ಕನ್ನಡ ಪದ ಕಟ್ಟು: ಭಾಗ–1
ನವೆಂಬರ್ ಕನ್ನಡದ ತಿಂಗಳು. ಈ ಸನ್ನಿವೇಶದಲ್ಲಿ ನಮ್ಮ ನಿತ್ಯದ ಬಳಕೆಯಲ್ಲಿ ಹಾಸುಹೊಕ್ಕಾಗಿರುವ ಅದೆಷ್ಟೋ ಪದಗಳು ಮೂಲತಃ ಇಂಗ್ಲಿಷ್ ಅಥವಾ ಬೇರೆ ಬಾಷೆಯಿಂದ ಎರವಲು ಪಡೆದಂಥವು. ಅವು ಎಷ್ಟರಮಟ್ಟಿಗೆ ಬಳಕೆಗೆ ಬಂದುಬಿಟ್ಟಿವೆ ಎಂದರೆ, ಕನ್ನಡದ್ದೇ ಪದವೇನೋ ಎಂಬಂತೆ ಭಾಸವಾಗುತ್ತವೆ. ಅದರಲ್ಲೂ ಕನ್ನಡದಲ್ಲಿ ದೈನಂದಿನ ಬಳಕೆಯಲ್ಲಿ ಬೆರೆತುಹೋಗಿರುವ ಅನೇಕ ಪದಗಳು ಮೂಲತಃ ಇಂಗ್ಲಿಷ್

ನವೆಂಬರ್ ಕನ್ನಡದ ತಿಂಗಳು. ಈ ಸನ್ನಿವೇಶದಲ್ಲಿ ನಮ್ಮ ನಿತ್ಯದ ಬಳಕೆಯಲ್ಲಿ ಹಾಸುಹೊಕ್ಕಾಗಿರುವ ಅದೆಷ್ಟೋ ಪದಗಳು ಮೂಲತಃ ಇಂಗ್ಲಿಷ್ ಅಥವಾ ಬೇರೆ ಬಾಷೆಯಿಂದ ಎರವಲು ಪಡೆದಂಥವು. ಅವು ಎಷ್ಟರಮಟ್ಟಿಗೆ ಬಳಕೆಗೆ ಬಂದುಬಿಟ್ಟಿವೆ ಎಂದರೆ, ಕನ್ನಡದ್ದೇ ಪದವೇನೋ ಎಂಬಂತೆ ಭಾಸವಾಗುತ್ತವೆ. ಅದರಲ್ಲೂ ಕನ್ನಡದಲ್ಲಿ ದೈನಂದಿನ ಬಳಕೆಯಲ್ಲಿ ಬೆರೆತುಹೋಗಿರುವ ಅನೇಕ ಪದಗಳು ಮೂಲತಃ ಇಂಗ್ಲಿಷ್ನಿಂದ ಬಂದಿವೆ. ಉದಾಹರಣೆಗೆ ಬಸ್ಸು, ರೈಲು, ಪೆನ್ನು, ಸ್ಕೈವಾಕ್ ಮುಂತಾದ ಪದಗಳನ್ನು ನಾವು ಕನ್ನಡ ಪದಗಳಂತೆಯೇ ಬಳಸುತ್ತೇವೆ. ಆದರೆ ಇವುಗಳಿಗೆ ಅರ್ಥಕ್ಕೆ ತಕ್ಕಂತೆ ಕನ್ನಡದ ಪದಗಳನ್ನು ರೂಪಿಸಲು ಸಾಧ್ಯವಿದೆ. ಕೆಲವು ಪದಗಳಿಗೆ ಈಗಾಗಲೇ ಕನ್ನಡ ಪರ್ಯಾಯಗಳಿವೆ; ಇನ್ನು ಕೆಲವು ಪದಗಳಿಗೆ ಸರಳ, ಅರ್ಥಪೂರ್ಣ ಪರ್ಯಾಯಗಳನ್ನು ರೂಪಿಸಬಹುದು. ಕನ್ನಡದ ವ್ಯಾಕರಣಕ್ಕೆ ಹೊಂದಾಣಿಕೆಯಾಗುವ, ಪದದ ಅರ್ಥವನ್ನು ಸುಲಭವಾಗಿ ಗ್ರಹಿಸುವ ಸಾಧ್ಯತೆ ಮತ್ತು ದೈನಂದಿನ ಬಳಕೆಗೆ ಅನುಕೂಲ. ಸಾಧ್ಯವಾದಷ್ಟು ಚಿಕ್ಕದಾದ, ಸಹಜವಾದ ಮತ್ತು ನೆನಪಿನಲ್ಲಿ ಉಳಿಯುವ ಪದಗಳನ್ನು ನಾವು ಹುಡುಕಿ, ಬಳಕೆಗೆ ತರಬಹುದು. ಅಂಥ ಚಿಕ್ಕದೊಂದು ಪ್ರಯತ್ನಕ್ಕೆ ಪ್ರಜಾವಾಣಿ ಮುಂದಾಗಿದೆ. ಇನ್ನೊಂದು ತಿಂಗಳು ಪ್ರತಿದಿನ ಐದು ಬೇರೆಭಾಷೆಗಳ, ಆದರೆ ನಮ್ಮಲ್ಲಿ ಸಹಜವಾಗಿ ಬಳಕೆಯಲ್ಲಿರುವ ಪದಗಳನ್ನು ನಿಮ್ಮ ಮುಂದುಡುತ್ತೇವೆ. ಅದಕ್ಕೆ ಪರ್ಯಾಕ ಕನ್ನಡ ಪದವನ್ನು ನೀವೂ ಸೂಚಿಸಿ; ನೋಡೋಣ. ಹೆಚ್ಚು ಸೂಕ್ತವಾದುದನ್ನು ಆಯ್ದು ನಾಳೆ ಇಲ್ಲಿಯೇ ನಿಮ್ಮ ಮುಂದಿಡುತ್ತೇವೆ; ಅದೂ ನಿಮ್ಮ ಹೆಸರಿನೊಂದಿಗೇ. ಆಗಬಹುದಲ್ಲವೇ? 1. ಬಸ್ಸು (Bus) –ಜನಬಂಡಿ2. ರೈಲು (Rail) –ಹಳಿಬಂಡಿ3. ಸ್ಕೈವಾಕ್ (Skywalk) –ಮೇನಡೆ4. ಫ್ಲೈಓವರ್ (Flyover) –ಮೇಲ್ಸೇತು5. ಅಂಡರ್ಪಾಸ್ (Underpass) –ಕೆಳದಾರಿ