'ವಿಮಾನದಲ್ಲಿ ಪ್ರಯಾಣಿಸಬೇಡಿ': ದರ ಏರಿಕೆ ಪ್ರಶ್ನಿಸಿದ್ದ ಅರ್ಜಿದಾರನಿಗೆ ಸುಪ್ರೀಂ
ನವದೆಹಲಿ: 'ಹಾಗಿದ್ದರೆ ವಿಮಾನದಲ್ಲಿ ಪ್ರಯಾಣಿಸಬೇಡಿ' ಎಂದು ಸುಪ್ರೀಂ ಕೋರ್ಟ್ ಸೋಮವಾರ ಅರ್ಜಿದಾರರೊಬ್ಬರಿಗೆ ಮೌಖಿಕವಾಗಿ ಹೇಳಿದೆ. ವಿಮಾನ ಪ್ರಯಾಣ ದರಗಳಲ್ಲಿ ಶೇ 700ರಷ್ಟು ಭಾರಿ ಏರಿಕೆಯಾಗಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಯ ತುರ್ತು ವಿಚಾರಣೆಗೆ ನ್ಯಾಯಾಲಯ ನಿರಾಕರಿಸಿದೆ.ನ್ಯಾಯಮೂರ್ತಿಗಳಾದ ವಿಕ್ರಮ್ನಾಥ್, ಸಂದೀಪ್ ಮೆಹ್ತಾ ಮತ್ತು ಅಪರೇಶ್ ಕುಮಾರ್ ಸಿ

ನವದೆಹಲಿ: 'ಹಾಗಿದ್ದರೆ ವಿಮಾನದಲ್ಲಿ ಪ್ರಯಾಣಿಸಬೇಡಿ' ಎಂದು ಸುಪ್ರೀಂ ಕೋರ್ಟ್ ಸೋಮವಾರ ಅರ್ಜಿದಾರರೊಬ್ಬರಿಗೆ ಮೌಖಿಕವಾಗಿ ಹೇಳಿದೆ. ವಿಮಾನ ಪ್ರಯಾಣ ದರಗಳಲ್ಲಿ ಶೇ 700ರಷ್ಟು ಭಾರಿ ಏರಿಕೆಯಾಗಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಯ ತುರ್ತು ವಿಚಾರಣೆಗೆ ನ್ಯಾಯಾಲಯ ನಿರಾಕರಿಸಿದೆ.ನ್ಯಾಯಮೂರ್ತಿಗಳಾದ ವಿಕ್ರಮ್ನಾಥ್, ಸಂದೀಪ್ ಮೆಹ್ತಾ ಮತ್ತು ಅಪರೇಶ್ ಕುಮಾರ್ ಸಿಂಗ್ ಅವರನ್ನೊಳಗೊಂಡ ಪೀಠದ ಮುಂದೆ ವಕೀಲರೊಬ್ಬರು ತುರ್ತು ವಿಚಾರಣೆಗಾಗಿ ಈ ವಿಷಯವನ್ನು ಪ್ರಸ್ತಾಪಿಸಿದರು.‘ವಿಮಾನ ಪ್ರಯಾಣ ದರವು ಶೇ 700ರಷ್ಟು ಹೆಚ್ಚಾಗಿದೆ’ ಎಂದು ವಕೀಲರು ಪೀಠದ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠವು, ‘ಹಾಗಿದ್ದರೆ ವಿಮಾನದಲ್ಲಿ ಪ್ರಯಾಣಿಸಬೇಡಿ’ ಎಂದು ಮೌಖಿಕವಾಗಿ ಹೇಳಿದೆ.ಆಗ ವಕೀಲರು, ‘ವಿಮಾನ ಪ್ರಯಾಣವು ಅಗತ್ಯ ಸೇವೆಯಾಗಿದೆ. ಪ್ರಯಾಣ ದರ ಏರಿಕೆಯು ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗಿದೆ’ ಎಂದು ವಾದಿಸಿದರು.ಭಾರತದ ನಾಗರಿಕ ವಿಮಾನಯಾನ ವಲಯದಲ್ಲಿ ಪಾರದರ್ಶಕತೆ ಮತ್ತು ಪ್ರಯಾಣಿಕರ ರಕ್ಷಣೆಯನ್ನು ಖಚಿತಪಡಿಸುವ ಸ್ವತಂತ್ರ ನಿಯಂತ್ರಕ ಪ್ರಾಧಿಕಾರದ ರಚನೆ ಹಾಗೂ ವಿಮಾನ ದರಗಳ ‘ಅನಿರೀಕ್ಷಿತ ಏರಿಳಿತ’ಗಳನ್ನು ನಿಯಂತ್ರಿಸಲು ಮಾರ್ಗಸೂಚಿಗಳನ್ನು ಕೋರಿ ಸಾಮಾಜಿಕ ಕಾರ್ಯಕರ್ತ ಎಸ್ ಲಕ್ಷ್ಮೀನಾರಾಯಣನ್ ಅವರು ಸಲ್ಲಿಸಿರುವ ಪ್ರತ್ಯೇಕ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಈಗಾಗಲೇ ನಡೆಸುತ್ತಿದೆ.ಎಣಿಕೆ ವೇಳೆ ರಾಮ ಮಂದಿರ ಹುಂಡಿ ಹಣ ಕಳವು: ಸುಪ್ರೀಂ ಕೋರ್ಟ್ಗೆ ಯುಪಿ ಸರ್ಕಾರ ವೃದ್ಧಾಪ್ಯ ಕಾರಣಕ್ಕೆ ಜೀವಾವಧಿ ಶಿಕ್ಷೆ ಕಡಿತಗೊಳಿಸಲು ‘ಸುಪ್ರೀಂ’ ನಕಾರ