ರಾಮನಗರ: ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇಗುಲದ ನವಗ್ರಹ ನಾಶಪಡಿಸಿದ ಕಿಡಿಗೇಡಿ
ರಾಮನಗರ: ಕಿಡಿಗೇಡಿಯೊಬ್ಬ ನಗರದ ಕೆಂಪೇಗೌಡ ವೃತ್ತದ ಜಾಲಮಂಗಲ ರಸ್ತೆಯಲ್ಲಿರುವ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯದ ಆವರಣದಲ್ಲಿದ್ದ ನವಗ್ರಹಗಳ ವಿಗ್ರಹಗಳನ್ನು ನಾಶಪಡಿಸಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.ರಾತ್ರಿ 10.45ರ ಸುಮಾರಿಗೆ ದೇವಾಲಯದ ಆವರಣಕ್ಕೆ ಬಂದಿರುವ ವ್ಯಕ್ತಿ, ಕೆಲಹೊತ್ತು ಇದ್ದು ನಂತರ ವಿಗ್ರಹವನ್ನು ನಾಶಪಡಿಸಿದ್ದಾನೆ. ದೇವಾಲಯದ ಮುಂಭಾಗ ಮಿನಿ ಬಸ್

ರಾಮನಗರ: ಕಿಡಿಗೇಡಿಯೊಬ್ಬ ನಗರದ ಕೆಂಪೇಗೌಡ ವೃತ್ತದ ಜಾಲಮಂಗಲ ರಸ್ತೆಯಲ್ಲಿರುವ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯದ ಆವರಣದಲ್ಲಿದ್ದ ನವಗ್ರಹಗಳ ವಿಗ್ರಹಗಳನ್ನು ನಾಶಪಡಿಸಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.ರಾತ್ರಿ 10.45ರ ಸುಮಾರಿಗೆ ದೇವಾಲಯದ ಆವರಣಕ್ಕೆ ಬಂದಿರುವ ವ್ಯಕ್ತಿ, ಕೆಲಹೊತ್ತು ಇದ್ದು ನಂತರ ವಿಗ್ರಹವನ್ನು ನಾಶಪಡಿಸಿದ್ದಾನೆ. ದೇವಾಲಯದ ಮುಂಭಾಗ ಮಿನಿ ಬಸ್ ನಿಂತಿದ್ದರಿಂದ ವಿಗ್ರಹಗಳನ್ನು ನಾಶಪಡಿಸುವುದು ಯಾರ ಗಮನಕ್ಕೂ ಬಂದಿಲ್ಲ ಎಂದು ಐಜೂರು ಠಾಣೆ ಪೊಲೀಸರು ತಿಳಿಸಿದರು.ಬೆಳಿಗ್ಗೆ ದೇವಾಲಯದ ಆರ್ಚಕರು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಕೃತ್ಯದ ದೃಶ್ಯಗಳು ಪಕ್ಕದ ಬೇಕರಿಯೊಂದರಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಘಟನೆ ಕುರಿತು ದೇವಾಲಯದ ಸಮಿತಿಯವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
Read the complete story at Prajavani