ಕನ್ನಡದ ಪೋಷಾಕು,ಕನ್ನಡತನವೇ ಅಸ್ಮಿತೆ: ಎಲ್ಲರನ್ನೂ ಥಟ್ಟನೆ ಸೆಳೆಯುವ ಮಲ್ಲಿಕಾರ್ಜುನ
ಗದಗ: ನಗರದಲ್ಲಿ ಕನ್ನಡದ ಕಾರ್ಯಕ್ರಮಗಳ ಎಲ್ಲೇ ನಡೆದರೂ ಇವರನ್ನು ಎಲ್ಲರೂ ಗಮನಿಸಿರುತ್ತಾರೆ. ಕನ್ನಡ ಧ್ವಜದ ಬಣ್ಣಗಳಾದ ಕೆಂಪು, ಹಳದಿಯ ವಸ್ತ್ರಗಳನ್ನು ಸದಾ ತೊಟ್ಟು, ಎಲ್ಲರನ್ನೂ ಥಟ್ಟನೆ ಸೆಳೆಯುತ್ತಾರೆ ಮಲ್ಲಿಕಾರ್ಜುನ ಖಂಡಮ್ಮನವರ.ಕಳಸಾಪುರದ ನಿವಾಸಿ ಮಲ್ಲಿಕಾರ್ಜುನ ಅವರ ಹೆಸರು ಬಹುತೇಕರಿಗೆ ಗೊತ್ತಿಲ್ಲ. ಆದರೆ, ‘ಕನ್ನಡದ ಅಜ್ಜ’ನೆಂದರೆ ಎಲ್ಲರಿಗೂ ನೆನಪಾಗುತ್ತಾರೆ.

ಗದಗ: ನಗರದಲ್ಲಿ ಕನ್ನಡದ ಕಾರ್ಯಕ್ರಮಗಳ ಎಲ್ಲೇ ನಡೆದರೂ ಇವರನ್ನು ಎಲ್ಲರೂ ಗಮನಿಸಿರುತ್ತಾರೆ. ಕನ್ನಡ ಧ್ವಜದ ಬಣ್ಣಗಳಾದ ಕೆಂಪು, ಹಳದಿಯ ವಸ್ತ್ರಗಳನ್ನು ಸದಾ ತೊಟ್ಟು, ಎಲ್ಲರನ್ನೂ ಥಟ್ಟನೆ ಸೆಳೆಯುತ್ತಾರೆ ಮಲ್ಲಿಕಾರ್ಜುನ ಖಂಡಮ್ಮನವರ.ಕಳಸಾಪುರದ ನಿವಾಸಿ ಮಲ್ಲಿಕಾರ್ಜುನ ಅವರ ಹೆಸರು ಬಹುತೇಕರಿಗೆ ಗೊತ್ತಿಲ್ಲ. ಆದರೆ, ‘ಕನ್ನಡದ ಅಜ್ಜ’ನೆಂದರೆ ಎಲ್ಲರಿಗೂ ನೆನಪಾಗುತ್ತಾರೆ. 2008ರಿಂದ ಕನ್ನಡ ಧ್ವಜದ ಬಣ್ಣಗಳ ವಸ್ತ್ರಗಳನ್ನೇ ಧರಿಸುತ್ತಿರುವ ಇವರು ತಮ್ಮ ದ್ವಿಚಕ್ರ ವಾಹನವನ್ನು ಕನ್ನಡಮಯವಾಗಿರುವಂತೆ ಅಲಂಕರಿಸುತ್ತಾರೆ.ಇವರು ರಸ್ತೆಗಿಳಿದರೆ, ಫೋಟೊ ಕ್ಲಿಕ್ಕಿಸಿಕೊಳ್ಳಲು ಜನರು ಮುಗಿಬೀಳುತ್ತಾರೆ. ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಾರೆ. ಉದ್ಯೋಗವನ್ನೂ ತೊರೆದು ಕನ್ನಡದ ಸೇವೆಗಾಗಿ ತನು–ಮನ ಮುಡಿಪಾಗಿಟ್ಟ ಹಿರಿಮೆ ಇವರದ್ದು.‘80ರ ದಶಕದಲ್ಲಿ ನಡೆದ ಗೋಕಾಕ್ ಚಳವಳಿ ನನ್ನ ಮೇಲೆ ತುಂಬಾ ಪ್ರಭಾವ ಬೀರಿತು. ಚಿತ್ರ ನಟ ರಾಜ್ಕುಮಾರ್, ಕನ್ನಡದ ಹೋರಾಟಗಾರ ವಾಟಾಳ್ ನಾಗರಾಜ್ ಸೇರಿದಂತೆ ಹಲವರ ಭಾಷಣಗಳನ್ನು ಕೇಳಿ ಪುಳಕಿತನಾದೆ. ಅಂದಿನಿಂದ ನನ್ನದೇ ವಿಧಾನದಲ್ಲಿ ಕನ್ನಡದ ಸೇವೆ ಮಾಡುತ್ತ ಬಂದಿರುವೆ’ ಎನ್ನುತ್ತಾರೆ ಮಲ್ಲಿಕಾರ್ಜುನ ಖಂಡಮ್ಮನವರ.‘ಈ ಮೊದಲು ಕನ್ನಡದ ಕಾರ್ಯಕ್ರಮ ಇದ್ದಾಗ ಇಂತಹ ವೇಷಭೂಷಣ ಧರಿಸುತ್ತಿದ್ದೆ. ಈಗೀಗ ಬಹುತೇಕ ಇದೇ ಉಡುಪಿನಲ್ಲಿರುವೆ. ಕನ್ನಡ ಧ್ವಜ ಬಣ್ಣದ ಒಟ್ಟು 10 ಜೊತೆ ಬಟ್ಟೆಗಳು ನನ್ನ ಬಳಿ ಇವೆ. ರಾಷ್ಟ್ರೀಯ ಹಬ್ಬಗಳಂದು ಕೇಸರಿ, ಬಿಳಿ, ಹಸಿರು ಬಣ್ಣದ ಬಟ್ಟೆ ಧರಿಸುವೆ’ ಎಂದು ಹೇಳಿದರು.‘ಕನ್ನಡ ನಿತ್ಯೋತ್ಸವ ಆಗಬೇಕೆಂಬುದು ನನ್ನ ಆಶಯ. ಅದಕ್ಕಾಗಿ, ಶಾಲೆಗಳಲ್ಲಿ ಕನ್ನಡದ ಉಳಿವಿಗಾಗಿ ಜಾಗೃತಿ ಮೂಡಿಸುತ್ತಿರುವೆ. 1,633 ಶಿವಾನುಭವ ಗೋಷ್ಠಿ ನಡೆಸಿ, ಸಾಹಿತ್ಯ ವಿಮರ್ಶೆ ಜೊತೆಗೆ ಸಾಧಕರಿಗೆ ಸನ್ಮಾನ ಮಾಡುತ್ತಿರುವೆ. ಕನ್ನಡಕ್ಕೆ ನನ್ನದು ಅಳಿಲುಸೇವೆ’ ಎಂದು ವಿನಮ್ರವಾಗಿ ನುಡಿದರು.ಕನ್ನಡದ ಅಂಕಿಗಳಲ್ಲೇ ಲೆಕ್ಕ ದಾಖಲುಕಾಶೀನಾಥ ಬಿಳಿಮಗ್ಗದಮುಂಡರಗಿ: ಐದು ದಶಕಗಳ ಹಿಂದೆ ವ್ಯಾಪಾರಕ್ಕಾಗಿ ದೂರದ ರಾಜಸ್ಥಾನದಿಂದ ಪಟ್ಟಣಕ್ಕೆ ಬಂದ ಮಾರ್ವಾಡಿ ಕುಟುಂಬದ ಗೌತಮಚಂದ್ ಚೋಪ್ರಾ ಅವರು ದೈನಂದಿನ ವ್ಯಾಪಾರದ ಮಾಹಿತಿಯನ್ನು ಅಚ್ಚ ಕನ್ನಡದ ಅಂಕಿಗಳನ್ನು ಬಳಸುವ ಮೂಲಕ ಕನ್ನಡಿಗರಿಗೆ ಮಾದರಿಯಾಗಿದ್ದಾರೆ.ಪ್ರತಿದಿನ ವ್ಯಾಪಾರಕ್ಕೆ ಬರುತ್ತಿದ್ದ ಗ್ರಾಹಕರಿಂದಲೇ ಕನ್ನಡ ಭಾಷೆ ಕಲಿತರು. ನಂತರ ಕನ್ನಡದ ಬರವಣಿಗೆಯನ್ನೂ ಕಲಿತರು. ಸದ್ಯ ಚೋಪ್ರಾ ಕುಟುಂಬವು ಎಪಿಎಂಸಿಯಲ್ಲಿ ದಲಾಲಿ ಅಂಗಡಿ ನಿರ್ವಹಿಸುತ್ತಿದ್ದು, ರೈತರೊಂದಿಗೆ ಅಚ್ಚಕನ್ನಡದಲ್ಲಿ ವ್ಯವಹರಿಸುತ್ತಿದ್ದಾರೆ. ಗೌತಮಚಂದ್ ಚೋಪ್ರಾ ಅವರಿಗೆ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯು ಪ್ರಸ್ತುತ ವರ್ಷದ ಜಿಲ್ಲಾ ಮಟ್ಟದ ಶ್ರೇಷ್ಠ ವರ್ತಕ ಪ್ರಶಸ್ತಿ ನೀಡಿ ಗೌರವಿಸಿದೆ.ಪಟ್ಟಣದ ಎಪಿಎಂಸಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಲಿಂ. ನೀಲಕಂಠಪ್ಪ ಪತ್ತಾರ, ಲಿಂ. ಬಸವಣ್ಣೆಪ್ಪ ಶಿವಶಟ್ಟರ, ಈಶಣ್ಣ ಬೆಟಗೇರಿ ಮೊದಲಾದವರು ತಮ್ಮ ಖಾತೆ, ಲೆಕ್ಕಗಳನ್ನು ಕನ್ನಡದ ಅಂಕಿಗಳನ್ನೇ ಬರೆಯುತ್ತಿದ್ದರು.‘ಕನ್ನಡ ನಾಡು ಹಾಗೂ ಕನ್ನಡ ಭಾಷೆ ಹಲವು ದಶಕಗಳಿಂದ ನಮಗೆ ಹಾಗೂ ನಮ್ಮ ಕುಟುಂಬಕ್ಕೆ ಅನ್ನ, ಆಶ್ರಯ ನೀಡಿವೆ. ಈಗ ನಾವೂ ಕನ್ನಡಿಗರೇ ಆಗಿದ್ದು, ನಿತ್ಯ ವ್ಯವಹಾರದಲ್ಲಿ ಕನ್ನಡ ಬಳಸಲು ಹೆಮ್ಮೆ ಎನಿಸುತ್ತದೆ’ ಎನ್ನುತ್ತಾರೆ ಗೌತಮಚಂದ್ ಚೋಪ್ರಾ.ಸರ್ಕಾರಿ ಶಾಲೆಯಲ್ಲಿ ಕನ್ನಡ ಪ್ರಯೋಗಾಲಯ ಚಂದ್ರು ಎಂ. ರಾಥೋಡ್ನರೇಗಲ್: ಸಾಮಾನ್ಯವಾಗಿ ವಿಜ್ಞಾನದ ಪ್ರಯೋಗಾಲಯ ಕೇಳಿರುತ್ತೇವೆ. ಆದರೆ, ಇಲ್ಲೊಬ್ಬರು ಶಿಕ್ಷಕರು ವಿನೂತನವಾಗಿ ಕನ್ನಡ ಪ್ರಯೋಗಾಲಯ ಸ್ಥಾಪಿಸಿದ್ದಾರೆ.ಸಮೀಪದ ಕೋಚಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಕನ್ನಡ ಭಾಷಾ ಪ್ರಯೋಗಾಲಯ’ವನ್ನು ಸಹ ಶಿಕ್ಷಕ ವಿಜಯಕುಮಾರ ಡಿ.ಆರ್. ಅವರು ಸ್ವಂತ ಖರ್ಚಿನಲ್ಲಿ ಸ್ಥಾಪಿಸಿದ್ದಾರೆ. ಶಾಲೆ ಮುಕ್ತಾಯಗೊಂಡ ಬಳಿಕ ಅರ್ಧ ತಾಸು ಮಕ್ಕಳು ಅತ್ಯಂತ ಉತ್ಸಾಹದಿಂದ ಇಲ್ಲಿ ಕನ್ನಡ ಕಲಿಯುತ್ತಾರೆ.ಮೂರು ವರ್ಷಗಳ ಹಿಂದೆ ಕೊಠಡಿಯೊಂದರಲ್ಲಿ ಆರಂಭವಾದ ಈ ಪ್ರಯೋಗಾಲಯದಲ್ಲಿ ವಿಜಯಕುಮಾರ್ ಅವರೇ ಕಲಿಕೋಪಕರಣಗಳನ್ನು ಬರೆದು, ಗೋಡೆಗಳ ಮೇಲೆ ಕಲಾತ್ಮಕವಾಗಿ ಜೋಡಿಸಿದ್ದಾರೆ. ಕನ್ನಡ ಸಾಹಿತ್ಯದ ಐತಿಹಾಸಿಕ ಪಯಣ, ವ್ಯಾಕರಣಾಂಶ, ನಾಡಿನ ಸಾಧಕರ ವಿವರ ಹಾಗೂ 50ಕ್ಕೂ ಹೆಚ್ಚು ಉಪಯುಕ್ತ ಪುಸ್ತಕಗಳ ಸಂಗ್ರಹ ಇಲ್ಲಿದೆ. ‘ಮಕ್ಕಳಿಗೆ ಭಾಷೆಯನ್ನು ಕೇವಲ ಸೈದ್ಧಾಂತಿಕವಾಗಿ ಕಲಿಸದೇ, ನಿತ್ಯ ಜೀವನದಲ್ಲಿ ಪ್ರಯೋಗಾತ್ಮಕವಾಗಿ ಬಳಸುವಂತಾಗಬೇಕು ಎಂಬ ಉದ್ದೇಶದಿಂದ ಈ ಪ್ರಯೋಗಾಲಯ ಆರಂಭಿಸಲಾಯಿತು. ಇದು ಮಕ್ಕಳ ಭಾಷಾ ಕಲಿಕೆಯಲ್ಲಿ ಅದ್ಭುತ ಬದಲಾವಣೆ ತಂದಿದೆ’ ಎಂದು ಶಿಕ್ಷಕ ವಿಜಯಕುಮಾರ ಡಿ.ಆರ್. ತಿಳಿಸಿದರು. ಎಪಿಎಂಸಿಯಲ್ಲಿ ‘ಕನ್ನಡದ ಆರಾಧನೆ’ ಶ್ರೀಶೈಲ ಎಂ. ಕುಂಬಾರಗಜೇಂದ್ರಗಡ: ಪಟ್ಟಣದ ಉಪ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವರ್ತಕರು, ಖರೀದಿದಾರರು ದೈನಂದಿನ ವ್ಯವಹಾರಗಳಲ್ಲಿ ಕನ್ನಡದ ಅಂಕಿಗಳನ್ನೇ ಬಳಸುತ್ತಿರುವುದು ವಿಶೇಷ.ಕನ್ನಡದ ಅಂಕಿಗಳನ್ನು ಕಾಣುವುದೇ ಅಪರೂಪ ಆಗಿರುವ ಈ ಕಾಲಘಟ್ಟದಲ್ಲಿ, ಇಲ್ಲಿ ನಿತ್ಯವೂ ಕನ್ನಡ ಅಂಕಿಗಳ ಆರಾಧನೆ ಜರುಗುತ್ತಿದೆ. ಖರೀದಿದಾರರು ಖಾತೆ ಪುಸ್ತಕದಲ್ಲಿ, ಟೆಂಡರ್ನಲ್ಲಿ ನಮೂದಿಸಿದ ದರದ ವಿವರ, ರೈತರಿಗೆ ಪಾವತಿಸಬೇಕಾದ ಮೊತ್ತವನ್ನು ಕನ್ನಡದ ಅಂಕಿಯಲ್ಲೇ ಬರೆಯುತ್ತಾರೆ. ಕೆಲವು ಕಿರಾಣಿ ಅಂಗಡಿಗಳಲ್ಲೂ ಕನ್ನಡ ಅಂಕಿಗಳನ್ನೇ ಬಳಸಲಾಗುತ್ತಿದೆ.‘ಎಪಿಎಂಸಿಯಲ್ಲಿ 16 ವರ್ಷಗಳಿಂದ ನಿತ್ಯ ವ್ಯವಹಾರದಲ್ಲಿ ಕನ್ನಡ ಅಂಕಿಗಳನ್ನೇ ಬಳಸುತ್ತೇವೆ. ಬೇರೆಡೆ ಹೋದಾಗ ಕನ್ನಡ ಹಾಗೂ ಇಂಗ್ಲಿಷ್ ಬಳಸುತ್ತೇವೆ’ ಎಂದು ಎಪಿಎಂಸಿ ವರ್ತಕ ಮಹಾಂತೇಶ ಪೂಜಾರ ಹೇಳಿದರು. ಕನ್ನಡಕ್ಕಾಗಿ ಟೊಂಕ ಕಟ್ಟಿ ನಿಂತ ಮಠ ಬಸವರಾಜ ಹಲಕುರ್ಕಿನರಗುಂದ: ಅಧ್ಯಾತ್ಮ ಪ್ರಸಾರದೊಂದಿಗೆ ಕನ್ನಡ ಭಾಷೆ, ನೆಲ, ಜಲದ ಉಳಿವಿಗಾಗಿ ನಿರಂತರ ಸೇವೆ ಸಲ್ಲಿಸುತ್ತಿದೆ ತಾಲ್ಲೂಕಿನ ಭೈರನಹಟ್ಟಿ ಯ ದೊರೆಸ್ವಾಮಿ ವಿರಕ್ತಮಠ.ಈ ಮಠದಲ್ಲಿ ಪಂಚಲೋಹದ ಭುವನೇಶ್ವರಿ ಮೂರ್ತಿಗೆ ನಿತ್ಯ ಪೂಜೆ ಜರುಗುತ್ತದೆ. ವರ್ಷದುದ್ದಕ್ಕೂ ಕನ್ನಡದ ಕಾರ್ಯಕ್ರಮಗಳು ನಡೆಯುತ್ತವೆ. ಪ್ರತಿವರ್ಷ ನವೆಂಬರ್ 1ರಂದು ಕನ್ನಡದ ರಥ ಎಳೆಯುದು ಇಲ್ಲಿನ ವಿಶೇಷ.ಕನ್ನಡ ಭಾಷೆ, ನೆಲ, ಜಲಕ್ಕೆ ಕುಂದುಂಟಾದಾಗ ಮೊದಲ ಧ್ವನಿ ಎತ್ತುವುದು ಇಲ್ಲಿನ ಶಾಂತಲಿಂಗ ಶ್ರೀಗಳು. ಕನ್ನಡದ ಸ್ವಾಮೀಜಿ ಎಂದೇ ಪ್ರಾಖ್ಯಾತರಾದ ಅವರು ಭುವನೇಶ್ವರಿಗೆ ಪೂಜೆ ಸಲ್ಲಿಸಿ, ಮಠದ ಮೇಲೆ ಕನ್ನಡ ಬಾವುಟ ಹಾರಿಸುತ್ತಾರೆ. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನಕ್ಕಾಗಿ ಪಾದಯಾತ್ರೆ, ವಿಶೇಷ ಉಪನ್ಯಾಸಗಳ ಮೂಲಕ ಕನ್ನಡದ ಸೌಗಂಧ ಪಸರಿಸುತ್ತಿದ್ದಾರೆ.261102-23-1786979914