ಶಿಡ್ಲಘಟ್ಟ| ಪೌತಿ ಖಾತೆಗೆ ಲಂಚ; ಎಸ್ಡಿಎ, ನಗರಸಭೆ ಮಾಜಿ ಸದಸ್ಯ ಬಂಧನ
ಶಿಡ್ಲಘಟ್ಟ: ಆಸ್ತಿಯ ಪೌತಿ ಖಾತೆ ಮಾಡಿಕೊಡಲು ₹ 50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಇಲ್ಲಿನ ನಗರಸಭೆ ದ್ವಿತೀಯ ದರ್ಜೆ ಸಹಾಯಕ ನಾಗರಾಜ್ ಮತ್ತು ನಗರಸಭೆ ಮಾಜಿ ಸದಸ್ಯ ಮೌಲಾನನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪೌತಿ ಖಾತೆಗೆ ಮಾಡಿಕೊಡಲು ₹ 50 ಸಾವಿರ ನೀಡಬೇಕು ಎಂದು ಮಹಿಳೆಯೊಬ್ಬರಿಗೆ ಬೇಡಿಕೆ ಇಟ್ಟಿದ್ದರು. ಈ ಪೈಕಿ ಮೊದಲ ಕಂತಿನ ₹ 25 ಸಾವಿ

ಶಿಡ್ಲಘಟ್ಟ: ಆಸ್ತಿಯ ಪೌತಿ ಖಾತೆ ಮಾಡಿಕೊಡಲು ₹ 50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಇಲ್ಲಿನ ನಗರಸಭೆ ದ್ವಿತೀಯ ದರ್ಜೆ ಸಹಾಯಕ ನಾಗರಾಜ್ ಮತ್ತು ನಗರಸಭೆ ಮಾಜಿ ಸದಸ್ಯ ಮೌಲಾನನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪೌತಿ ಖಾತೆಗೆ ಮಾಡಿಕೊಡಲು ₹ 50 ಸಾವಿರ ನೀಡಬೇಕು ಎಂದು ಮಹಿಳೆಯೊಬ್ಬರಿಗೆ ಬೇಡಿಕೆ ಇಟ್ಟಿದ್ದರು. ಈ ಪೈಕಿ ಮೊದಲ ಕಂತಿನ ₹ 25 ಸಾವಿರವನ್ನು ನಗರಸಭೆಯಲ್ಲಿ ಪಡೆಯುತ್ತಿದ್ದ ವೇಳೆ ಚಿಕ್ಕಬಳ್ಳಾಪುರ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ನಾಗರಿಕರ ಕೆಲಸಗಳನ್ನು ಮಾಡಿಕೊಡಲು ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹಣಕ್ಕೆ ಬೇಡಿಕೆ ಇಡುವರು ಎನ್ನುವ ಆರೋಪ ಶಿಡ್ಲಘಟ್ಟದಲ್ಲಿ ವ್ಯಾಪಕವಾಗಿದೆ.
Read the complete story at Prajavani