲ್ಲಿ ಏರಿಸಲಾಗಿದೆ. ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಭಾರಿ ಪ್ರಮಾಣದಲ್ಲಿ ಬೆಲೆ ಏರಿಕೆ ಮಾಡಲಾಗಿದೆ. ಆದರೆ, ದರ ಏರಿಕೆಗೆ ರೈತರತ್ತ ಬೊಟ್ಟು ಮಾಡುವ ಒಕ್ಕೂಟಗಳು ನಿಜಕ್ಕೂ ಹೈನುಗಾರರ ಹಿತ ಕಾಯುತ್ತಿವೆಯೇ ಎನ್ನುವ ಪ್ರಶ್ನೆ ಮೂಡುತ್ತದೆ. ರಾಜ್ಯದ ಹಾಲು ಒಕ್ಕೂಟಗಳಲ್ಲಿ ನಡೆದಿರುವ ಕೆಲವು ಹಗರಣಗಳು, ಭ್ರಷ್ಟಾಚಾರ ಪ್ರಕರಣಗಳನ್ನು ನೋಡಿದರೆ ರೈತರ ಶ್ರಮದ ಫಲ ಯಾರ ಪಾಲಾಗುತ್ತಿದೆ ಎನ್ನುವುದರ ಅಂದಾಜು ಸಿಗುತ್ತದೆ.ಹಾಲಿನ ಪುಡಿ ಕದ್ದು ಮಾರಿದರು: ಮಂಡ್ಯ ಹಾಲು ಒಕ್ಕೂಟದಲ್ಲಿ (ಮನ್ಮುಲ್) ಖರೀದಿ ಅಧಿಕಾರಿಯಾಗಿದ್ದ ಪ್ರದೀಪ್ಕುಮಾರ್ ಜಾಧವ್, ಒಕ್ಕೂಟದ ಗೋದಾಮಿನಲ್ಲಿದ್ದ ಹಾಲಿನ ಪುಡಿಯನ್ನು ಕದ್ದು ಮಾರುತ್ತಿದ್ದರು. ಒಕ್ಕೂಟದ ಹಿಂದಿನ ಅಧ್ಯಕ್ಷರಾಗಿದ್ದ ಉಮ್ಮಡಿಹಳ್ಳಿ ಶಿವಪ್ಪ ಅವರ ಕಾಲದಿಂದಲೂ ಇದು ನಡೆಯುತ್ತಿತ್ತು, ಬಂದ ಹಣವನ್ನು ಇವರೆಲ್ಲ ಹಂಚಿಕೊಳ್ಳುತ್ತಿದ್ದರು ಎನ್ನುವ ಆರೋಪ ಇದೆ. ಆರೋಪಿಗಳು ಗುಣಮಟ್ಟದ ಹಾಲಿನ ಪುಡಿ (₹300) ಮಾರಿ, ಅದರ ಜಾಗದಲ್ಲಿ ಕಡಿಮೆ ಬೆಲೆಯ (₹160) ಹಾಲಿನ ಪುಡಿ ಇಟ್ಟಿದ್ದರು. ಇತ್ತೀಚೆಗೆ ಗೋದಾಮಿನಲ್ಲಿ ತಪಾಸಣೆ ನಡೆಸಿದಾಗ, 55.5 ಟನ್ ಹಾಲಿನ ಪುಡಿ ಕಡಿಮೆಯಿರುವುದು ಕಂಡುಬಂದಿತ್ತು. ಅದರ ವಿಚಾರಣೆ ನಡೆಸಿದಾಗ ಹಗರಣ ಬಯಲಾಗಿದೆ. ಹಗರಣದಿಂದ ಮನ್ಮುಲ್ಗೆ ₹3 ಕೋಟಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಇದು ಮನ್ಮುಲ್ ಕತೆಯಾದರೆ, ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ್ದು (ಕೋಚಿಮುಲ್) ಮತ್ತೊಂದು ರೀತಿಯ ಕತೆ. 2023ರಲ್ಲಿ ಒಕ್ಕೂಟದ ವಿವಿಧ 81 ಹುದ್ದೆಗಳಿಗೆ ನಡೆದ ನೇಮಕಾತಿಯಲ್ಲಿ ಹಣ ಮತ್ತು ರಾಜಕೀಯ ಪ್ರಭಾವದಿಂದ ಅಕ್ರಮ ಎಸಗಲಾಗಿದೆ ಎನ್ನುವ ಆರೋಪ ಕೇಳಿಬಂದಿತ್ತು. ಕೋಟ್ಯಂತರ ರೂಪಾಯಿ ವಸೂಲಿ ಮಾಡಲಾಗಿದ್ದು, ಹಣ ಅಕ್ರಮ ವರ್ಗಾವಣೆಯೂ ನಡೆದಿದೆ ಎನ್ನಲಾಗಿತ್ತು. ಈ ಸಂಬಂಧ ಕೋಚಿಮುಲ್ ಅಧ್ಯಕ್ಷರಾಗಿದ್ದ ಕೆ.ವೈ.ನಂಜೇಗೌಡ (ಮಾಲೂರು ಶಾಸಕ) ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ, ಅವರ ಹಲವು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ನಂತರ ಕೋಚಿಮುಲ್ನಿಂದ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಚಿಮುಲ್) ಪ್ರತ್ಯೇಕಗೊಂಡಿತು.ಸಾಲು ಸಾಲು ಹಗರಣ: ಬಹುತೇಕ ಒಕ್ಕೂಟಗಳಲ್ಲಿ ಹಗರಣಗಳು ವರದಿಯಾಗಿವೆ. 2019ರಲ್ಲಿ ಚಾಮರಾಜನಗರ ಹಾಲು ಒಕ್ಕೂಟದಲ್ಲಿ (ಚಾಮುಲ್) ಖಾಲಿ ಇದ್ದ 72 ಹುದ್ದೆಗಳಿಗೆ ನಡೆದ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಒಕ್ಕೂಟದ ಅಂದಿನ ಅಧ್ಯಕ್ಷರು, ನಿರ್ದೇಶಕ ಹಾಗೂ ಪ್ರಭಾವಿ ರಾಜಕಾರಣಿಗಳ ಸಂಬಂಧಿಗಳಿಗೆ ಹುದ್ದೆಗಳನ್ನು ನೀಡಲಾಗಿದೆ ಎನ್ನುವ ಆರೋಪಗಳು ಕೇಳಿಬಂದಿದ್ದವು. ಅಂದಿನ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ತನಿಖೆಗೆ ಜಂಟಿ ಸಮಿತಿ ರಚಿಸಿದ್ದರು. ಸಮಿತಿ ನೀಡಿದ್ದ ವರದಿಯನ್ನು ಜಿಲ್ಲಾಡಳಿತ ಸರ್ಕಾರಕ್ಕೆ ಸಲ್ಲಿಕೆ ಮಾಡಿತ್ತು.ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಹಾಲು ಒಕ್ಕೂಟದಲ್ಲಿ (ರಾಬಕೊವಿ) ಜಾನುವಾರು ವಿಮೆ ಮತ್ತು ರೈತ ಕಲ್ಯಾಣ ಟ್ರಸ್ಟ್ನಲ್ಲಿ ಒಟ್ಟು ₹16.5 ಕೋಟಿ ಅವ್ಯವಹಾರ ನಡೆದಿರುವುದಾಗಿ ಸಂಘದ ಮಾಜಿ ನಿರ್ದೇಶಕ ಬಳ್ಳಾರಿಯ ಬ್ರೂಸ್ಪೇಟೆ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಿಸಿದ್ದರು. ಈ ಬಗ್ಗೆ ಒಕ್ಕೂಟ ಪ್ರತಿಕ್ರಿಯಿಸಿ, ರೈತ ಕಲ್ಯಾಣ ಟ್ರಸ್ಟ್ನ ಉದ್ಯೋಗಿ ಉಮಾ ಮಹೇಶ್ವರಿ ಎಂಬವರು ರಾಸು ವಿಮೆ ಮತ್ತು ಟ್ರಸ್ಟ್ನಲ್ಲಿನ ಒಟ್ಟು ₹42.04 ಲಕ್ಷ ಸ್ವಂತಕ್ಕೆ ಬಳಸಿದ್ದರು. ಅದನ್ನು ಅವರಿಂದ ವಸೂಲಿ ಮಾಡಿ, ಅವರನ್ನು ಅಮಾನತುಗೊಳಿಸಲಾಗಿದೆ ಎಂದಿದೆ. ಒಕ್ಕೂಟದಲ್ಲಿ ಈಚೆಗೆ ನಡೆದ 63 ಹುದ್ದೆಗಳ ನೇಮಕಾತಿಯಲ್ಲೂ ಅಕ್ರಮ ನಡೆದಿರುವ ಆರೋಪಗಳಿವೆ. ಈ ಸಂಬಂಧ ವ್ಯಕ್ತಿಯೊಬ್ಬರು ಕೋರ್ಟ್ ಮೊರೆ ಹೋಗಿದ್ದಾರೆ. ಆದರೆ, ಈ ಬಗ್ಗೆ ಮಾಹಿತಿ ನೀಡಲು ಒಕ್ಕೂಟ ನಿರಾಕರಿಸಿದೆ.ಇವು ಒಕ್ಕೂಟದ ಮಟ್ಟದಲ್ಲಿ ನಡೆದ ಪ್ರಮುಖ ಹಗರಣಗಳಾದರೆ, ಹಳ್ಳಿಗಳ ಮಟ್ಟದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಅವ್ಯವಹಾರ ಅತಿ ಸಹಜ ಎನ್ನುವಂತಾಗಿಬಿಟ್ಟಿದೆ. ಊರಿನ ಪ್ರಭಾವಿಗಳು, ಪ್ರಬಲ ಜಾತಿಗಳವರು, ವಿವಿಧ ಪಕ್ಷಗಳ ರಾಜಕಾರಣಿಗಳು ಹಾಲಿನ ಡೇರಿಗಳನ್ನು ನಿಯಂತ್ರಿಸುತ್ತಿದ್ದಾರೆ. ಡೇರಿಗಳ ಕಾರ್ಯದರ್ಶಿಗಳು ಭ್ರಷ್ಟಾಚಾರ ನಡೆಸಿ, ಸಂಘಗಳು ನಷ್ಟದಲ್ಲಿರುವ, ಅವುಗಳ ಲಾಭ ಕಡಿಮೆಯಾಗಿರುವ ಪ್ರಕರಣಗಳು ವ್ಯಾಪಕವಾಗಿ ವರದಿಯಾಗುತ್ತಲೇ ಇವೆ.ನಷ್ಟದಲ್ಲಿ ಒಕ್ಕೂಟಗಳು: ಅತಿವೃಷ್ಟಿ, ಅನಾವೃಷ್ಟಿ ಎಂಥದೇ ಸಂದರ್ಭದಲ್ಲೂ ರಾಜ್ಯದಲ್ಲಿ ಹಾಲು ಉತ್ಪಾದನೆ ಕಡಿಮೆ ಆಗಿಲ್ಲ. ರೈತರ ಶ್ರಮದಿಂದ ಹಾಲು ಉತ್ಪಾದನೆಯಲ್ಲಿ ದೇಶದಲ್ಲಿಯೇ ರಾಜ್ಯವು ಮುಂಚೂಣಿಯಲ್ಲಿದೆ. ಆದರೆ, ಹಾಲು ಡೇರಿಗಳ ಅವ್ಯವಹಾರಗಳಿಂದ, ಒಕ್ಕೂಟಗಳ ಅವ್ಯವಸ್ಥೆಯಿಂದ ರೈತರ ಶ್ರಮದ ಫಲ ಅವರಿಗೆ ಪೂರ್ಣವಾಗಿ ದಕ್ಕುತ್ತಿಲ್ಲ. ಕನಿಷ್ಠ ಪಕ್ಷ ಒಕ್ಕೂಟದ ನಿರ್ವಹಣೆಗೂ ಹಣ ಸಾಲದೇ ಕೆಲವು ಒಕ್ಕೂಟಗಳು ನಷ್ಟ ಅನುಭವಿಸುತ್ತಿವೆ. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹೈನುಗಾರಿಕೆ ಮತ್ತು ರೇಷ್ಮೆ ಕೃಷಿ (ಸಿಲ್ಕ್ ಆ್ಯಂಡ್ ಮಿಲ್ಕ್) ರೈತರಿಗೆ ಜೀವನಾಡಿಯಾಗಿದ್ದವು. ನೀರಿನ ಕೊರತೆಯ ನಡುವೆಯೂ ರೈತರು ಹರಸಾಹಸ ಮಾಡಿ, ಹಸುಗಳನ್ನು ಸಾಕಿ ರಾಜ್ಯದಲ್ಲಿಯೇ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡಿದ್ದರು. ಆದರೆ, ಹಲವು ಹಗರಣ, ಆಡಳಿತದಲ್ಲಿನ ಅವ್ಯವಸ್ಥೆ, ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಮಾರುಕಟ್ಟೆ ಕಂಡುಕೊಳ್ಳುವಲ್ಲಿ ಕೆಎಂಎಫ್ ವಿಫಲವಾಗಿರುವುದು (ಈ ಸಮಸ್ಯೆ ದಶಕಗಳಿಂದಲೂ ಇದೆ)– ಇವೆಲ್ಲವುಗಳಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡೂ ಒಕ್ಕೂಟಗಳು ಇಂದು ನಷ್ಟದಲ್ಲಿವೆ.ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ವಿಮುಲ್) ₹1.24 ಕೋಟಿ ನಷ್ಟದಲ್ಲಿದೆ. ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಹಾಲು ಒಕ್ಕೂಟವು (ರಾಬಕೊವಿ) ಹಲವು ವರ್ಷಗಳಿಂದ ಕೋಟ್ಯಂತರ ರೂಪಾಯಿ ನಷ್ಟದಲ್ಲಿತ್ತು. 2024–25ನೇ ಸಾಲಿನಲ್ಲಿ ₹4.26 ಕೋಟಿ ನಷ್ಟದ ಸುಳಿಗೆ ಸಿಲುಕಿತ್ತು. 2025–26ನೇ ಸಾಲಿನಲ್ಲಿ ₹52 ಲಕ್ಷ ಲಾಭ ಕಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಒಕ್ಕೂಟದಲ್ಲಿ ನಷ್ಟ ಇಲ್ಲ, ಆದರೆ, ಲಾಭವೂ ಇಲ್ಲ ಎನ್ನುವಂಥ ಸ್ಥಿತಿ ಇದೆ.‘ರೈತರ ಅಪಾರ ಶ್ರಮದ ನಡುವೆಯೂ ರಾಜಕೀಯ ಪ್ರಭಾವದ ಅಧ್ಯಕ್ಷರು, ನಿರ್ದೇಶಕರು ಮತ್ತು ಲಂಚ ಕೊಟ್ಟು ಆಯ್ಕೆಯಾದ ಅಧಿಕಾರಿಗಳು, ಸಿಬ್ಬಂದಿ ಒಕ್ಕೂಟಗಳನ್ನು ಲಾಭದಾಯಕವಾಗಿಸುವಲ್ಲಿ ವಿಫಲರಾಗಿದ್ದಾರೆ’ ಎಂಬುದು ಹಾಲು ಉತ್ಪಾದಕರ ಆರೋಪ.ಹೆಚ್ಚಿನ ಪಾಲಿಗಾಗಿ ಒಕ್ಕೂಟಗಳ ಬೇಡಿಕೆ: ಪ್ರತಿ ಬಾರಿ ಹಾಲಿನ ದರ ಹೆಚ್ಚಳದ ಬೇಡಿಕೆ ಇಡುವಾಗಲೂ ಒಕ್ಕೂಟಗಳು, ಏರಿಕೆಯಲ್ಲಿ ಹೆಚ್ಚಿನ ಪಾಲು ತಮಗೇ ಬೇಕು ಎಂದು ಕೇಳುವುದು ವಾಡಿಕೆಯೇ ಆಗಿಬಿಟ್ಟಿದೆ. 2024ರಲ್ಲಿ ಹಾಲಿನ ಪಾಕೆಟ್ಗಳಲ್ಲಿ ಹಾಲಿನ ಪ್ರಮಾಣ ಹೆಚ್ಚಿಸಿ, ಬೆಲೆಯನ್ನೂ ₹2 ಹೆಚ್ಚಿಸಲಾಗಿತ್ತು. ಹೆಚ್ಚಳವಾದ ಮೊತ್ತವನ್ನು ರೈತರಿಗೇ ವರ್ಗಾಯಿಸಬೇಕು ಎಂದು ಸರ್ಕಾರ ಹೇಳಿತ್ತು. ಆದರೆ, ಬೆಲೆ ಏರಿಕೆಯ ಕೆಲವೇ ದಿನಗಳ ಮುಂಚೆ ರೈತರಿಗೆ ಕೊಡುತ್ತಿದ್ದ ಹಣದಲ್ಲಿ ಕೋಚಿಮುಲ್ ಲೀಟರ್ಗೆ ₹2 ಕಡಿಮೆ ಮಾಡಿತ್ತು. ಸರ್ಕಾರದ ಸೂಚನೆಯ ಹೊರತಾಗಿಯೂ ಒಕ್ಕೂಟಗಳು ಹೀಗೆ ರಂಗೋಲಿ ಕೆಳಗೆ ನುಸುಳುವ ಕೆಲಸ ಮಾಡುತ್ತಲೇ ಇವೆ. ರೈತರಿಗೆ ನಷ್ಟ ಮುಂದುವರಿಯುತ್ತಲೇ ಇದೆ. ಈ ಬಾರಿಯೂ ಬೆಲೆ ಹೆಚ್ಚಳದಲ್ಲಿ ಹೆಚ್ಚಿನ ಪಾಲನ್ನು ತಮಗೇ ನೀಡಬೇಕು ಎಂದು ಹಲವು ಒಕ್ಕೂಟಗಳು ಒತ್ತಾಯಿಸಿದ್ದವು.ಬೆಲೆ ಏರಿಕೆಯ ಲಾಭ ಯಾರಿಗೆ?: ಹಸುಗಳಿಗೆ ಹಾಕುವ ಬೂಸಾ ಬೆಲೆ ಇತ್ತೀಚೆಗಷ್ಟೇ ₹100 ಹೆಚ್ಚಾಗಿತ್ತು. ಈಗ ಹಾಲಿನ ಬೆಲೆ ಏರಿಕೆಯಾಗುತ್ತಿದ್ದಂತೆಯೇ ವ್ಯಾಪಾರಿಗಳು ಮತ್ತೆ ಬೂಸಾ ಬೆಲೆ ಏರಿಸಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. ಹೀಗೆ ಹಾಲಿನ ಬೆಲೆ ಹೆಚ್ಚಳದ ಪಾಲು ಒಕ್ಕೂಟಗಳಿಗೆ, ಭ್ರಷ್ಟ ಅಧ್ಯಕ್ಷ, ನಿರ್ದೇಶಕರು, ಅಧಿಕಾರಿಗಳಿಗೆ, ವ್ಯಾಪಾರಿಗಳಿಗೆ ಹೋಗಿ ಕೊನೆಗೆ ರೈತರಿಗೆ ಉಳಿಯುವುದು ಶ್ರಮ ಮಾತ್ರ ಎನ್ನುವ ಪರಿಸ್ಥಿತಿ ಇದೆ.ಬರಗಾಲದಲ್ಲಿ ಬರೆ: ಇಂದು ಬರಗಾಲ ಮತ್ತಿತರ ಕಾರಣಗಳಿಂದ ಅಕ್ಕಿ, ಎಣ್ಣೆ, ದವಸ ಧಾನ್ಯ, ತರಕಾರಿ ಹೀಗೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿ, ಜನರ ಬದುಕು ಅತ್ಯಂತ ದುಸ್ತರವಾಗಿದೆ. ಇಂಥ ಸ್ಥಿತಿಯಲ್ಲಿ ಹಾಲಿನ ಬೆಲೆಯನ್ನು ಒಂದೇ ಬಾರಿಗೆ ₹8 ಹೆಚ್ಚಿಸಬಾರದಿತ್ತು ಎನ್ನುವುದು ಕೆಲವರ ಅನಿಸಿಕೆ. ಒಕ್ಕೂಟಗಳು ಹಣಕಾಸು ನಿರ್ವಹಣೆಯಲ್ಲಿ ದಕ್ಷತೆ ತೋರಿದ್ದರೆ, ಭ್ರಷ್ಟಾಚಾರಕ್ಕೆ ಅಂತ್ಯವಾಡಿದ್ದರೆ, ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಕಂಡುಕೊಂಡಿದ್ದರೆ, ಈ ಪ್ರಮಾಣದಲ್ಲಿ ಬೆಲೆ ಏರಿಕೆಯ ಅಗತ್ಯವೇ ಬರುತ್ತಿರಲಿಲ್ಲ ಎನ್ನುವ ವಿಶ್ಲೇಷಣೆ ಇದೆ.ಬೇರೆ ರಾಜ್ಯಗಳಿಗೆ ಹೋಲಿಸಿದರೆ...ತಮಿಳುನಾಡು ಬಿಟ್ಟು, ನೆರೆಯ ಹಾಗೂ ದೇಶದ ಪ್ರಮುಖ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಹಾಲಿನ ದರ ಇನ್ನೂ ಕಡಿಮೆ ಎಂದು ಸರ್ಕಾರ ಹೇಳುತ್ತಿದೆ.ಆದರೆ, ಈಗ ದರ ಹೆಚ್ಚಳ ಆದ ಮೇಲೆ, ಕೊಬ್ಬಿನ ಅಂಶ ಕಡಿಮೆ ಇರುವ ಟೋನ್ಡ್ ಹಾಲಿನ ದರದಲ್ಲಿ ಇದು ನಿಜವಾದರೂ, ಹೆಚ್ಚು ಕೊಬ್ಬಿನ ಅಂಶ ಇರುವ ಹಾಲಿಗೆ ಕೆಲವು ರಾಜ್ಯಗಳಲ್ಲಿ ಕರ್ನಾಟಕಕ್ಕಿಂತಲೂ ಕಡಿಮೆ ದರ ಇದೆ.ಟೋನ್ಡ್ ಹಾಲಿನ ಒಂದು ಲೀಟರ್ ದರ ನಮ್ಮಲ್ಲಿ ಈಗ ₹54 ಆಗಿದೆ. ಕೇರಳಂನಲ್ಲಿ ₹53.5 ಇದೆ. ತಮಿಳುನಾಡಿನಲ್ಲಿ ಲೀಟರ್ ಹಾಲು ₹40ಕ್ಕೆ ಸಿಗುತ್ತದೆ. ಉಳಿದಂತೆ ಗುಜರಾತ್ನಲ್ಲಿ ₹57–₹60, ರಾಜಸ್ಥಾನ ₹56, ದೆಹಲಿ ₹59, ತೆಲಂಗಾಣದಲ್ಲಿ ₹64, ಆಂಧ್ರ ಪ್ರದೇಶದಲ್ಲಿ ₹62 ಇದೆ.ಕೊಬ್ಬಿನ ಅಂಶ ಹೆಚ್ಚಿರುವ (ಶೇ 4.5) ಹಾಲಿನ ದರ ಒಂದು ಲೀಟರ್ಗೆ ನಮ್ಮಲ್ಲಿ ₹64 ಆಗಿದೆ. ಕೇರಳಂನಲ್ಲಿ ₹64 ಇದೆ. ಆಂಧ್ರ, ತೆಲಂಗಾಣದಲ್ಲಿ ತಲಾ ₹68, ಪಂಜಾಬ್, ಒಡಿಶಾ, ಛತ್ತೀಸಗಡಗಳಲ್ಲಿ ತಲಾ ₹66ಕ್ಕೆ ಮಾರಾಟ ಮಾಡಲಾಗುತ್ತಿದೆ. ರಾಜಸ್ಥಾನ, ಗುಜರಾತ್ಗಳಲ್ಲಿ ತಲಾ ₹64ರಷ್ಟಿದೆ. ತಮಿಳುನಾಡು, ಗೋವಾ, ಬಿಹಾರ ರಾಜ್ಯಗಳಲ್ಲಿ ನಮಗಿಂತಲೂ ಕಡಿಮೆ ಇದೆ (₹60).ಒಕ್ಕೂಟಗಳಲ್ಲಿ ರಾಜಕೀಯ ಮುಖಂಡರದ್ದೇ ಆಡಳಿತಕೆಎಂಎಫ್ ಸೇರಿದಂತೆ ಜಿಲ್ಲಾ ವ್ಯಾಪ್ತಿಯ ಹಾಲು ಒಕ್ಕೂಟಗಳಲ್ಲಿ ನಿರ್ದೇಶಕರು, ಅಧ್ಯಕ್ಷರಾದಿಯಾಗಿ ಪ್ರಮುಖ ಹುದ್ದೆಗಳನ್ನು ವಹಿಸಿಕೊಳ್ಳುವವರು ಬಹುತೇಕರು ರಾಜಕೀಯ ಪಕ್ಷಗಳ ಮುಖಂಡರು, ಸಚಿವರು, ಶಾಸಕರ ಹಿಂಬಾಲಕರು. ಬಹುತೇಕ ಸಂದರ್ಭಗಳಲ್ಲಿ ಸರ್ಕಾರದಲ್ಲಿ ಸಚಿವ ಸ್ಥಾನ ಅಥವಾ ನಿಗಮ ಮಂಡಳಿಗಳ ಹುದ್ದೆ ವಂಚಿತ ಶಾಸಕರ ಅಸಮಾಧಾನವನ್ನು ಶಮನ ಮಾಡಲು ಕೆಎಂಎಫ್, ಇಲ್ಲವೇ ಜಿಲ್ಲಾ ಒಕ್ಕೂಟಗಳ ಅಧ್ಯಕ್ಷ ಗಾದಿಯನ್ನು ಅವರಿಗೆ ನೀಡಲಾಗುತ್ತಿದೆ.ಕೆಎಂಎಎಫ್, ಸಹಕಾರಿ ವ್ಯವಸ್ಥೆಯಲ್ಲಿ ಸ್ಥಾಪನೆಗೊಂಡಿರುವ ಸಂಸ್ಥೆ. ಇದಕ್ಕೆ ಸಂಬಂಧಿಸಿದ ಚುನಾವಣೆಗಳಲ್ಲಿ ರಾಜಕೀಯ ಬೆರೆಯಬಾರದು. ಆದರೆ, ವಾಸ್ತವದಲ್ಲಿ ಒಕ್ಕೂಟಗಳ ನಿರ್ದೇಶಕರ ಸ್ಥಾನಗಳಿಗೆ ನಡೆಯುವ ಚುನಾವಣೆಗಳು, ವಿಧಾನಸಭೆ, ಲೋಕಸಭೆಗೆ ನಡೆಯುವ ಚುನಾವಣೆಗಳ ಮಾದರಿಯಲ್ಲೇ ನಡೆಯುತ್ತವೆ. ಆದರೆ, ಇಲ್ಲಿ ಪಕ್ಷದ ಚಿಹ್ನೆ ಒಂದಿರುವುದಿಲ್ಲ. ಪಕ್ಷ, ಜಾತಿ, ಹಣದ ಪ್ರಭಾವ ಎಲ್ಲವೂ ಚುನಾವಣೆಯಲ್ಲಿ ಕೆಲಸ ಮಾಡುತ್ತವೆ. ನಿರ್ದೇಶಕರ ಚುನಾವಣೆಯಲ್ಲಿ ಗೆದ್ದ ನಂತರ ಅಧ್ಯಕ್ಷರಾಗಲೂ ಪೈಪೋಟಿ ಇರುತ್ತದೆ. ಮಾತುಕತೆ ಮೂಲಕ ಅಧಿಕಾರ ಹಂಚಿಕೆಯೂ ನಡೆಯುತ್ತದೆ.ರಾಜ್ಯದಲ್ಲಿರುವ ಯಾವುದೇ ಒಕ್ಕೂಟದ ನಿರ್ದೇಶಕರು, ಅಧ್ಯಕ್ಷರನ್ನು ಗಮನಿಸಿ. ಅವರು ಯಾವುದಾದರೂ ಪಕ್ಷದ ಜೊತೆ ಗುರುತಿಸಿಕೊಂಡವರಾಗಿರುತ್ತಾರೆ. ಶಾಸಕರು, ಸಂಸದರು ಅಥವಾ ಚುನಾವಣೆಯಲ್ಲಿ ಸೋತು ಅಧಿಕಾರ ಕಳೆದುಕೊಂಡಿರುವವರೂ ಇರುತ್ತಾರೆ. ಸದ್ಯ ಕೆಎಂಎಫ್ಗೆ ಅಧ್ಯಕ್ಷರಿಲ್ಲ. ಹಿಂದೆ ಇದ್ದ ಭೀಮಾ ನಾಯಕ್ ಅವರು ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಾಸಕರಾಗಿದ್ದ ಬಾಲಚಂದ್ರ ಜಾರಕಿಹೊಳಿ, ಜಿ.ಸೋಮಶೇಖರ ರೆಡ್ಡಿ ಕೆಎಂಎಫ್ ಅಧ್ಯಕ್ಷರಾಗಿದ್ದರು. ಜೆಡಿಎಸ್ನ ಹಾಲಿ ಶಾಸಕ ಎಚ್.ಡಿ.ರೇವಣ್ಣ ಅವರು 13 ವರ್ಷಗಳವರೆಗೆ ಕೆಎಂಎಫ್ ನೇತೃತ್ವ ವಹಿಸಿದ್ದರು.ಕಾಂಗ್ರೆಸ್ ಮುಖಂಡ ಡಿ.ಕೆ.ಸುರೇಶ್ ಅವರು ಸದ್ಯ ಬೆಂಗಳೂರು ಹಾಲು ಒಕ್ಕೂಟದ (ಬಮುಲ್) ಅಧ್ಯಕ್ಷ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ಅವರು, ಬಮುಲ್ ನಿರ್ದೇಶಕರ ಚುನಾವಣೆಗೆ ಸ್ಪರ್ಧಿಸಿದ್ದರು.ಮಾಹಿತಿ: ಬ್ಯೂರೊಗಳಿಂದ.Highlights - nullCut-off box - ಬೇರೆ ರಾಜ್ಯಗಳಿಗೆ ಹೋಲಿಸಿದರೆ...ತಮಿಳುನಾಡು ಬಿಟ್ಟು ನೆರೆಯ ಹಾಗೂ ದೇಶದ ಪ್ರಮುಖ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಹಾಲಿನ ದರ ಇನ್ನೂ ಕಡಿಮೆ ಎಂದು ಸರ್ಕಾರ ಹೇಳುತ್ತಿದೆ.ಆದರೆ ಈಗ ದರ ಹೆಚ್ಚಳ ಆದ ಮೇಲೆ ಕೊಬ್ಬಿನ ಅಂಶ ಕಡಿಮೆ ಇರುವ ಟೋನ್ಡ್ ಹಾಲಿನ ದರದಲ್ಲಿ ಇದು ನಿಜವಾದರೂ ಹೆಚ್ಚು ಕೊಬ್ಬಿನ ಅಂಶ ಇರುವ ಹಾಲಿಗೆ ಕೆಲವು ರಾಜ್ಯಗಳಲ್ಲಿ ಕರ್ನಾಟಕಕ್ಕಿಂತಲೂ ಕಡಿಮೆ ದರ ಇದೆ.ಟೋನ್ಡ್ ಹಾಲಿನ ಒಂದು ಲೀಟರ್ ದರ ನಮ್ಮಲ್ಲಿ ಈಗ ₹54 ಆಗಿದೆ. ಕೇರಳಂನಲ್ಲಿ ₹53.5 ಇದೆ. ತಮಿಳುನಾಡಿನಲ್ಲಿ ಲೀಟರ್ ಹಾಲು ₹40ಕ್ಕೆ ಸಿಗುತ್ತದೆ. ಉಳಿದಂತೆ ಗುಜರಾತ್ನಲ್ಲಿ ₹57–₹60 ರಾಜಸ್ಥಾನ ₹56 ದೆಹಲಿ ₹59 ತೆಲಂಗಾಣದಲ್ಲಿ ₹64 ಆಂಧ್ರ ಪ್ರದೇಶದಲ್ಲಿ ₹62 ಇದೆ.ಕೊಬ್ಬಿನ ಅಂಶ ಹೆಚ್ಚಿರುವ (ಶೇ 4.5) ಹಾಲಿನ ದರ ಒಂದು ಲೀಟರ್ಗೆ ನಮ್ಮಲ್ಲಿ ₹64 ಆಗಿದೆ. ಕೇರಳಂನಲ್ಲಿ ₹64 ಇದೆ. ಆಂಧ್ರ ತೆಲಂಗಾಣದಲ್ಲಿ ತಲಾ ₹68 ಪಂಜಾಬ್ ಒಡಿಶಾ ಛತ್ತೀಸಗಡಗಳಲ್ಲಿ ತಲಾ ₹66ಕ್ಕೆ ಮಾರಾಟ ಮಾಡಲಾಗುತ್ತಿದೆ. ರಾಜಸ್ಥಾನ ಗುಜರಾತ್ಗಳಲ್ಲಿ ತಲಾ ₹64ರಷ್ಟಿದೆ. ತಮಿಳುನಾಡು ಗೋವಾ ಬಿಹಾರ ರಾಜ್ಯಗಳಲ್ಲಿ ನಮಗಿಂತಲೂ ಕಡಿಮೆ ಇದೆ (₹60).Cut-off box - ಒಕ್ಕೂಟಗಳಲ್ಲಿ ರಾಜಕೀಯ ಮುಖಂಡರದ್ದೇ ಆಡಳಿತಕೆಎಂಎಫ್ ಸೇರಿದಂತೆ ಜಿಲ್ಲಾ ವ್ಯಾಪ್ತಿಯ ಹಾಲು ಒಕ್ಕೂಟಗಳಲ್ಲಿ ನಿರ್ದೇಶಕರು ಅಧ್ಯಕ್ಷರಾದಿಯಾಗಿ ಪ್ರಮುಖ ಹುದ್ದೆಗಳನ್ನು ವಹಿಸಿಕೊಳ್ಳುವವರು ಬಹುತೇಕರು ರಾಜಕೀಯ ಪಕ್ಷಗಳ ಮುಖಂಡರು ಸಚಿವರು ಶಾಸಕರ ಹಿಂಬಾಲಕರು. ಬಹುತೇಕ ಸಂದರ್ಭಗಳಲ್ಲಿ ಸರ್ಕಾರದಲ್ಲಿ ಸಚಿವ ಸ್ಥಾನ ಅಥವಾ ನಿಗಮ ಮಂಡಳಿಗಳ ಹುದ್ದೆ ವಂಚಿತ ಶಾಸಕರ ಅಸಮಾಧಾನವನ್ನು ಶಮನ ಮಾಡಲು ಕೆಎಂಎಫ್ ಇಲ್ಲವೇ ಜಿಲ್ಲಾ ಒಕ್ಕೂಟಗಳ ಅಧ್ಯಕ್ಷ ಗಾದಿಯನ್ನು ಅವರಿಗೆ ನೀಡಲಾಗುತ್ತಿದೆ.ಕೆಎಂಎಎಫ್ ಸಹಕಾರಿ ವ್ಯವಸ್ಥೆಯಲ್ಲಿ ಸ್ಥಾಪನೆಗೊಂಡಿರುವ ಸಂಸ್ಥೆ. ಇದಕ್ಕೆ ಸಂಬಂಧಿಸಿದ ಚುನಾವಣೆಗಳಲ್ಲಿ ರಾಜಕೀಯ ಬೆರೆಯಬಾರದು. ಆದರೆ ವಾಸ್ತವದಲ್ಲಿ ಒಕ್ಕೂಟಗಳ ನಿರ್ದೇಶಕರ ಸ್ಥಾನಗಳಿಗೆ ನಡೆಯುವ ಚುನಾವಣೆಗಳು ವಿಧಾನಸಭೆ ಲೋಕಸಭೆಗೆ ನಡೆಯುವ ಚುನಾವಣೆಗಳ ಮಾದರಿಯಲ್ಲೇ ನಡೆಯುತ್ತವೆ. ಆದರೆ ಇಲ್ಲಿ ಪಕ್ಷದ ಚಿಹ್ನೆ ಒಂದಿರುವುದಿಲ್ಲ. ಪಕ್ಷ ಜಾತಿ ಹಣದ ಪ್ರಭಾವ ಎಲ್ಲವೂ ಚುನಾವಣೆಯಲ್ಲಿ ಕೆಲಸ ಮಾಡುತ್ತವೆ. ನಿರ್ದೇಶಕರ ಚುನಾವಣೆಯಲ್ಲಿ ಗೆದ್ದ ನಂತರ ಅಧ್ಯಕ್ಷರಾಗಲೂ ಪೈಪೋಟಿ ಇರುತ್ತದೆ. ಮಾತುಕತೆ ಮೂಲಕ ಅಧಿಕಾರ ಹಂಚಿಕೆಯೂ ನಡೆಯುತ್ತದೆ.ರಾಜ್ಯದಲ್ಲಿರುವ ಯಾವುದೇ ಒಕ್ಕೂಟದ ನಿರ್ದೇಶಕರು ಅಧ್ಯಕ್ಷರನ್ನು ಗಮನಿಸಿ. ಅವರು ಯಾವುದಾದರೂ ಪಕ್ಷದ ಜೊತೆ ಗುರುತಿಸಿಕೊಂಡವರಾಗಿರುತ್ತಾರೆ. ಶಾಸಕರು ಸಂಸದರು ಅಥವಾ ಚುನಾವಣೆಯಲ್ಲಿ ಸೋತು ಅಧಿಕಾರ ಕಳೆದುಕೊಂಡಿರುವವರೂ ಇರುತ್ತಾರೆ. ಸದ್ಯ ಕೆಎಂಎಫ್ಗೆ ಅಧ್ಯಕ್ಷರಿಲ್ಲ. ಹಿಂದೆ ಇದ್ದ ಭೀಮಾ ನಾಯಕ್ ಅವರು ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಾಸಕರಾಗಿದ್ದ ಬಾಲಚಂದ್ರ ಜಾರಕಿಹೊಳಿ ಜಿ.ಸೋಮಶೇಖರ ರೆಡ್ಡಿ ಕೆಎಂಎಫ್ ಅಧ್ಯಕ್ಷರಾಗಿದ್ದರು. ಜೆಡಿಎಸ್ನ ಹಾಲಿ ಶಾಸಕ ಎಚ್.ಡಿ.ರೇವಣ್ಣ ಅವರು 13 ವರ್ಷಗಳವರೆಗೆ ಕೆಎಂಎಫ್ ನೇತೃತ್ವ ವಹಿಸಿದ್ದರು.ಕಾಂಗ್ರೆಸ್ ಮುಖಂಡ ಡಿ.ಕೆ.ಸುರೇಶ್ ಅವರು ಸದ್ಯ ಬೆಂಗಳೂರು ಹಾಲು ಒಕ್ಕೂಟದ (ಬಮುಲ್) ಅಧ್ಯಕ್ಷ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ಅವರು ಬಮುಲ್ ನಿರ್ದೇಶಕರ ಚುನಾವಣೆಗೆ ಸ್ಪರ್ಧಿಸಿದ್ದರು.