ಮೂಲಸೌಕರ್ಯ ವಂಚಿತ ದಂಡಿನಶಿವರ: ಹೋಬಳಿ ಕೇಂದ್ರವಾದರೂ ಬಸ್ ನಿಲ್ದಾಣವೇ ಇಲ್ಲ
ತುರುವೇಕೆರೆ: ಹೋಬಳಿ ಕೇಂದ್ರವಾದ ದಂಡಿನಶಿವರ ದಶಕಗಳಿಂದಲೂ ಐತಿಹಾಸಿಕ, ರಾಜಕೀಯ, ಸಾಂಸ್ಕೃತಿಕವಾಗಿ ಮಹತ್ವ ಪಡೆದಿದ್ದರೂ ಮೂಲಸೌಕರ್ಯಗಳಿಂದ ವಂಚಿತವಾಗಿದೆ.ದಂಡಿನಶಿವರ ಹೋಬಳಿ ವ್ಯಾಪ್ತಿಯಲ್ಲಿ 51 ಕಂದಾಯ ಗ್ರಾಮ, 30 ಮಜರೆ ಗ್ರಾಮಗಳಿವೆ. ಸುಮಾರು 53,580 ಜನಸಂಖ್ಯೆಯಿದೆ. ಮೂರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, 7 ಗ್ರಾಮ ಪಂಚಾಯಿತಿ ಕೇಂದ್ರಗಳಿವೆ.ಚಾಕೋನಹಳ್ಳಿ ಪಾಳ

ತುರುವೇಕೆರೆ: ಹೋಬಳಿ ಕೇಂದ್ರವಾದ ದಂಡಿನಶಿವರ ದಶಕಗಳಿಂದಲೂ ಐತಿಹಾಸಿಕ, ರಾಜಕೀಯ, ಸಾಂಸ್ಕೃತಿಕವಾಗಿ ಮಹತ್ವ ಪಡೆದಿದ್ದರೂ ಮೂಲಸೌಕರ್ಯಗಳಿಂದ ವಂಚಿತವಾಗಿದೆ.ದಂಡಿನಶಿವರ ಹೋಬಳಿ ವ್ಯಾಪ್ತಿಯಲ್ಲಿ 51 ಕಂದಾಯ ಗ್ರಾಮ, 30 ಮಜರೆ ಗ್ರಾಮಗಳಿವೆ. ಸುಮಾರು 53,580 ಜನಸಂಖ್ಯೆಯಿದೆ. ಮೂರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, 7 ಗ್ರಾಮ ಪಂಚಾಯಿತಿ ಕೇಂದ್ರಗಳಿವೆ.ಚಾಕೋನಹಳ್ಳಿ ಪಾಳ್ಯದಲ್ಲಿ ₹20 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್ ವಸತಿ ಶಾಲೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಪೂರ್ಣಗೊಳ್ಳಲು ಇನ್ನೂ ಒಂದು ವರ್ಷ ಬೇಕಿದೆ. ಇದರಿಂದಾಗಿ ತುರುವೇಕೆರೆಯ ಹಳೆ ಚೌಟರಿಯಲ್ಲಿ ನೂರಾರು ವಿದ್ಯಾರ್ಥಿಗಳು ಓದಬೇಕಿದೆ.ಹೊನ್ನಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಿಯು ಕಾಲೇಜಿನಲ್ಲಿ ಸೌಕರ್ಯಗಳಿದ್ದರೂ ದ್ವಿತೀಯ ಪಿಯು ಪರೀಕ್ಷೆ ಬರೆಯಲು ಹೋಬಳಿ ವಿದ್ಯಾರ್ಥಿಗಳು ಸುಮಾರು 15 .ಕಿ.ಮೀ ದೂರದ ತುರುವೇಕೆರೆಗೆ ಹೋಗಬೇಕಿದೆ. ಕೆಲವೊಮ್ಮೆ ಬಸ್ ಸಿಗದೆ ಸಕಾಲಕ್ಕೆ ಹೋಗಲು ಕಷ್ಟವಾಗುತ್ತಿದ್ದು, ಪಿಯುಸಿ ಪರೀಕ್ಷಾ ಕೇಂದ್ರವನ್ನು ದಂಡಿನಶಿವರಕ್ಕೆ ಮಂಜೂರು ಮಾಡಬೇಕು ಎಂಬುದು ಹಲವರ ಒತ್ತಾಯ.ಕೆಂಪು, ಕಪ್ಪು ಸೋಮನ ಕುಣಿತದಂತಹ ಜಾನಪದ ಕಲೆಯನ್ನು ಗಂಗಾಧರ ಗೌಡರು ದೇಶ– ವಿದೇಶಗಳಲ್ಲಿ ಪರಿಚಯಿಸಿದ್ದಾರೆ.ಅಮ್ಮಸಂದ್ರದಲ್ಲಿ ರೈಲ್ವೆ ನಿಲ್ದಾಣವಿದ್ದು, ತುಮಕೂರು ಜಿಲ್ಲೆಯಲೇ ಅತಿದೊಡ್ಡ ಸಿಮೆಂಟ್ ಕಾರ್ಖಾನೆಯೂ ಇದೆ.ಬಸ್ ನಿಲ್ದಾಣ ಇಲ್ಲ: ತಾಲ್ಲೂಕಿನಲ್ಲೇ ವ್ಯಾಪಾರ, ವಾಣಿಜ್ಯ ದೃಷ್ಟಿಯಿಂದ ಖ್ಯಾತಿ ಹೊಂದಿರುವ ದಂಡಿನಶಿವರದಲ್ಲಿ ಬಸ್ ನಿಲ್ದಾಣವಿಲ್ಲ. ಸುತ್ತಮುತ್ತಲಿನ ಹತ್ತಕ್ಕೂ ಹೆಚ್ಚು ಗ್ರಾಮಗಳ ವಿದ್ಯಾರ್ಥಿಗಳು, ಗ್ರಾಮಸ್ಥರು ರಸ್ತೆ ಬದಿಯಲ್ಲೇ ನಿಂತು ಬಸ್ಗಾಗಿ ಕಾಯಬೇಕಿದೆ.ತಿಪಟೂರು, ಕರಡಾಳು, ಬಾಣಸಂದ್ರ, ದಂಡಿನಶಿವರ ಮಾರ್ಗದ ಬಸ್, ದಂಡಿನಶಿವರ ಸಂಪಿಗೆ ಕಲ್ಲೂರ್ ಕ್ರಾಸ್ ಕಡೆ ಹೋಗುವ, ದಂಡಿನಶಿವರ ಕೊಂಡ್ಲಿ ಕ್ರಾಸ್ ತುಮಕೂರು, ಬೆಂಗಳೂರು ದಂಡಿನಶಿವರ ಹಾಲ್ಟ್ ಬಸ್, ತುರುವೇಕೆರೆಯಿಂದ ದಂಡಿನಶಿವರ ಮಾರ್ಗಕ್ಕೆ ಸಂಜೆ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು, ಗ್ರಾಮಸ್ಥರು ಪರದಾಡುತ್ತಿದ್ದಾರೆ ಎಂದು ಗ್ರಾಮದ ಶಿವಣ್ಣ ದೂರಿದರು.ಕೊಂಡ್ಲಿ ಕ್ರಾಸ್, ಹಡವಹಳ್ಳಿ ರಸ್ತೆಯನ್ನು ಅಮ್ಮಸಂದ್ರ ಸಿಮೆಂಟ್ ಕಾರ್ಖಾನೆ ಯವರು ನಿರ್ಮಿಸಿದ್ದರು. ನಿರ್ವಹಣೆ ಇಲ್ಲದಿದ್ದರಿಂದ ರಸ್ತೆಯುದ್ದಕ್ಕೂ ಸಾಲು ಸಾಲು ಗುಂಡಿಗಳಿವೆ. ಮಳೆ ಬಂದರೆ ಗುಂಡಿಯಲ್ಲಿ ನೀರು ನಿಲ್ಲಲಿದೆ. ಇದು ವಾಹನ ಸವಾರರ ಪಾಲಿಗೆ ಅಪಾಯಕಾರಿ ಆಗಿದೆ. ಲೋಕೋಪಯೋಗಿ ಇಲಾಖೆ ಗುಂಡಿ ಮುಚ್ಚುವ ಕೆಲಸವನ್ನು ಮಾಡಿಲ್ಲ.ದಂಡಿನಶಿವರದಿಂದ ಸಂಪಿಗೆ-ನಿಟ್ಟೂರು, ದಂಡಿನಶಿವರ– ಕಲ್ಲೂರ್ ಕ್ರಾಸ್ ರಸ್ತೆ ಹಾಳಾಗಿದ್ದು ಜನಸಂಚಾರ, ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ರಾಮಡಿಹಳ್ಳಿ ಮಾಚೇನಹಳ್ಳಿ ರಸ್ತೆಯದ್ದೂ ಇದೇ ಸ್ಥಿತಿ.ಸ್ವಂತ ಕಟ್ಟಡವಿಲ್ಲದ ಸರ್ಕಾರಿ ಕಚೇರಿಗಳು: ಇಲ್ಲಿನ ಪೊಲೀಸ್ ಠಾಣೆ ಶಿಥಿಲಗೊಂಡಿದ್ದು, ಬಳಸಲು ಯೋಗ್ಯವಿಲ್ಲದ ಕಾರಣ ಶಿಕ್ಷಕರ ವಸತಿ ಗೃಹದಲ್ಲಿ ನಡೆಯುತ್ತಿದೆ. ಅಂಚೆ ಕಚೇರಿ ಬಾಡಿಗೆ ಕಟ್ಟಡದಲ್ಲೇ ಕೆಲಸ ಮಾಡುತ್ತಿದೆ. ಪಶು ಆಸ್ಪತ್ರೆಗೆ ಕಾಯಂ ಕಟ್ಟಡವಿಲ್ಲ. ಗ್ರಾಮಲೆಕ್ಕಾಧಿಕಾರಿ ಕಟ್ಟಡ ಹಳೆಯದ್ದು. ನಾಡ ಕಚೇರಿಗೆ ಸ್ವಂತ ಕಟ್ಟಡವಿಲ್ಲದೆ ಗ್ರಾಮ ಪಂಚಾಯಿತಿಯ ಹಳೆಯ ಕಟ್ಟಡದಲ್ಲೇ ಜನರಿಗೆ ಸೇವೆ ನೀಡುತ್ತಿದೆ. ಆಸ್ಪತ್ರೆಯೂ ಹಳೆಯದಾಗಿದೆ. ವೈದ್ಯರ ವಸತಿ ಗೃಹಗಳು ಹಾಳಾಗಿವೆ.ಹೋಬಳಿಯ ರೈತರ ಅನುಕೂಲಕ್ಕಾಗಿ ನಾಡಕಚೇರಿ ಹಿಂಭಾಗದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕೃಷಿ ಉತ್ಪನ್ನ ಉಪಮಾರುಕಟ್ಟೆ ತೆರೆಯಲಾಗಿದೆ. ಅಲ್ಲಿಗೆ ವ್ಯಾಪಾರಿಗಳು, ಗ್ರಾಹಕರು ಹೋಗುತ್ತಿಲ್ಲ. ನಿರ್ವಹಣೆ ಇಲ್ಲದೆ ಗಿಡಗಳು ಬೆಳೆದು ನಿಂತಿವೆ. ಹೊನ್ನಾದೇವಿ ದೇವಸ್ಥಾನದ ಮುಂಭಾಗದ ರಸ್ತೆ ಬದಿಯಲ್ಲಿ ಪ್ರತಿ ಶುಕ್ರವಾರ ಸಂತೆ ನಡೆಯುತ್ತದೆ.ಸಿದ್ದಗಂಗಯ್ಯ ಕೆ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಅಮ್ಮಸಂದ್ರದಂಡಿನಶಿವರದ ಪ್ರಾಥಮಿಕ ಆಸ್ಪತ್ರೆಗೆ ಹೊಸ ಕಟ್ಟಡ ನಿರ್ಮಿಸಿ, ತಜ್ಞ ವೈದ್ಯರನ್ನು ನೇಮಿಸಬೇಕು. ಪೊಲೀಸ್ ಠಾಣೆ ಶಿಥಿಲಗೊಂಡಿದ್ದು ಹೊಸ ಕಟ್ಟಡ ನಿರ್ಮಾಣ ಮಾಡಬೇಕುಡಿ.ಕೆ.ಮಧುಸೂದನ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ದಂಡಿನಶಿವರಬಸ್ ನಿಲ್ದಾಣ, ಸಾರ್ವಜನಿಕ ಶೌಚಾಲಯ ನಿರ್ಮಾಣವಾಗಬೇಕು. ದಂಡಿನಶಿವರದಿಂದ ಅಮ್ಮಸಂದ್ರ ರೈಲ್ವೆ ನಿಲ್ದಾಣದವರೆಗೆ ಹೈಮಾಸ್ಟ್ ದೀಪ ಅಳವಡಿಸಿ ಅನುಕೂಲ ಮಾಡಿಕೊಡಲಿದಂಡಿನಶಿವರ ಕುಮಾರ್ಜಿಲ್ಲಾ ದಸಂಸ ಸಂಚಾಲಕದಲಿತರಿಗೆ ಸ್ಮಶಾನ ಭೂಮಿ ಮೀಸಲಿಡಬೇಕು. ಅಭಿವೃದ್ಧಿಗೆ ಅನುದಾನ ನೀಡಲಿ. ಅಂಬೇಡ್ಕರ್ ವಸತಿ ಶಾಲಾ ಕಾಮಗಾರಿ ಗುಣಮಟ್ಟದಲ್ಲಿರಲಿ261102-17-1218674267