ಬಾಂಬ್ ಬೆದರಿಕೆ: ಬುಲೆಟ್ ಪ್ರೂಫ್ ಗ್ಲಾಸ್ನೊಳಗೆ ನಿಂತು ಅಭಿಮಾನಿಗಳ ಕಂಡ ಅಮಿತಾಭ್
ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ನಿವಾಸ ಸೇರಿದಂತೆ ಮುಂಬೈನ ವಿವಿಧ ಸ್ಥಳಗಳಲ್ಲಿ ಬಾಂಬ್ ಸ್ಪೋಟಿಸಲಾಗುವಂತೆ, ಮೇಯರ್ ರಿತು ತಾವ್ಡೆ ಅವರ ಕಚೇರಿಗೆ ಬೆದರಿಕೆಯ ಇ–ಮೇಲ್ ಕಳುಹಿಸಲಾಗಿತ್ತು.ಇದರ ಬೆನ್ನಲ್ಲೇ, ನಟ ಅಮಿತಾಭ್ ಬಚ್ಚನ್ ಅವರು ನವೆಂಬರ್ 1ರಂದು ಭದ್ರತಾ ದೃಷ್ಟಿಯಿಂದ ಗುಂಡು ನಿರೋಧಕ ಗಾಜಿನೊಳಗೆ ನಿಂತು, ತಮ್ಮ ‘ಜಲ್ಸಾ’ ನಿವಾಸದ ಎದುರು ಅಭಿಮಾನಿಗಳನ್ನು ಭೇಟಿ ಮ

ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ನಿವಾಸ ಸೇರಿದಂತೆ ಮುಂಬೈನ ವಿವಿಧ ಸ್ಥಳಗಳಲ್ಲಿ ಬಾಂಬ್ ಸ್ಪೋಟಿಸಲಾಗುವಂತೆ, ಮೇಯರ್ ರಿತು ತಾವ್ಡೆ ಅವರ ಕಚೇರಿಗೆ ಬೆದರಿಕೆಯ ಇ–ಮೇಲ್ ಕಳುಹಿಸಲಾಗಿತ್ತು.ಇದರ ಬೆನ್ನಲ್ಲೇ, ನಟ ಅಮಿತಾಭ್ ಬಚ್ಚನ್ ಅವರು ನವೆಂಬರ್ 1ರಂದು ಭದ್ರತಾ ದೃಷ್ಟಿಯಿಂದ ಗುಂಡು ನಿರೋಧಕ ಗಾಜಿನೊಳಗೆ ನಿಂತು, ತಮ್ಮ ‘ಜಲ್ಸಾ’ ನಿವಾಸದ ಎದುರು ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಅಮಿತಾಭ್ ಬಚ್ಚನ್ ಅವರು ವಾರಕ್ಕೊಮ್ಮೆಯಾದರೂ ತಮ್ಮ ಮನೆಯಿಂದ ಹೊರಬಂದು ಅಭಿಮಾನಿಗಳನ್ನು ಭೇಟಿ ಮಾಡುತ್ತಾರೆ. ಆದರೆ ಈ ಬಾರಿ ಬೆದರಿಕೆ ಇದ್ದರೂ, ಬಾಲಿವುಡ್ ಬಿಗ್ ಬಿ ಅಭಿಮಾನಿಗಳನ್ನು ನೋಡಲು ಭದ್ರತೆಯಲ್ಲಿ ಆಗಮಿಸಿದ್ದು ವಿಶೇಷವಾಗಿತ್ತು.Mumbai, Maharashtra: Bollywood actor Amitabh Bachchan is seen greeting fans from behind a protective bulletproof glass screen. pic.twitter.com/4gyZ8oZqVs— IANS (@ians_india) November 1, 2026 ಬಾಂಬ್ ಬೆದರಿಕೆ ಸಂದೇಶಅಕ್ಟೋಬರ್ 23ರಂದು ಮೇಯರ್ ರಿತು ತಾವ್ಡೆ ಅವರ ಕಚೇರಿಗೆ ಬಾಂಬ್ ಬೆದರಿಕೆಯ ಇ–ಮೇಲ್ ಬಂದಿತ್ತು. ಇ–ಮೇಲ್ನಲ್ಲಿ ಅಕ್ಟೋಬರ್ 31 ರಿಂದ ನವೆಂಬರ್ 27ರ ನಡುವೆ ವಿವಿಧ ಸ್ಥಳಗಳಲ್ಲಿ ಬಾಂಬ್ ಸ್ಫೋಟಿಸಲಾಗುವುದು ಎಂದು ಬೆದರಿಕೆ ಹಾಕಲಾಗಿದೆ. ಹಾಗಾಗಿ ಇ–ಮೇಲ್ನಲ್ಲಿ ಉಲ್ಲೇಖಿಸಲಾದ ಎಲ್ಲಾ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಇದರಲ್ಲಿ ಅಮಿತಾಭ್ ಅವರ ನಿವಾಸವೂ ಸೇರಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.