ಬಿಗ್ಬಾಸ್ ಮನೆಯಲ್ಲಿ ರಾಜ್ಯೋತ್ಸವ;ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಸ್ಪರ್ಧಿಗಳು
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ಬಾಸ್ ಸೀಸನ್ 13 ರಂಗೇರುತ್ತಿದೆ. ಆಟ, ಮೋಜಿನ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದೆ. ಈ ನಡುವೆ ಬಿಗ್ಬಾಸ್ ಮನೆಯಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ. ಈ ಮನೆಯ ಕ್ಯಾಪ್ಟನ್ ಆಗಿರುವ ಜಗದೀಶ್, ಕರ್ನಾಟಕ ಬಾವುಟವನ್ನು ಹಾರಿಸಿದ್ದಾರೆ. ಈ ಮನೆಯ ಸದಸ್ಯರೊಂದಿಗೆ, ಸೌಂದರ್ಯ ಶೆಟ್
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ಬಾಸ್ ಸೀಸನ್ 13 ರಂಗೇರುತ್ತಿದೆ. ಆಟ, ಮೋಜಿನ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದೆ. ಈ ನಡುವೆ ಬಿಗ್ಬಾಸ್ ಮನೆಯಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ. ಈ ಮನೆಯ ಕ್ಯಾಪ್ಟನ್ ಆಗಿರುವ ಜಗದೀಶ್, ಕರ್ನಾಟಕ ಬಾವುಟವನ್ನು ಹಾರಿಸಿದ್ದಾರೆ. ಈ ಮನೆಯ ಸದಸ್ಯರೊಂದಿಗೆ, ಸೌಂದರ್ಯ ಶೆಟ್ಟಿ ಅವರು ‘ಜೈ ಭಾರತ ಜನನಿಯ ತನುಜಾತೆ’ ಗೀತೆಯನ್ನು ಗಟ್ಟಿ ಧ್ವನಿಯಲ್ಲಿ ಹಾಡಿದ್ದಾರೆ. ಸೌಂದರ್ಯಾ ಅವರು ಹಾಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮನೆಯ ಸದಸ್ಯರು ಕುರ್ತಾ, ಧೋತಿ, ಸೀರೆ ಧರಿಸಿ ಸುಂದರವಾಗಿ ಆಚರಿಸಿದ್ದಾರೆ.Wait, Masal Dose fans will come up with new conspiracy theory, something like "Soundarya Shetty is using teleprompter"#BBK13 pic.twitter.com/atEXwmONvx— ಅಲ್ಪಸಂಖ್ಯಾತ (@alpasankhyata) November 2, 2026 ಸ್ಯಾಂಡಿ ಎಂದೇ ಜನಪ್ರಿಯರಾಗಿರುವ ಸೌಂದರ್ಯ ಅವರು ಮಂಗಳೂರಿನ ಮೂಲದವರು. ಇವರು ಈ ಹಿಂದೆ ಮುಂಬೈನಲ್ಲಿದ್ದರೂ ಈಗ ತಪ್ಪಿಲ್ಲದೆ ಕನ್ನಡ ಗೀತೆಯನ್ನು ಹಾಡಿದ್ದಾರೆ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಬಂದಿದ್ದ ಕುಮಾರಿ ಅವರು ಕಳೆದ ವಾರಾಂತ್ಯದಲ್ಲಿ ಎಲಿಮಿನೇಟ್ ಆಗಿದ್ದಾರೆ. ಈ ವಾರದ ನಾಮಿಮೇಷನ್ ಪ್ರಕ್ರಿಯೆಲ್ಲಿ ನಾಮಿನೇಟ್ ಮಾಡುವ ಸದಸ್ಯರನ್ನು, ಅವರ ಭಾವಚಿತ್ರಕ್ಕೆ ಕೊಡಲಿ ಏಟನ್ನು ನೀಡುವ ಮೂಲಕ ಆಯ್ಕೆ ಮಾಡುವ ಟಾಸ್ಕ್ ನೀಡಲಾಗಿದೆ. ನಾಮಿನೇಷನ್ ವಿಚಾರಕ್ಕೆ ಕಿರಣ್ ಶಾಸ್ತ್ರಿ ಕೂಗಾಡಿರುವ ದೃಶ್ಯಗಳು ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಕಾಣಿಸಿದೆ.