VIDEO: ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ಬಿಗ್ ಬಾಸ್ 6ರ ವಿಜೇತ ಶಶಿಕುಮಾರ್ ದಂಪತಿ
ಬಿಗ್ ಬಾಸ್ ಸೀಸನ್ 6ರ ವಿಜೇತ, ರೈತ ಶಶಿಕುಮಾರ್ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಂತಸದ ಸುದ್ದಿಯನ್ನು ಶಶಿಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ವಿಶೇಷ ವಿಡಿಯೊ ಹಂಚಿಕೊಳ್ಳುವ ಮೂಲಕ ಬಹಿರಂಗಪಡಿಸಿದ್ದಾರೆ.‘ದೇವರ ಆಶೀರ್ವಾದದಿಂದ ನಮ್ಮ ಪಯಣದಲ್ಲಿ ಹೊಸ ಅಧ್ಯಾಯವೊಂದು ಆರಂಭವಾಗುತ್ತಿದೆ. ತಂದೆಯಾಗುವ ಈ ಕ್ಷಣವನ್ನು ಹಾಗೂ ಶೀಘ್ರದಲ್ಲೇ ಆಗಮಿಸಲಿರುವ

ಬಿಗ್ ಬಾಸ್ ಸೀಸನ್ 6ರ ವಿಜೇತ, ರೈತ ಶಶಿಕುಮಾರ್ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಂತಸದ ಸುದ್ದಿಯನ್ನು ಶಶಿಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ವಿಶೇಷ ವಿಡಿಯೊ ಹಂಚಿಕೊಳ್ಳುವ ಮೂಲಕ ಬಹಿರಂಗಪಡಿಸಿದ್ದಾರೆ.‘ದೇವರ ಆಶೀರ್ವಾದದಿಂದ ನಮ್ಮ ಪಯಣದಲ್ಲಿ ಹೊಸ ಅಧ್ಯಾಯವೊಂದು ಆರಂಭವಾಗುತ್ತಿದೆ. ತಂದೆಯಾಗುವ ಈ ಕ್ಷಣವನ್ನು ಹಾಗೂ ಶೀಘ್ರದಲ್ಲೇ ಆಗಮಿಸಲಿರುವ ಪುಟ್ಟ ಕಂದಮ್ಮನನ್ನು ಬರಮಾಡಿಕೊಳ್ಳಲು ಕಾಯುತ್ತಿದ್ದೇವೆ’ ಎಂದು ಅವರು ಬರೆದುಕೊಂಡಿದ್ದಾರೆ.ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಪಟ್ಟಕ್ಕಾಗಿ ತಾಂಡವ್, ಜಗದೀಶ್ ಮಧ್ಯೆ ತೀವ್ರ ಪೈಪೋಟಿಬಿಗ್ ಬಾಸ್ ಮನೆಯಿಂದ ಕುಮಾರಿ ಹೊರಬರುತ್ತಿದ್ದಂತೆ ಕಣ್ಣೀರಿಟ್ಟ ಕಿರಣ್ ಶಾಸ್ತ್ರಿ View this post on Instagram ಶಶಿ ಕುಮಾರ್ ಅವರ ಪತ್ನಿ ಸ್ವಾತಿ ಅವರಿಗೆ ಅದ್ದೂರಿಯಾಗಿ ಸೀಮಂತ ಶಾಸ್ತ್ರ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಶಶಿಕುಮಾರ್ ಹಾಗೂ ಸ್ವಾತಿ ಅವರು ತುಂಬಾ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಶಶಿ ಅವರು ತಂದೆಯಾಗುವ ಖುಷಿಯಲ್ಲಿದ್ದರೆ, ಸ್ವಾತಿ ಅವರು ತಾಯ್ತನದ ಸುಖ ಅನುಭವಿಸುತ್ತಿದ್ದಾರೆ.ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು, ಸ್ನೇಹಿತರು ಹಾಗೂ ನೆಟ್ಟಿಗರು ದಂಪತಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಶಶಿ ಕುಮಾರ್ ಅವರು 2022ರ ಆಗಸ್ಟ್ 7ರಂದು ಸ್ವಾತಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸದ್ಯ ಈ ಜೋಡಿ ತಮ್ಮ ಮೊದಲ ಮಗುವಿನ ಆಗಮನದ ಖುಷಿಯಲ್ಲಿದೆ.