ಬಾಲನಟಿ ನಕ್ಷತ್ರ ಸುರಕ್ಷತೆ ಪ್ರಶ್ನಿಸಿ ʼಇರುಮುಡಿ’ ನಿರ್ಮಾಣ ಸಂಸ್ಥೆಗೆ ನೋಟಿಸ್!
ನಟ ರವಿತೇಜ ಅಭಿನಯದ ‘ಇರುಮುಡಿ’ ಸಿನಿಮಾದ ನಿರ್ಮಾಣ ಸಂಸ್ಥೆಗೆ ತೆಲಂಗಾಣ ಕಾರ್ಮಿಕ ಇಲಾಖೆಯು ನೋಟಿಸ್ ಜಾರಿ ಮಾಡಿದೆ. ಇರುಮುಡಿ ಸಿನಿಮಾದಲ್ಲಿ ಬಾಲನಟಿ ಬೇಬಿ ನಕ್ಷತ್ರ ಅವರು ನಟಿಸಿದ್ದಾರೆ. ಇವರ ಕೆಲಸದ ಸಮಯ, ಸಂಭಾವನೆ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ಬಾಲಕಾರ್ಮಿಕ ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲ

ನಟ ರವಿತೇಜ ಅಭಿನಯದ ‘ಇರುಮುಡಿ’ ಸಿನಿಮಾದ ನಿರ್ಮಾಣ ಸಂಸ್ಥೆಗೆ ತೆಲಂಗಾಣ ಕಾರ್ಮಿಕ ಇಲಾಖೆಯು ನೋಟಿಸ್ ಜಾರಿ ಮಾಡಿದೆ. ಇರುಮುಡಿ ಸಿನಿಮಾದಲ್ಲಿ ಬಾಲನಟಿ ಬೇಬಿ ನಕ್ಷತ್ರ ಅವರು ನಟಿಸಿದ್ದಾರೆ. ಇವರ ಕೆಲಸದ ಸಮಯ, ಸಂಭಾವನೆ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ಬಾಲಕಾರ್ಮಿಕ ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.ಸಂಚಲನ ಮೂಡಿಸಿದ ಸ್ಟ್ರಿಂಗ್ಆಪರೇಷನ್: ರಾಜಕಾರಣದ ದಿಕ್ಕು ಬದಲಿಸಿದ ‘ಮಾರುವೇಷ’#RaviTeja #Nakshatra : Give me a Nick Name..?#RaviTeja : ముదురు ముండ.. What kind of mentality makes someone use a word like “ముదురు ముండ” for a child? This is beyond unacceptable. pic.twitter.com/6cbVMUfrEk— Yeshwant rocks9 (@Yeshwantrocks9) August 16, 2026 ‘ಜೈ ಲೋಕ ಸತ್ತಾ’ ಸಾಮಾಜಿಕ ನ್ಯಾಯ ವೇದಿಕೆಯ ಅಧ್ಯಕ್ಷ ಸಿ. ಮಹೇಶ್ ಬಾಬು ಅವರು ಬಾಲನಟಿ ನಕ್ಷತ್ರ ಅವರ ಸಂಭಾವನೆ ಹಾಗೂ ಸುರಕ್ಷತೆಯನ್ನು ಪ್ರಶ್ನಿಸಿ ಕಾರ್ಮಿಕ ಇಲಾಖೆಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಕಾರ್ಮಿಕ ಇಲಾಖೆಯು, ನಿರ್ಮಾಣ ಸಂಸ್ಥೆ ‘ಮೈತ್ರಿ ಮೂವಿ ಮೇಕರ್ಸ್’ಗೆ ನೋಟಿಸ್ ಕಳುಹಿಸಿದೆ.ಚಿತ್ರೀಕರಣಕ್ಕೂ ಮುನ್ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಅನುಮತಿ, ಪೋಷಕರ ಒಪ್ಪಿಗೆ ಮತ್ತು ಬಾಲಕಿಗೆ ನೀಡಬೇಕಾದ ಸಂಭಾವನೆಯ ಶೇ 20ರಷ್ಟು ಹಣವನ್ನು ಮೊದಲೇ ಠೇವಣಿ ಇಡಲಾಗಿದೆಯೇ ಎಂಬುದರ ಕುರಿತು ದಾಖಲೆಗಳನ್ನು ಒದಗಿಸುವಂತೆ ಇಲಾಖೆ ಕೇಳಿದೆ.‘ಇರುಮುಡಿ’ ಅಬ್ಬರ: ನೆಟ್ಫ್ಲಿಕ್ಸ್ನಲ್ಲಿ ನಂ.1 ಸ್ಥಾನ ಪಡೆದ ರವಿತೇಜ ಸಿನಿಮಾ ನವೆಂಬರ್ 4 ರಂದು ಅಗತ್ಯ ದಾಖಲೆಗಳೊಂದಿಗೆ ವಿಚಾರಣಾ ಸಭೆಗೆ ಹಾಜರಾಗುವಂತೆ ನಿರ್ಮಾಪಕರಿಗೆ ಸೂಚಿಸಲಾಗಿದೆ.