ಮಸ್ಕ್ ಹಾರುವ ಕಾರಿಗಿಂತ 5,000 ವರ್ಷ ಮುನ್ನ ಪುಷ್ಪಕ ವಿಮಾನವಿತ್ತು: ರಣಬೀರ್ ಕಪೂರ್
ರಣಬೀರ್ ಕಪೂರ್ ಹಾಗೂ ಯಶ್ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ನವೆಂಬರ್ 5ರಂದು ವಿಶ್ವದಾದ್ಯಂತ ತೆರೆಕಾಣಲಿದೆ. ಇದಕ್ಕೂ ಮುನ್ನ ಚಿತ್ರತಂಡದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ.ರಾಮಾಯಣ ಪ್ರೀಮಿಯರ್ ಶೋ ವೀಕ್ಷಿಸಿ ನಿತೇಶ್ ತಿವಾರಿ ಪತ್ನಿ ಅಶ್ವಿನಿ ಹೇಳಿದ್ದಿಷ್ಟುಇತ್ತೀಚೆಗೆ ಟಿವಿ ನಿರೂಪಕಿ ಸುಮಾ ಅವರ ‘ಸ್ಟಾರ್ ಟಾಕ್ಸ್

ರಣಬೀರ್ ಕಪೂರ್ ಹಾಗೂ ಯಶ್ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ನವೆಂಬರ್ 5ರಂದು ವಿಶ್ವದಾದ್ಯಂತ ತೆರೆಕಾಣಲಿದೆ. ಇದಕ್ಕೂ ಮುನ್ನ ಚಿತ್ರತಂಡದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ.ರಾಮಾಯಣ ಪ್ರೀಮಿಯರ್ ಶೋ ವೀಕ್ಷಿಸಿ ನಿತೇಶ್ ತಿವಾರಿ ಪತ್ನಿ ಅಶ್ವಿನಿ ಹೇಳಿದ್ದಿಷ್ಟುಇತ್ತೀಚೆಗೆ ಟಿವಿ ನಿರೂಪಕಿ ಸುಮಾ ಅವರ ‘ಸ್ಟಾರ್ ಟಾಕ್ಸ್’ ಎಂಬ ವಿಶೇಷ ಸಂದರ್ಶನ ಕಾರ್ಯಕ್ರಮದಲ್ಲಿ ನಟ ರಣಬೀರ್ ಕಪೂರ್, ಯಶ್, ರವಿ ದುಬೆ, ರಕುಲ್ ಪ್ರೀತ್ ಸಿಂಗ್ ಹಾಗೂ ನಿರ್ದೇಶಕ ನಿತೇಶ್ ತಿವಾರಿ ಭಾಗವಹಿಸಿದ್ದರು. ಈ ವೇಳೆ ರಾಮಾಯಣದಲ್ಲಿ ಬಳಸಲಾದ ಪೌರಾಣಿಕ ಆಯುಧಗಳು ಹಾಗೂ ತಂತ್ರಜ್ಞಾನದ ಬಗ್ಗೆ ಚರ್ಚೆ ನಡೆಸಲಾಗಿತ್ತು.‘ರಾಮಾಯಣ‘ ಪ್ರೀಮಿಯರ್ ಶೋ: ದಶಮುಖ ರಾವಣನ ಬ್ರೂಚ್ ತೊಟ್ಟು ಗಮನಸೆಳೆದ ಯಶ್! ಇದೇ ವೇಳೆ ಮಾತನಾಡಿದ ರಣಬೀರ್ ಕಪೂರ್, ‘ಉದ್ಯಮಿ ಇಲಾನ್ ಮಸ್ಕ್ ಅವರು ಇತ್ತೀಚೆಗೆ ಹಾರುವ ‘ಟೆಸ್ಲಾ ರೋಡ್ಸ್ಟರ್’ ಕಾರನ್ನು ಪರಿಚಯಿಸಿದ್ದಾರೆ. ಆದರೆ ಭಾರತವು 5,000 ವರ್ಷಗಳ ಹಿಂದೆಯೇ ಇಂತಹ ಹಾರುವ ವಿಮಾನವನ್ನು (ಪುಷ್ಪಕ ವಿಮಾನ) ಹೊಂದಿತ್ತು ಎಂದು ಭಾವಿಸುತ್ತೇನೆ’ ಎಂದು ಹೇಳಿದ್ದಾರೆ.Ranbir Kapoor On Elon Musk's Tesla Roadster I must also add that Elon Musk recently invented a flying car , i think India did it 5000 two days back , india did 5000 back #Ramayana pic.twitter.com/s4kA8JwbNH— Filmy_Duniya (@ayaanpanda1) October 31, 2026 ಸದ್ಯ ರಣಬೀರ್ ಕಪೂರ್ ಅವರ ಹೇಳಿಕೆಯ ವಿಡಿಯೊ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಮಾತ್ರವಲ್ಲದೆ, ಅಭಿಮಾನಿಗಳಿಂದ ಮೆಚ್ಚುಗೆಗೂ ಪಾತ್ರವಾಗಿದೆ.ಇದೇ ಸಂದರ್ಭದಲ್ಲಿ ಸಿನಿಮಾದಲ್ಲಿನ ಪುಷ್ಪಕ ವಿಮಾನದ ವಿನ್ಯಾಸದ ಕುರಿತು ಮಾತನಾಡಿದ ನಿರ್ದೇಶಕ ನಿತೀಶ್ ತಿವಾರಿ, ‘ಈ ಪೌರಾಣಿಕ ಪುಷ್ಪಕ ವಿಮಾನವನ್ನು ತೆರೆಯ ಮೇಲೆ ಮರುಸೃಷ್ಟಿಸಲು ಸುಮಾರು 2 ವರ್ಷ ಬೇಕಾಯಿತು. ರಾವಣ ಹಾಗೂ ಜಟಾಯು ಪಕ್ಷಿಯ ನಡುವೆ ನಡೆಯುವ ಭೀಕರ ಕಾಳಗದ ದೃಶ್ಯಗಳಿಗೆ ಹೊಂದುವಂತೆ ಪುಷ್ಪಕ ವಿಮಾನದ ವಿನ್ಯಾಸವನ್ನು ಹಲವು ಬಾರಿ ಬದಲಾಯಿಸಿ, ಅಂತಿಮ ರೂಪ ನೀಡಲಾಗಿತ್ತು. ಈ ಪುಷ್ಪಕ ವಿಮಾನವನ್ನು ನಿರ್ಮಿಸುವುದು ಚಿತ್ರತಂಡಕ್ಕೆ ಅತ್ಯಂತ ಸವಾಲಿನ ಕೆಲಸಗಳಲ್ಲಿ ಒಂದಾಗಿತ್ತು’ ಎಂದು ಹೇಳಿದ್ದಾರೆ.