ನೇಪಾಳ: ಸಿಕ್ಕಿಬಿದ್ದ 6 ಭಾರತೀಯ ಪ್ರವಾಸಿಗರ ರಕ್ಷಣಾ ಕಾರ್ಯಾಚರಣೆ ಚುರುಕು
ಕಠ್ಮಂಡು: ಇಲ್ಲಿನ ಶೇ–ಫೋಕ್ಸುಂಡೋ ರಾಷ್ಟ್ರೀಯ ಉದ್ಯಾನದಲ್ಲಿ ಭಾರಿ ಹಿಮಪಾತದಲ್ಲಿ ಸಿಲುಕಿದ್ದ ಭಾರತದ ಆರು ಪ್ರವಾಸಿಗರ ರಕ್ಷಣೆಗಗಿ ಭದ್ರತಾ ಸಿಬ್ಬಂದಿ ಶ್ರಮಿಸುತ್ತಿದ್ಧಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.ಶನಿವಾರ ಮಧ್ಯಾಹ್ನದಿಂದ ಭಾರಿ ಪ್ರಮಾಣದ ಹಿಮಪಾತ ಸಂಭವಿಸಿದ್ದು , ಸಿಲುಕಿರುವವರಲ್ಲಿ ಇಬ್ಬರು ಮಹಿಳೆಯರೂ ಸೇರಿದ್ದಾರೆ ಎಂದು ಅವರು ಹೇಳಿದ್ದಾರೆ.‘ಪ್
ಕಠ್ಮಂಡು: ಇಲ್ಲಿನ ಶೇ–ಫೋಕ್ಸುಂಡೋ ರಾಷ್ಟ್ರೀಯ ಉದ್ಯಾನದಲ್ಲಿ ಭಾರಿ ಹಿಮಪಾತದಲ್ಲಿ ಸಿಲುಕಿದ್ದ ಭಾರತದ ಆರು ಪ್ರವಾಸಿಗರ ರಕ್ಷಣೆಗಗಿ ಭದ್ರತಾ ಸಿಬ್ಬಂದಿ ಶ್ರಮಿಸುತ್ತಿದ್ಧಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.ಶನಿವಾರ ಮಧ್ಯಾಹ್ನದಿಂದ ಭಾರಿ ಪ್ರಮಾಣದ ಹಿಮಪಾತ ಸಂಭವಿಸಿದ್ದು , ಸಿಲುಕಿರುವವರಲ್ಲಿ ಇಬ್ಬರು ಮಹಿಳೆಯರೂ ಸೇರಿದ್ದಾರೆ ಎಂದು ಅವರು ಹೇಳಿದ್ದಾರೆ.‘ಪ್ರವಾಸಿಗರು ತೆರೆಳಿರುವ ಶೇ–ಫೋಕ್ಸುಂಡೋ ಗ್ರಾಮಾಡಳಿತದ 8ನೇ ವಾರ್ಡ್ಮ ಧೋ ಎಂಬ ಪ್ರದೇಶದ ಹೆಚ್ಚು ಹಿಮಪಾತಕ್ಕೆ ಈಡಾಗಿದೆ. ನಾವು ಪ್ರವಾಸಿಗರು ಇರುವ ಪ್ರದೇಶವನ್ನು ಗುರುತಿಸಿದ್ದೇವೆ. ಅವರನ್ನು ರಕ್ಷಿಸಲು ಸೇನಾ ಹೆಲಿಕಾಪ್ಟರ್ ಕಾರ್ಯಾಚರಣೆ ನಡೆಸುತ್ತಿದ್ದು, ಶೀಘ್ರದಲ್ಲೇ ರಕ್ಷಿಸಲಿದ್ದೇವೆ’ ಎಂದು ಡೋಲ್ಪಾದ ಜಿಲ್ಲಾಧಿಕಾರಿ ಜುನು ಢಕಾಲ್ ಅವರು ತಿಳಿಸಿದರು.ಶೇ–ಫೋಕ್ಸುಂಡೋ ನೇಪಾಳದ ಆಳ ಸರೋವರವಾಗಿದೆ.
Read the complete story at Prajavani