‘ಮನ್ನತ್’ ಎದುರು ಜಮಾಯಿಸಿದ್ದ ಅಭಿಮಾನಿಗಳಿಗೆ ನಟ ಶಾರುಕ್ ಖಾನ್ ಕೈಬರಹದ ಸಂದೇಶ
ಬಾಲಿವುಡ್ ನಟ ಶಾರುಕ್ ಖಾನ್ ಅವರು ಇಂದು (ನವೆಂಬರ್ 2) 61ನೇ ವಸಂತಕ್ಕೆ ಕಾಲಿಟ್ಟಿದ್ದು, ದೇಶದಾದ್ಯಂತ ಅಭಿಮಾನಿಗಳು ಅವರ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಶುಭ ಹಾರೈಸುತ್ತಿದ್ದಾರೆ.ಪ್ರತಿ ವರ್ಷದಂತೆ ಈ ಬಾರಿಯೂ ನೂರಾರು ಅಭಿಮಾನಿಗಳು ಮಧ್ಯರಾತ್ರಿಯೇ ಮುಂಬೈನಲ್ಲಿರುವ ಶಾರುಕ್ ಅವರ ಮನ್ನತ್ ನಿವಾಸದ ಮುಂದೆ ಜಮಾಯಿಸಿದ್ದರು. ಈ ವೇಳೆ ತಮ್ಮ ಮನೆಯ ಹೊರಭಾಗ

ಬಾಲಿವುಡ್ ನಟ ಶಾರುಕ್ ಖಾನ್ ಅವರು ಇಂದು (ನವೆಂಬರ್ 2) 61ನೇ ವಸಂತಕ್ಕೆ ಕಾಲಿಟ್ಟಿದ್ದು, ದೇಶದಾದ್ಯಂತ ಅಭಿಮಾನಿಗಳು ಅವರ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಶುಭ ಹಾರೈಸುತ್ತಿದ್ದಾರೆ.ಪ್ರತಿ ವರ್ಷದಂತೆ ಈ ಬಾರಿಯೂ ನೂರಾರು ಅಭಿಮಾನಿಗಳು ಮಧ್ಯರಾತ್ರಿಯೇ ಮುಂಬೈನಲ್ಲಿರುವ ಶಾರುಕ್ ಅವರ ಮನ್ನತ್ ನಿವಾಸದ ಮುಂದೆ ಜಮಾಯಿಸಿದ್ದರು. ಈ ವೇಳೆ ತಮ್ಮ ಮನೆಯ ಹೊರಭಾಗದಲ್ಲಿ ಪ್ರೊಜೆಕ್ಟರ್ ಮೂಲಕ ಕೈಬರಹದ ವಿಶೇಷ ಸಂದೇಶವೊಂದನ್ನು ಪ್ರದರ್ಶಿಸುವ ಮೂಲಕ ಶಾರುಕ್ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದರು.To the hearts that made him KING, a lot of love in return ❤️ #LoveLikeAKING #KING in cinemas on 24.12.2026 pic.twitter.com/q5eTCfOUz3— Red Chillies Entertainment (@RedChilliesEnt) November 1, 2026 ಶಾರುಕ್ ಅವರ ಕೈಬರಹದ ಸಂದೇಶದಲ್ಲಿ ಏನಿತ್ತು?‘ನಿಮ್ಮೆಲ್ಲರ ಅಪಾರ ಪ್ರೀತಿ ಹಾಗೂ ಶುಭಾಶಯಗಳಿಗೆ ನನ್ನ ಧನ್ಯವಾದಗಳು. ನನ್ನ ಕಡೆಯಿಂದಲೂ ನಿಮಗೂ ಅಷ್ಟೇ ಪ್ರೀತಿಯನ್ನು ಕಳುಹಿಸುತ್ತಿದ್ದೇನೆ’ ಎಂದು ಅವರು ಬರೆದುಕೊಂಡಿದ್ದಾರೆ.ಶಾರುಕ್ ಖಾನ್ ಕೇವಲ ನಟನೆಯಲ್ಲಷ್ಟೇ ಅಲ್ಲದೆ, ಉದ್ಯಮ ಕ್ಷೇತ್ರದಲ್ಲೂ ಕಿಂಗ್ ಎನಿಸಿಕೊಂಡಿದ್ದಾರೆ. ‘ರೆಡ್ ಚಿಲ್ಲೀಸ್’ ನಿರ್ಮಾಣ ಸಂಸ್ಥೆ, ‘ಕೆಕೆಆರ್’ ಐಪಿಎಲ್ ಕ್ರಿಕೆಟ್ ತಂಡ, ಜಾಹೀರಾತುಗಳು ಹಾಗೂ ರಿಯಲ್ ಎಸ್ಟೇಟ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿರುವ ಅವರ ಒಟ್ಟು ಆಸ್ತಿ ಮೌಲ್ಯ ಬರೋಬ್ಬರಿ ₹10 ಸಾವಿರ ಕೋಟಿ ಎಂದು ಅಂದಾಜಿಸಲಾಗಿದೆ.