ಬಳಕೆಯಿಂದ ಕನ್ನಡ ಉಳಿಸಲು ಸಾಧ್ಯ: ಶಾಸಕ ರಮೇಶ ಬಂಡಿಸಿದ್ದೇಗೌಡ
ಶ್ರೀರಂಗಪಟ್ಟಣ: ನಿರಂತರವಾಗಿ ಬಳಸುವುದರಿಂದ ಕನ್ನಡ ಭಾಷೆ ಉಳಿಸಿ, ಬೆಳೆಸಲು ಸಾಧ್ಯ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು.ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ ಮೈದಾನದಲ್ಲಿ ತಾಲ್ಲೂಕು ಆಡಳಿತ ಭಾನುವಾರ ಏರ್ಪಡಿಸಿದ್ದ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದರು.ಕನ್ನಡ ಭಾಷೆಗೆ ಸಹಸ್ರಾರು ವರ್ಷಗಳ ಇತಿಹಾಸವಿದೆ. ನಾಡನ್ನಾಳಿದ ಅರಸರು ಭಾಷೆ ಮಾತ್ರವಲ್ಲದೆ

ಶ್ರೀರಂಗಪಟ್ಟಣ: ನಿರಂತರವಾಗಿ ಬಳಸುವುದರಿಂದ ಕನ್ನಡ ಭಾಷೆ ಉಳಿಸಿ, ಬೆಳೆಸಲು ಸಾಧ್ಯ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು.ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ ಮೈದಾನದಲ್ಲಿ ತಾಲ್ಲೂಕು ಆಡಳಿತ ಭಾನುವಾರ ಏರ್ಪಡಿಸಿದ್ದ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದರು.ಕನ್ನಡ ಭಾಷೆಗೆ ಸಹಸ್ರಾರು ವರ್ಷಗಳ ಇತಿಹಾಸವಿದೆ. ನಾಡನ್ನಾಳಿದ ಅರಸರು ಭಾಷೆ ಮಾತ್ರವಲ್ಲದೆ ಕಲೆ, ಸಂಸ್ಕೃತಿಯನ್ನೂ ಪೋಷಿಸಿ ಕನ್ನಡ ನಾಡನ್ನು ಶ್ರೀಮಂತಗೊಳಿಸಿದ್ದಾರೆ. ಕನ್ನಡಿಗರು ಮಾತೃಭಾಷೆಯನ್ನು ತಾಯಿಯಂತೆ ಪ್ರೀತಿಸಬೇಕು. ಅನ್ಯ ಭಾಷಿಕರಿಗೂ ಕನ್ನಡ ಕಲಿಸಬೇಕು ಎಂದು ಸಲಹೆ ನೀಡಿದರು.ಪ್ರಧಾನ ಭಾಷಣ ಮಾಡಿದ ಮೈಸೂರಿನ ಭಾಷಾ ತಜ್ಞ ರವೀಶ್ಕುಮಾರ್ ಬಿ., ಕ್ರಿ.ಶ 1ನೇ ಶತಮಾನದ ಗ್ರೀಕ್ ನಾಟಕಗಳಲ್ಲಿ ಕನ್ನಡ ಪದಗಳನ್ನು ಬಳಸಲಾಗಿದೆ. ಹಲ್ಮಿಡಿ ಶಾಸನ, ಕಪ್ಪೆ ಅರಭಟ್ಟನ ಶಾಸನಗಳು ಕನ್ನಡದ ಐತಿಹಾಸಿಕ ದಾಖಲೆಗಳಾಗಿವೆ ಎಂದರು.ತಾಲ್ಲೂಕು ಕೇಂದ್ರದಲ್ಲಿ ಕುವೆಂಪು ಭವನ ನಿರ್ಮಿಸಬೇಕು. ಬ್ಯಾಂಕ್ಗಳಲ್ಲಿ ಕನ್ನಡ ಬಳಸುವಂತೆ ಕ್ರಮ ವಹಿಸಬೇಕು. ಅನಧಿಕೃತ ಆಂಗ್ಲ ಮಾಧ್ಯಮ ಶಾಲೆಗಳಿಗೆ ಕಡಿವಾಣ ಹಾಕಬೇಕು ಎಂದು ಮಂಡ್ಯ ರಕ್ಷಣಾ ವೇದಿಕೆ ಅಧ್ಯಕ್ಷ ಬಿ. ಶಂಕರಬಾಬು, ಮುಖಂಡರಾದ ಸಿ. ಸ್ವಾಮಿಗೌಡ, ಕೆ.ಟಿ. ರಂಗಯ್ಯ ಒತ್ತಾಯಿಸಿದರು.ಯಶಸ್ವಿ ರೇಷ್ಮೆ ಬೆಳೆಗಾರ ನಂಜೇಗೌಡ, ಪ್ರಗತಿಪರ ಕೃಷಿಕ ಚಂದ್ರಶೇಖರ್, ವಿಜ್ಞಾನದ ಆವರ್ತಕ ಕೋಷ್ಠಕ ಕಲಿಕೆಯಲ್ಲಿ ದಾಖಲೆ ಮಾಡಿರುವ ಬಾಲಕಿ ವಿಹಿಕಾ, ಪತ್ರಕರ್ತ ಬಿ.ಸಿ. ಸಂತೋಷ್ಕುಮಾರ್, ಸರ್ಕಾರಿ ಶಾಲೆ ಉಳಿವಿಗೆ ಶ್ರಮಿಸುತ್ತಿರುವ ಕಡತನಾಳು ಸುನಿಲ್ಕುಮಾರ್ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ತಹಶೀಲ್ದಾರ್ ಚೇತನಾ ಯಾದವ್, ತಾಲ್ಲೂಕು ಪಂಚಾಯಿತಿ ಇಒ ಚಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್. ಚಂದ್ರಶೇಖರ್, ಪುರಸಭೆ ಮುಖ್ಯಾಧಿಕಾರಿ ಎಂ. ರಾಜಣ್ಣ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ. ಶ್ರೀನಿವಾಸ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಎನ್. ಲೋಕೇಶ್, ಕಸಾಪ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷರಾದ ಸಿದ್ದಲಿಂಗು, ಪುರುಷೋತ್ತಮ, ವಿದ್ಯಾ ಇಲಾಖಾ ನೌಕರರ ಸಹಕಾರ ಸಂಘದ ಅಧ್ಯಕ್ಷ ಎಚ್.ಟಿ. ರಾಜಶೇಖರ್, ಮುಖಂಡರಾದ ಚಂದಗಾಲು ಶಂಕರ್, ಎಂ. ಸುರೇಶ್, ಕೆ.ಬಿ. ಬಸವರಾಜು, ಪ್ರಿಯಾ ರಮೇಶ್, ಕುಮಾರ್, ಅಭಿಷೇಕ್ಗೌಡ ಭಾಗವಹಿಸಿದ್ದರು.261102-40-149370