ಮೇಕೆದಾಟು ಯೋಜನೆಗೆ ಕಾನೂನು ತೊಡಕಿಲ್ಲ: ಅರಣ್ಯ ಸಚಿವಾಲಯಕ್ಕೆ ರಾಜ್ಯ
ನವದೆಹಲಿ: ₹16,500 ಕೋಟಿ ಮೊತ್ತದ ಮೇಕೆದಾಟು ಸಮತೋಲನ ಜಲಾಶಯ ನಿರ್ಮಾಣ ಯೋಜನೆಗೆ ಯಾವುದೇ ಕಾನೂನು ತೊಡಕು ಇಲ್ಲ ಎಂದು ಕರ್ನಾಟಕ ಸರ್ಕಾರ ಸ್ಪಷ್ಟಪಡಿಸಿದೆ. ಈ ಸಂಬಂಧ ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವಾಲಯಕ್ಕೆ ವಿವರಣೆ ನೀಡಿದೆ. ಕಾವೇರಿ ವನ್ಯಜೀವಿಧಾಮದ 0.035 ಗುಂಟೆ ಜಾಗದಲ್ಲಿ ಮೇಕೆದಾಟು ಯೋಜನೆಯ ಸಮೀಕ್ಷೆಗೆ ಅನುಮತಿ ನೀಡುವಂತೆ ಕಾವೇರಿ ನೀರಾವರಿ ನಿಗಮವು ಈ ವರ

ನವದೆಹಲಿ: ₹16,500 ಕೋಟಿ ಮೊತ್ತದ ಮೇಕೆದಾಟು ಸಮತೋಲನ ಜಲಾಶಯ ನಿರ್ಮಾಣ ಯೋಜನೆಗೆ ಯಾವುದೇ ಕಾನೂನು ತೊಡಕು ಇಲ್ಲ ಎಂದು ಕರ್ನಾಟಕ ಸರ್ಕಾರ ಸ್ಪಷ್ಟಪಡಿಸಿದೆ. ಈ ಸಂಬಂಧ ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವಾಲಯಕ್ಕೆ ವಿವರಣೆ ನೀಡಿದೆ. ಕಾವೇರಿ ವನ್ಯಜೀವಿಧಾಮದ 0.035 ಗುಂಟೆ ಜಾಗದಲ್ಲಿ ಮೇಕೆದಾಟು ಯೋಜನೆಯ ಸಮೀಕ್ಷೆಗೆ ಅನುಮತಿ ನೀಡುವಂತೆ ಕಾವೇರಿ ನೀರಾವರಿ ನಿಗಮವು ಈ ವರ್ಷದ ಫೆಬ್ರುವರಿಯಲ್ಲಿ ಪ್ರಸ್ತಾವ ಸಲ್ಲಿಸಿತ್ತು. ಇಪ್ಪತ್ತು ಬೋರ್ಹೋಲ್ಗಳನ್ನು ಕೊರೆಯುವ ಪ್ರಸ್ತಾವವನ್ನು ರಾಜ್ಯ ವನ್ಯಜೀವಿ ಮಂಡಳಿಯು ಪರಿಶೀಲಿಸಿ ಕೇಂದ್ರ ಅರಣ್ಯ ಸಚಿವಾಲಯಕ್ಕೆ ಜೂನ್ನಲ್ಲಿ ಶಿಫಾರಸು ಮಾಡಿತ್ತು. ಈ ನಡುವೆ, ಸಚಿವಾಲಯವು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದಿಂದ (ಎನ್ಟಿಸಿಎ) ಅಭಿಪ್ರಾಯ ಕೋರಿತ್ತು. ಸಮೀಕ್ಷೆಗೆ ಅನುಮತಿ ನೀಡಬಹುದು ಎಂದು ಎನ್ಟಿಸಿಎ ಅಭಿಪ್ರಾಯ ನೀಡಿತ್ತು.ಯೋಜನೆಯನ್ನು ವಿರೋಧಿಸಿ ನ್ಯಾಯಾಲಯದಲ್ಲಿ ಪ್ರಕರಣಗಳು ಇವೆಯೇ ಎಂದು ಸ್ಪಷ್ಟನೆ ನೀಡುವಂತೆ ಅರಣ್ಯ ಸಚಿವಾಲಯವು ರಾಜ್ಯ ಸರ್ಕಾರಕ್ಕೆ ಅಕ್ಟೋಬರ್ ಎಂಟರಂದು ಸೂಚಿಸಿತ್ತು. ಈ ಸಂಬಂಧ ಶುಕ್ರವಾರ ವಿವರಣೆ ನೀಡಿರುವ ರಾಜ್ಯವು, ‘ಯೋಜನೆಯ ವಿರುದ್ಧ ಯಾವುದೇ ಪ್ರಕರಣ ಇಲ್ಲ. ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ’ ಎಂದು ತಿಳಿಸಿದೆ.ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯ ಮುಂದಿನ ಸಭೆಯಲ್ಲಿ ಈ ಪ್ರಸ್ತಾವವು ಚರ್ಚೆಗೆ ಬರುವ ನಿರೀಕ್ಷೆ ಇದೆ. ‘ಸಮೀಕ್ಷೆಗೆ ಸ್ಥಾಯಿ ಸಮಿತಿ ಮುಂದಿನ ಸಭೆಯಲ್ಲಿ ಒಪ್ಪಿಗೆ ನೀಡಲಿದೆ. ಈ ಬಗ್ಗೆ ಕೇಂದ್ರ ಅರಣ್ಯ ಸಚಿವ ಭೂಪೇಂದರ್ ಯಾದವ್ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಭರವಸೆ ನೀಡಿದ್ದಾರೆ’ ಎಂದು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು.