ಕನ್ನಡವೇ ಸತ್ಯ
ರಾಜ್ಯೋತ್ಸವದ ದಿನ ಬೆಂಗಳೂರಲ್ಲಿ ಕನ್ನಡ ಎಷ್ಟು ಉಳಿದದೆ ನೋಡುಮಾ ಅಂತ ನಾನು, ತಿಪ್ಪಣ್ಣ ಕೋರಮಂಗಲ, ಎಲೆಕ್ಟ್ರಾನಿಕ್ ಸಿಟಿ, ಬೆಳ್ಳಂದೂರು, ವೈಟ್ಫೀಲ್ಡಿಂದ ಬ್ರಿಗೇಡ್ ರೋಡಿಗೆ ಬಂದೋ. ಎಲ್ಲಾ ಕಡೆ ಬ್ರೋ, ಎನ್ನಡ, ಎಕ್ಕಡವೇ ಕೇಳ್ತಿತ್ತು. ಮಹಾತ್ಮ ಗಾಂಧಿ ರಸ್ತೇಲೂ ಕನ್ನಡದ ಸೊಲ್ಲೇ ಇಲ್ಲ.‘ಇದೇನ್ಲಾ ಇಂಗ್ಲಿಷಿಂದೇ ಕಾರುಬಾರಾಗ್ಯದೆ. ಬಾ ಕಾಫಿನಾದ್ರೂ ಕುಡಿಮಾ’ ಅಂದುದ್ಕೆ

ರಾಜ್ಯೋತ್ಸವದ ದಿನ ಬೆಂಗಳೂರಲ್ಲಿ ಕನ್ನಡ ಎಷ್ಟು ಉಳಿದದೆ ನೋಡುಮಾ ಅಂತ ನಾನು, ತಿಪ್ಪಣ್ಣ ಕೋರಮಂಗಲ, ಎಲೆಕ್ಟ್ರಾನಿಕ್ ಸಿಟಿ, ಬೆಳ್ಳಂದೂರು, ವೈಟ್ಫೀಲ್ಡಿಂದ ಬ್ರಿಗೇಡ್ ರೋಡಿಗೆ ಬಂದೋ. ಎಲ್ಲಾ ಕಡೆ ಬ್ರೋ, ಎನ್ನಡ, ಎಕ್ಕಡವೇ ಕೇಳ್ತಿತ್ತು. ಮಹಾತ್ಮ ಗಾಂಧಿ ರಸ್ತೇಲೂ ಕನ್ನಡದ ಸೊಲ್ಲೇ ಇಲ್ಲ.‘ಇದೇನ್ಲಾ ಇಂಗ್ಲಿಷಿಂದೇ ಕಾರುಬಾರಾಗ್ಯದೆ. ಬಾ ಕಾಫಿನಾದ್ರೂ ಕುಡಿಮಾ’ ಅಂದುದ್ಕೆ ತಿಪ್ಪಣ್ಣ ‘ನಾನೇ ಕನ್ನಡಕ್ಕೆ ಹೋರಾಡತೀನಿ. ಕನ್ನಡಕ್ಕಾಗಿ ಕೈ ಎತ್ತು’ ಅಂದ್ಕಂದು ಕೈ ಎತ್ತನು ಇಳುಕನು. ಅವನ್ನ ಕರಕಂದು ಒಂದು ಹೋಟೆಲಿಗೋದೆ.‘ಹಲೋ ಸರ್, ವಾಟ್ ವುಡ್ಯೂ ಲೈಕ್ ಟು ಹ್ಯಾವ್?’ ಸರ್ವರ್ ಕೇಳಿದ.‘ಒಳ್ಳೇ ಮಸಾಲೆದೋಸೆ, ಫಿಲ್ಟರ್ ಕಾಫಿ ತಕ್ಕ ಬಯಾ’ ಅಂತಂದೆ.‘ಅರೇ ಸರ್, ಹಿಂದಿ ಯಾ ಇಂಗ್ಲಿಷ್ ಮೇ ಬೋಲೋ. ಕನ್ನಡ್ ನೈ ಆತಾ. ಹಿಯರ್ ಓನ್ಲಿ ಪಿಜ್ಜಾ, ಪಾಸ್ಟಾ, ಕ್ಯಪುಚಿನೋ, ಲಟ್ಟೆ ಕಾಫಿ ಅವೇಲಬಲ್’ ಅಂದ ಸರ್ವರ್. ಕಪ್ಪೆಚಿಪ್ಪು, ಲೊಟ್ಟೆ ಸಾವಾಸವೇ ಬ್ಯಾಡ ಅಂತ ಆಚೆಗೆ ಬಂದೋ.‘ಬಫರ್ ಆಯ್ತಿದ್ದೀರಾ ಬ್ರೋ? ಬೆಂಗಳೂರಲ್ಲಿ ಎಲ್ಲಾ ಕೆಲಸಕ್ಕೂ ನೇಪಾಳಿ, ಅಸ್ಸಾಮಿಗಳೇ ಬಂದು ಕನ್ನಡದೋರಿಗೆ ಯಾವ ಕೆಲಸವು ಸಿಕ್ತಿಲ್ಲ ಅಂತ ಮಸೂದೆ ತಂದ್ರೆ ಆದದೇ? ಭಾಷೆ ಲ್ಯಾಗ್ ಆಗಬಾರದು’ ಅಂತ ಅಲ್ಲಿದ್ದ ಫ್ರೆಂಚ್ ಗಡ್ಡದೋರು ಭಾಷೆಯ ದಿಕ್ಸೂಚಿಯನ್ನು ತೆರೆದಿಟ್ಟರು. ಅಲ್ಲೊಂದ್ಕಡೆ ಗಂಡೈಕ್ಳು, ಹೆಣ್ಣೈಕ್ಳು ಮೋಟು ಚಡ್ಡಿ ಇಕ್ಕ್ಯಂದು ಚಟ್ಟೆಕಾರರ ಥರಾ ಟಸ್ಸಾ ಪುಸ್ಸಾ ಅಂತ ಜೆನ್ ಝೀ ಇಂಗ್ಲಿಷಲ್ಲೇ ಕೊಸೀತಿದ್ರು.‘ನೋ ಕ್ಯಾಪ್. ಕನ್ನಡ ರೀಬೂಟಾಗಬೇಕು ಬ್ರೋ. ಕನ್ನಡ ಲೋಕೀ ಅಲ್ಲ, ವರ್ಷವೆಲ್ಲಾ ಹೈಕೀ ಆಗಿರಬೇಕು. ಲೆಟ್ಸ್ ಲೂಪ್ ಇಟ್’ ಅಂತ ನಾನು ಕನ್ನಡದಲ್ಲೇ ವ್ಯಥೆಯಿಂದ ನಕ್ಕುಬುಟ್ಟೆ ಕನ್ರಿ. ತಿಪ್ಪಣ್ಣ ನನ್ನ ವೈಬ್ ನೋಡಿ ಗಾಬರಿಯಿಂದ ಬ್ರೈನು ಹ್ಯಾಂಗಾಗಿ ಬುಟ್ಟಬಾಯಿ ಮುಚ್ಚಲೇ ಇಲ್ಲ.