ಅರ್ನಬ್ ಬೆನ್ನಲ್ಲೇ ‘ಮುರಾಸು’ ಭೀತಿ: ತ.ನಾಡು, ಆಂಧ್ರದಲ್ಲಿ ಭಾರಿ ಮಳೆ ಮುನ್ಸೂಚನೆ
ನವದೆಹಲಿ: ‘ಅರ್ನಬ್’ ಚಂಡಮಾರುತದ ಪರಿಣಾಮದಿಂದ ಚೇತರಿಸಿಕೊಳ್ಳುವ ಮುನ್ನವೇ ಭಾರತದ ಪೂರ್ವ ಕರಾವಳಿಗೆ ‘ಮುರಾಸು’ ಚಂಡಮಾರುತ ಅಪ್ಪಳಿಸಲು ಸಜ್ಜಾಗಿದೆ. ಮಂಗಳವಾರ ಮುಂಜಾನೆ ವೇಳೆಗೆ ‘ಮುರಾಸು’ ತೀವ್ರ ಸ್ವರೂಪ ಪಡೆದು ಕರಾವಳಿಯನ್ನು ದಾಟಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಭಾರತದ ಪೂರ್ವ ಕರಾವಳಿ ತೀರದ ತಗ್ಗು ಪ್ರದೇಶಗಳಿಂದ

ನವದೆಹಲಿ: ‘ಅರ್ನಬ್’ ಚಂಡಮಾರುತದ ಪರಿಣಾಮದಿಂದ ಚೇತರಿಸಿಕೊಳ್ಳುವ ಮುನ್ನವೇ ಭಾರತದ ಪೂರ್ವ ಕರಾವಳಿಗೆ ‘ಮುರಾಸು’ ಚಂಡಮಾರುತ ಅಪ್ಪಳಿಸಲು ಸಜ್ಜಾಗಿದೆ. ಮಂಗಳವಾರ ಮುಂಜಾನೆ ವೇಳೆಗೆ ‘ಮುರಾಸು’ ತೀವ್ರ ಸ್ವರೂಪ ಪಡೆದು ಕರಾವಳಿಯನ್ನು ದಾಟಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಭಾರತದ ಪೂರ್ವ ಕರಾವಳಿ ತೀರದ ತಗ್ಗು ಪ್ರದೇಶಗಳಿಂದ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.‘ಈಗಾಗಲೇ 2,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದ್ದು, ಕಾರ್ಯಾಚರಣೆ ಮುಂದುವರಿದಿದೆ. 30 ಸಾವಿರ ಜನರನ್ನು ಸುರಕ್ಷಿತ ತಾಣಗಳಿಗೆ ರವಾನಿಸಲು ಯೋಜನೆ ರೂಪಿಸಲಾಗಿದೆ’ ಎಂದು ಆಂಧ್ರಪ್ರದೇಶ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವ್ಯವಸ್ಥಾಪಕ ನಿರ್ದೇಶಕ ಪ್ರಖರ್ ಜೈನ್ ತಿಳಿಸಿದ್ದಾರೆ.ಭಾರತದ ಆಗ್ನೇಯ ಕರಾವಳಿ ರಾಜ್ಯಗಳಾದ ತಮಿಳುನಾಡು ಮತ್ತು ಆಂಧ್ರಪ್ರದೇಶದ ಮೇಲೆ ‘ಮುರಾಸು’ ತೀವ್ರ ಪರಿಣಾಮ ಬೀರಲಿದೆ ಎಂದು ಐಎಂಡಿ ಎಚ್ಚರಿಸಿದೆ. ಹಾಗಾಗಿ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದ್ದು, ಶಾಲೆಗಳಿಗೆ ರಜೆ ಘೋಷಿಸಲಾಗಿದೆ.ಉತ್ತರ ತಮಿಳುನಾಡಿನಾದ್ಯಂತ ಭಾರಿ ಮಳೆಯಾಗುತ್ತಿದ್ದು, ಚೆನ್ನೈನ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಚಂಡಮಾರುತವು ಚೆನ್ನೈನಿಂದ ಸುಮಾರು 250-260 ಕಿ.ಮೀ ದೂರದಲ್ಲಿದ್ದು, ಆಂಧ್ರಪ್ರದೇಶದ ದಕ್ಷಿಣ ಕರಾವಳಿಯತ್ತ ಧಾವಿಸುತ್ತಿದೆ.ದಕ್ಷಿಣ-ಪಶ್ಚಿಮ ಬಂಗಾಳ ಕೊಲ್ಲಿಯಲ್ಲಿ ಸಕ್ರಿಯವಾಗಿರುವ ‘ಮುರಾಸು’ ಚಂಡಮಾರುತವು ಕಳೆದ 6 ಗಂಟೆಗಳಲ್ಲಿ ಗಂಟೆಗೆ 20 ಕಿ.ಮೀ ವೇಗದಲ್ಲಿ ವಾಯುವ್ಯ ದಿಕ್ಕಿನತ್ತ ಚಲಿಸಿದೆ. ಇದು ಮತ್ತಷ್ಟು ತೀವ್ರಗೊಂಡು ಚಂಡಮಾರುತವಾಗಿ ಮಾರ್ಪಟ್ಟಿದೆ.ನವೆಂಬರ್ 3ರ ಮುಂಜಾನೆ ವೇಳೆ ಚಂಡಮಾರುತವು ಆಂಧ್ರಪ್ರದೇಶದ ನೆಲ್ಲೂರು ಮತ್ತು ನರಸಾಪುರ ನಡುವೆ ದಕ್ಷಿಣ ಕರಾವಳಿಯನ್ನು ದಾಟಲಿದೆ. ಈ ಸಮಯದಲ್ಲಿ ಗಾಳಿಯ ವೇಗವು ಗಂಟೆಗೆ 100ರಿಂದ 110 ಕಿ.ಮೀ ಇರಲಿದ್ದು, ಗರಿಷ್ಠ 120 ಕಿ.ಮೀ ವೇಗವನ್ನು ತಲುಪುವ ಸಾಧ್ಯತೆಯಿದೆ’ ಎಂದು ಐಎಂಡಿ ಸ್ಪಷ್ಟಪಡಿಸಿದೆ.Cyclonic Storm “MURASU” Intensifies Over the Bay of BengalCyclonic Storm “MURASU” is likely to intensify into a Severe Cyclonic Storm by the morning of 02 November 2026. It is very likely to cross the South Andhra Pradesh coast between Nellore and Narsapur during midnight of 02… pic.twitter.com/DaqewdH2Ro— India Meteorological Department (@Indiametdept) November 1, 2026 #WATCH | Andhra Pradesh | Heavy clouds over Vijayawada as a result of Severe Cyclonic Storm Murasu in the Bay of Bengal. It is expected to cross between Nellore and Narsapuram between midnight today and the early hours tomorrow. The system is located about 160 km… pic.twitter.com/tUvAaZfk2i— ANI (@ANI) November 2, 2026 ಅರ್ನಬ್ ಚಂಡಮಾರುತ: ಒಡಿಶಾದ 300 ಗ್ರಾಮಗಳು ಜಲಾವೃತಆಂಧ್ರಪ್ರದೇಶದಲ್ಲಿ ‘ಅರ್ನಬ್’ ಚಂಡಮಾರುತ ಅಬ್ಬರ: ಆರು ಸಾವು, ಜನಜೀವನ ಅಸ್ತವ್ಯಸ್ತ