‘ಸ್ಟಿಂಗ್’ ವಿಚಾರದಲ್ಲಿ ಎಚ್ಡಿಕೆ ಗುರಿ ಮಾಡುತ್ತಿರುವುದು ಉದ್ದೇಶಪೂರ್ವಕ: ಸೋಮಣ್ಣ
ಹಾಸನ: ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಉದ್ದೇಶಪೂರ್ವಕವಾಗಿ ಗುರಿ ಮಾಡಲಾಗುತ್ತಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೊಬ್ಬರ ಜನಪ್ರಿಯತೆಯನ್ನು ಕಸಿದುಕೊಳ್ಳಲು ಪೊಲೀಸರ ಬಳಕೆ ಮಾಡುವುದು ಶೋಭೆ ತರುವಂಥದ್ದಲ್ಲ. ಮತ್ತೊಬ್ಬರ ಬಾಯಲ್

ಹಾಸನ: ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಉದ್ದೇಶಪೂರ್ವಕವಾಗಿ ಗುರಿ ಮಾಡಲಾಗುತ್ತಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೊಬ್ಬರ ಜನಪ್ರಿಯತೆಯನ್ನು ಕಸಿದುಕೊಳ್ಳಲು ಪೊಲೀಸರ ಬಳಕೆ ಮಾಡುವುದು ಶೋಭೆ ತರುವಂಥದ್ದಲ್ಲ. ಮತ್ತೊಬ್ಬರ ಬಾಯಲ್ಲಿ ಸುಳ್ಳು ಹೇಳಿಸಿ ಮಜಾ ತೆಗೆದುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. ರಾಜ್ಯ ಸರ್ಕಾರಕ್ಕೆ ಲಂಗುಲಗಾಮು ಇಲ್ಲದಂತಾಗಿದೆ. ಜನರೇ ಸರ್ಕಾರವನ್ನು ನಿಯಂತ್ರಿಸಬೇಕಾದ ಪರಿಸ್ಥಿತಿ ಬಂದಿದೆ. ಚುನಾವಣೆಯಲ್ಲಿ ಸೂಕ್ತ ತೀರ್ಮಾನ ತೆಗೆದುಕೊಂಡು ಸರ್ಕಾರವನ್ನು ಸರಿಪಡಿಸಬೇಕಾಗಿದೆ ಎಂದರು.‘ಸ್ಟಿಂಗ್’ಗೆ ಎಚ್ಡಿಕೆ ಮನೆ ಬಳಕೆ, ಆರೋಪಿಗಳಿಂದ ಮಾಹಿತಿ: ಸೀಮಾಂತ್ ಕುಮಾರ್ನನ್ನನ್ನು ಮುಟ್ಟಲು ಸಾಧ್ಯವಿಲ್ಲ, ಪೂರ್ತಿ ಪಿಕ್ಚರ್ ತೋರಿಸುತ್ತೇನೆ: ಎಚ್ಡಿಕೆ
Read the complete story at Prajavani