ಬೆಳಗಾವಿ | ಜನಪ್ರವಾಹವಾಗಿ ಹರಿದ ನಾಡಪ್ರೇಮ: ನಿರಂತರ 24 ತಾಸು ಮೆರವಣಿಗೆ
ಬೆಳಗಾವಿ: ನಗರದಲ್ಲಿ ಈ ಬಾರಿಯೂ ಅದ್ದೂರಿ ರಾಜ್ಯೋತ್ಸವ ನಡೆಯಿತು. ರಾಜ್ಯ ಹಾಗೂ ಹೊರರಾಜ್ಯಗಳ 5 ಲಕ್ಷಕ್ಕೂ ಹೆಚ್ಚು ಜನ ನಾಡದೇವಿಯ ವೈಭವಕ್ಕೆ ಸಾಕ್ಷಿಯಾದರು. ನಿರಂತರ 24 ತಾಸು ನಡೆದ ಮೆರವಣಿಗೆಯಲ್ಲಿ ನಾಡು– ನುಡಿಯ ಪ್ರೇಮ ಜನಪ್ರವಾಹವಾಗಿ ಹರಿಯಿತು. kannada rajyoಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಶನಿವಾರ ರಾತ್ರಿ 12ಕ್ಕೆ ನಾಡದೇವಿ ಭುವನೇಶ್ವರಿಯ ವೈಭವಕ್ಕ

ಬೆಳಗಾವಿ: ನಗರದಲ್ಲಿ ಈ ಬಾರಿಯೂ ಅದ್ದೂರಿ ರಾಜ್ಯೋತ್ಸವ ನಡೆಯಿತು. ರಾಜ್ಯ ಹಾಗೂ ಹೊರರಾಜ್ಯಗಳ 5 ಲಕ್ಷಕ್ಕೂ ಹೆಚ್ಚು ಜನ ನಾಡದೇವಿಯ ವೈಭವಕ್ಕೆ ಸಾಕ್ಷಿಯಾದರು. ನಿರಂತರ 24 ತಾಸು ನಡೆದ ಮೆರವಣಿಗೆಯಲ್ಲಿ ನಾಡು– ನುಡಿಯ ಪ್ರೇಮ ಜನಪ್ರವಾಹವಾಗಿ ಹರಿಯಿತು. kannada rajyoಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಶನಿವಾರ ರಾತ್ರಿ 12ಕ್ಕೆ ನಾಡದೇವಿ ಭುವನೇಶ್ವರಿಯ ವೈಭವಕ್ಕೆ ಚಾಲನೆ ದೊರೆಯಿತು. ಝಗಮಗಿಸುವ ವಿದ್ಯುದ್ದೀಪಾಲಂಕಾರ, ಬಾಣ– ಬಿರುಸುಗಳ ಅಬ್ಬರ ರಂಜಿಸಿತು. ಮೇಯರ್ ಪ್ರೀತಿ ಕಾಮಕರ ಆದಿಯಾಗಿ ಪಾಲಿಕೆಯ ಸದಸ್ಯರು, ಕನ್ನಡ ಹೋರಾಟಗಾರರು ಕನ್ನಡ ಹಾಡುಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.ಭಾನುವಾರ ಬೆಳಿಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಧ್ವಜಾರೋಹಣ ಮಾಡುತ್ತಿದ್ದಂತೆಯೇ ಮೆರವಣಿಗೆ ಆರಂಭವಾಯಿತು. ಕಂಡಷ್ಟೂ ದೂರ ಕನ್ನಡ ಬಾವುಟಗಳ ಹಾರಾಟವೇ ಗೋಚರಿಸಿತು. ಕೂಲಿ ಕಾರ್ಮಿಕರಿಂದ ಹಿಡಿದು ಜನಪ್ರತಿನಿಧಿಗಳವರೆಗೆ ಎಲ್ಲರೂ ಎಲ್ಲರೂ ಕನ್ನಡ ಬಾವುಟ ಹೋಲುವ ವೇಷವನ್ನೇ ಧರಿಸಿ ಕುಣಿದು ಕುಪ್ಪಳಿಸಿದರು. ನಗರದ ರಸ್ತೆಗಳು, ವೃತ್ತಗಳು, ಚೌಕಗಳು, ಮನೆಯ ಮಹಡಿಗಳು ಕಿಕ್ಕಿರಿದು ತುಂಬಿದವು.ನಾಡದೇವಿ ಭುವನೇಶ್ವರಿ, ಇಮ್ಮಡಿ ಪುಲಿಕೇಶಿ, ಶ್ರೀಕೃಷ್ಣ ದೇವರಾಯ, ಮಯೂರವರ್ಮ, ರಾಣಿ ಚನ್ನಮ್ಮ, ರಾಣಿ ಅಬ್ಬಕ್ಕ ದೇವಿ, ಹಳಗನ್ನಡ ಕವಿಗಳು, ಜ್ಞಾನಪೀಠ ಪುರಸ್ಕೃತರ ಸ್ತಬ್ದಚಿತ್ರಗಳು– ಭಾವಚಿತ್ರಗಳು, ಜಂಬೂ ಸವಾರಿ ಹೋಲುವ ಆನೆಗಳ ಪ್ರತಿಕೃತಿ, ಕದಂಬರ ದೇವಸ್ಥಾನ, ಸುವರ್ಣ ವಿಧಾನಸೌಧ ಹೀಗೆ; ಬರೋಬ್ಬರಿ 150 ರೂಪಕಗಳು ಗಮನ ಸೆಳೆದವು.ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಬೆಳಗಾವಿಯಲ್ಲಿ ಭಾನುವಾರ ನಡೆದ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನ ಕುಣಿದ ಕುಪ್ಪಳಿಸಿದರು ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಬೆಳಗಾವಿಯಲ್ಲಿ ಭಾನುವಾರ ಮೆರವಣಿಗೆಯಲ್ಲಿ ದಸರಾ ಜಂಬೂ ಸಾವರಿ ಹೋಲುವ ಆನೆಗಳ ಸ್ತಬ್ದಚಿತ್ರ ಗಮನ ಸೆಳೆಯಿತು ಪ್ರಜಾವಾಣಿ ಚಿತ್ರ: ಸಂತೋಷ ಈ. ಚಿನಗುಡಿಬೆಳಗಾವಿಯಲ್ಲಿ ಭಾನುವಾರ ಕರ್ನಾಟಕ ರಾಜ್ಯೋತ್ಸವಕ್ಕೆ ಪರ್ಯಾಯವಾಗಿ ಎಂಇಎಸ್ ಕಾರ್ಯಕರ್ತರು ‘ಕರಾಳ ದಿನ’ ಆಚರಿಸಿ ಮೆರವಣಿಗೆ ಮಾಡಿದರು ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿಕಾನೂನು ಧಿಕ್ಕಿರಿಸಿ ‘ಕರಾಳ ದಿನಾಚರಣೆಜಿಲ್ಲಾಡಳಿತ ಮತ್ತು ನಗರ ಪೊಲೀಸ್ ಕಮಿಷನರೇಟ್ನಿಂದ ಅನುಮತಿ ಸಿಗದಿದ್ದರೂ ಕರ್ನಾಟಕ ರಾಜ್ಯೋತ್ಸವಕ್ಕೆ ಪರ್ಯಾಯವಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿಯವರು (ಎಂಇಎಸ್) ನಗರದಲ್ಲಿ ‘ಕರಾಳ ದಿನ’ ಆಚರಿಸಿ ರ್ಯಾಲಿ ನಡೆಸಿದರು. ‘ಬೆಳಗಾವಿ ಖಾನಾಪುರ ಬೀದರ್ ಭಾಲ್ಕಿ ಕಾರವಾರ ನಿಪ್ಪಾಣಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಿ’ ಎಂದು ಘೋಷಣೆ ಕೂಗಿದರು. ಇದರ ಮಧ್ಯೆ ರ್ಯಾಲಿಗೆ ನುಗ್ಗಲು ಯತ್ನಿಸಿದ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಕರಾಳ ದಿನಾಚರಣೆಯಲ್ಲಿ ಭಾಗವಹಿಸಲು ಮಹಾರಾಷ್ಟ್ರದ ಕೊಲ್ಹಾಪುರದಿಂದ ಬರುತ್ತಿದ್ದ ಶಿವಸೇನಾ ಕಾರ್ಯಕರ್ತರನ್ನು ನಿಪ್ಪಾಣಿ ತಾಲ್ಲೂಕಿನ ಕೊಗನೊಳ್ಳಿ ಚೆಕ್ಪೋಸ್ಟ್ ಬಳಿ ಕರ್ನಾಟಕ– ಮಹಾರಾಷ್ಟ್ರ ಗಡಿಯಲ್ಲಿ ರಾಜ್ಯದ ಪೊಲೀಸರು ತಡೆದರು.