ಏರ್ ಟ್ರಾಫಿಕ್ ಕಂಟ್ರೋಲ್ ಜೊತೆ ಪೈಲಟ್ ಮಾತು: ಕೆಲವೇ ಕ್ಷಣದಲ್ಲಿ ವಿಮಾನ ಪತನ
ವಾಷಿಂಗ್ಟನ್: ಅಮೆರಿಕದ ಟೆಕ್ಸಾಸ್ನಿಂದ ಬಹಾಮಾಸ್ಗೆ ತೆರಳುತ್ತಿದ್ದ ‘ಲಿಯರ್ಜೆಟ್ 60’ ವಿಮಾನವು ನಿಮಿಷಕ್ಕೆ 20,000 ಅಡಿ ವೇಗದಲ್ಲಿ ಕೆಳಗೆ ಬಿದ್ದು ಪತನಗೊಂಡಿದೆ. ಈ ಬಗ್ಗೆ ಪೈಲಟ್ ಕೊನೆ ಕ್ಷಣದಲ್ಲಿ, ಏರ್ ಟ್ರಾಫಿಕ್ ಕಂಟ್ರೋಲ್ ಜೊತೆ ನಡೆಸಿದ ಸಂಭಾಷಣೆಯಿಂದ ತಿಳಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ವಿಮಾನವು ಸುಮಾರು 37,000 ಅಡಿ ಎತ್ತರದಲ್ಲಿ ಹಾರಾಟ ನ

ವಾಷಿಂಗ್ಟನ್: ಅಮೆರಿಕದ ಟೆಕ್ಸಾಸ್ನಿಂದ ಬಹಾಮಾಸ್ಗೆ ತೆರಳುತ್ತಿದ್ದ ‘ಲಿಯರ್ಜೆಟ್ 60’ ವಿಮಾನವು ನಿಮಿಷಕ್ಕೆ 20,000 ಅಡಿ ವೇಗದಲ್ಲಿ ಕೆಳಗೆ ಬಿದ್ದು ಪತನಗೊಂಡಿದೆ. ಈ ಬಗ್ಗೆ ಪೈಲಟ್ ಕೊನೆ ಕ್ಷಣದಲ್ಲಿ, ಏರ್ ಟ್ರಾಫಿಕ್ ಕಂಟ್ರೋಲ್ ಜೊತೆ ನಡೆಸಿದ ಸಂಭಾಷಣೆಯಿಂದ ತಿಳಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ವಿಮಾನವು ಸುಮಾರು 37,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದಾಗ, ಟರ್ಬುಲೆನ್ಸ್ಗೆ ಒಳಗಾಗಿದೆ ಎಂದು ಪೈಲಟ್, ಏರ್ ಟ್ರಾಫಿಕ್ ಕಂಟ್ರೋಲ್ಗೆ ಮಾಹಿತಿ ನೀಡಿದರು. ಆದರೆ ಕೆಲವೇ ಕ್ಷಣಗಳಲ್ಲಿ ವಿಮಾನವು ನಿಯಂತ್ರಣ ಕಳೆದುಕೊಂಡು ನಿಮಿಷಕ್ಕೆ 20,000 ಅಡಿಗಳಷ್ಟು ವೇಗದಲ್ಲಿ ಆಕಾಶದಿಂದ ಪತನಗೊಂಡು ಅದರೊಳಗಿದ್ದ 9 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.‘ಇದೊಂದು ಭಯಾನಕ ವಿಮಾನ ಪತನ. ಕ್ಷೀಪಣಿ ಅಪ್ಪಳಿಸಿದಂತೆ ‘ಲಿಯರ್ಜೆಟ್ 60’ ಭೂಮಿಗೆ ಅಪ್ಪಳಿಸಿದೆ ಎಂದು ಫ್ಲೋರಿಡಾದ ಗವರ್ನರ್ ರಾನ್ ಡಿಸಾಂಟಿಸ್ ಅವರು ಈ ಘಟನೆ ಕುರಿತು ಪ್ರತಿಕ್ರಿಯಿಸಿದ್ದಾರೆ. ‘ಈ ಘಟನೆಗೂ ಮೊದಲು ದೊಡ್ಡ ಶಬ್ದ ಕೇಳಿಸಿತು. ಮಳೆ ಎಂದು ಭಾವಿಸಿ ಸುಮ್ಮನಾದೆ. ಕ್ಷಣ ಮಾತ್ರದಲ್ಲಿ ವಿಮಾನ ಭೂ ಪ್ರದೇಶಕ್ಕೆ ಡಿಕ್ಕಿಯಾಗಿ ಸಂಪೂರ್ಣವಾಗಿ ಸುಟ್ಟುಹೋಯಿತು ಎಂದು ಸ್ಥಳೀಯ ನಿವಾಸಿ ಎಸ್ಟೆಬಾನ್ ರುಯಿಜ್ ವಿವರಿಸಿದ್ದಾರೆ. ಈ ವಿಮಾನವು ಅತಿ ವೇಗವಾಗಿ ನೆಲಕ್ಕೆ ಅಪ್ಪಳಿಸುವ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.