‘ಕಾಂಗ್ರೆಸ್ನವರು ನನ್ಮಕ್ಳು’ಎಂದ ವಿಜಯೇಂದ್ರ ಕ್ಷಮೆಯಾಚನೆಗೆ ಹರಿಪ್ರಸಾದ್ ಆಗ್ರಹ
ನವದೆಹಲಿ: ‘ಕಾಂಗ್ರೆಸ್ನವರು ನನ್ಮಕ್ಳು’ ಎಂದು ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದರು.ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅವರಪ್ಪನ (ಬಿಎಸ್ವೈ) 700 ಸಹಿಗಳನ್ನೇ ನಕಲಿ ಮಾಡಿ ಆರ್ಟಿಜಿಎಸ್ ಮೂಲಕ ಲಂಚ ಪಡೆದವರು ವಿಜಯೇಂದ್ರ. ಅವರಿಂದ ದೊಡ

ನವದೆಹಲಿ: ‘ಕಾಂಗ್ರೆಸ್ನವರು ನನ್ಮಕ್ಳು’ ಎಂದು ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದರು.ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅವರಪ್ಪನ (ಬಿಎಸ್ವೈ) 700 ಸಹಿಗಳನ್ನೇ ನಕಲಿ ಮಾಡಿ ಆರ್ಟಿಜಿಎಸ್ ಮೂಲಕ ಲಂಚ ಪಡೆದವರು ವಿಜಯೇಂದ್ರ. ಅವರಿಂದ ದೊಡ್ಡ ಸಂಸ್ಕೃತಿ ನಿರೀಕ್ಷೆ ಮಾಡಿಲ್ಲ’ ಎಂದರು. ಹೇಳಿಕೆ ಕುರಿತು ಮೂರು ದಿನಗಳೊಳಗೆ ವಿಜಯೇಂದ್ರ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಅವರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಕಪ್ಪುಪಟ್ಟಿ ಪ್ರದರ್ಶಿಸಲಿದ್ದಾರೆ ಎಂದು ಅವರು ಎಚ್ಚರಿಸಿದರು. ‘ನಿಗಮ, ಮಂಡಳಿಗಳಿಗೆ ಮೊದಲ ಹಂತದಲ್ಲಿ ಶಾಸಕರು ಹಾಗೂ ಮಾಜಿ ಶಾಸಕರನ್ನು ನೇಮಕ ಮಾಡಲಾಗುತ್ತದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಶಿಫಾರಸು ಮಾಡಿರುವ ಹೆಸರುಗಳಿಗೆ ಹೈಕಮಾಂಡ್ ಒಪ್ಪಿಗೆ ಕೊಟ್ಟಿದೆ. ಯಾವುದೇ ಕ್ಷಣದಲ್ಲೂ ಪಟ್ಟಿ ಪ್ರಕಟವಾಗಬಹುದು’ ಎಂದು ಅವರು ಹೇಳಿದರು. ‘ಮಹಾತ್ಮ ಗಾಂಧಿ ಅವರನ್ನು ದೇಶದ್ರೋಹಿ ಎಂದು ಬಿಂಬಿಸಲು ಒಬ್ಬ ನಕಲಿ ಸಾಹಿತಿ ಹೊರಟಿದ್ದ. ಆತನಿಗೆ ಕಾಂಗ್ರೆಸ್ ಪಕ್ಷದವರು ಮಸಿ ಬಳಿದಿದ್ದಾರೆ. ನಾನು ಇದ್ದಿದ್ದರೆ ಇನ್ನಷ್ಟು ಮಸಿ ಬಳಿಸುತ್ತಿದ್ದೆ. ಗಾಂಧೀಜಿ ಬಗ್ಗೆ ಮಾತನಾಡುವವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು’ ಎಂದು ಅವರು ಒತ್ತಾಯಿಸಿದರು.